RIPPONPETE | ತಮ್ಮಡಿಕೊಪ್ಪದಲ್ಲಿ ಪ್ರಿಯಕರನೊಂದಿಗೆ ವಿಷ ಸೇವಿಸಿ ಮಹಿಳೆ ಸಾವು – ಅನೈತಿಕ ಸಂಬಂಧಕ್ಕೆ ಇಬ್ಬರು ಮಕ್ಕಳು ಅನಾಥ !
RIPPONPETE | ತಮ್ಮಡಿಕೊಪ್ಪದಲ್ಲಿ ಪ್ರಿಯಕರನೊಂದಿಗೆ ವಿಷ ಸೇವಿಸಿ ಮಹಿಳೆ ಸಾವು – ಅನೈತಿಕ ಸಂಬಂಧಕ್ಕೆ ಇಬ್ಬರು ಮಕ್ಕಳು ಅನಾಥ !
RIPPONPETE | ತಮ್ಮಡಿಕೊಪ್ಪದಲ್ಲಿ ಪ್ರಿಯಕರನೊಂದಿಗೆ ವಿಷ ಸೇವಿಸಿ ಮಹಿಳೆ ಸಾವು – ಅನೈತಿಕ ಸಂಬಂಧಕ್ಕೆ ಇಬ್ಬರು ಮಕ್ಕಳು ಅನಾಥ !
ರಿಪ್ಪನ್ ಪೇಟೆ : ಪತಿಯಿಂದ ದೂರವಾಗಿದ್ದ ವಿವಾಹಿತೆ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಇಬ್ಬರು ಮಕ್ಕಳನ್ನು ಅನಾಥರನ್ನಾಗಿಸಿದ ಹೃದಯವಿದ್ರಾವಕ ಘಟನೆ ಸಮೀಪದ ತಮ್ಮಡಿಕೊಪ್ಪದಲ್ಲಿ ನಡೆದಿದೆ.
ತಮ್ಮಡಿಕೊಪ್ಪ ಗ್ರಾಮದ ಸುಜಾತ (33) ಆಯನೂರು ಕೋಟೆ ಗ್ರಾಮದ ಸಚಿನ್ (27) ಮೃತ ದುರ್ಧೈವಿಯಾಗಿದ್ದಾರೆ.
ಮದುವೆಯಾಗಿ 14 ವರ್ಷವಾಗಿದ್ದ ವಿವಾಹಿತ ಮಹಿಳೆಯೊಬ್ಬಳು ಪತಿ ಕಳೆದ ಹಲವು ವರ್ಷಗಳಿಂದ ಪತಿ ನಾಪತ್ತೆಯಾಗಿದ್ದ ಕಾರಣ ಮತ್ತೋರ್ವ ಗಂಡಸಿನ ಆಶ್ರಯ ಬಯಸಿದ್ದಳು.ಆದರೆ ಅದೇ ಯುವಕನೊಂದಿಗೆ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸುಜಾತ (33) ಎಂಬ ಮಹಿಳೆಗೆ 14 ವರ್ಷದ ಹಿಂದೆ ಮದುವೆಯಾಗಿತ್ತು. ಎರಡು ಮಕ್ಕಳಿದ್ದರು. ಗಂಡ ದಿಡೀರ್ ಎಂದು ನಾಪತ್ತೆಯಾದ ಬೆನ್ನಲ್ಲೇ ಆತ ಕಳೆದ ಮೂರು ನಾಲ್ಕು ವರ್ಷದಿಂದ ಸಂಪರ್ಕಕ್ಕೆ ಬಂದಿಲ್ಲ. ಬೆಳಗಾವಿಯಲ್ಲಿದ್ದ ಸುಜಾತ ಮೂರು ನಾಲ್ಕು ವರ್ಷದ ಹಿಂದೆ ಶಿವಮೊಗ್ಗದ ರಿಪ್ಪನ್ ಪೇಟೆಯ ತಮ್ಮಡಿಕೊಪ್ಪದಲ್ಲಿರುವ ತವರು ಮನೆಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು.
ಗಂಡ ಬಿಟ್ಟು ಎರಡು ಮೂರು ವರ್ಷ ಆಗಿತ್ತು. ಅಪರಿಚಿತ ಮೊಬೈಲ್ ಕರೆಯಿಂದ ಆಯನೂರು ಕೋಟೆ ಗ್ರಾಮದಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಸಚಿನ್ ಸುಜಾತಳ ಸಂಪರ್ಕಕ್ಕೆ ಬಂದಿದ್ದ. ಸಂಪರ್ಕ ಸ್ನೇಹವಾಗಿ ಸಲುಗೆಗೆ ತಿರುಗಿದೆ. ಇವಳ ಕಷ್ಟವನ್ನು ಅರಿತ ಯುವಕ ಬಾಳು ನೀಡುವ ಸಲುವಾಗಿ ಕಳೆದ ಒಂದು ವಾರದಿಂದ ಸುಜಾತಳ ಜೊತೆ ಬಂದು ವಾಸವಾಗಿದ್ದ.
ಕಲ್ಮನೆಯಲ್ಲಿದ್ದ ಸುಜಾತಳ ಸಹೋದರಿ ಗೀತಾ ಎಂಬುವವರು ರಿಪ್ಪನ್ ಪೇಟೆಯಲ್ಲಿ ತಮ್ಮ ಮಕ್ಕಳು ಶಾಲೆಗೆ ಸೇರಿಸಲು ಬಂದಿದ್ದರು. ಆಗ ರೆಡ್ ಹ್ಯಾಂಡ್ ಆಗಿ ಪತ್ತೆಯಾಗಿದ್ದ ಸಚಿನ್ ಗೆ ಬುದ್ದಿವಾದ ಹೇಳಲಾಗಿತ್ತು. ಬುದ್ದಿವಾದ ಹೇಳಿ ಸಹೋದರಿ ಇತ್ತ ಬರುತ್ತಿದ್ದಂತೆ ನಿನ್ನೆ ಬೆಳಿಗ್ಗೆ ಸುಜಾತ ಮತ್ತು ಸಚಿನ್ ಕಳೆ ನಾಶಕವನ್ನ ಕುಡಿದಿದ್ದಾರೆ.
ಸಚಿನ್ ಸುಜಾತಳಿಗೆ ಬಲವಂತವಾಗಿ ಕುಡಿಸಿ ಸಾಯಿಸಿರುವುದಾಗಿ ಸುಜಾತಳ ಕುಟುಂಬ ಆರೋಪಿಸಿದೆ. ಸಚಿನ್ ಸುಜಾತಳಿಗೆ ಬಲವಂತವಾಗಿ ವಿಷ ಕುಡಿಸಿ ಕೊಲೆಗೈದು ಆ ನಂತರ ಆತ ವಿಷ ಕುಡಿದಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇಬ್ಬರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ 11-50 ಕ್ಕೆ ಮೆಗ್ಗಾನ್ ನಲ್ಲಿ ಇಬ್ಬರೂ ಜೀವ ಕಳೆದುಕೊಂಡಿದ್ದಾರೆ.
ಒಟ್ಟಾರೆಯಾಗಿ ಅನೈತಿಕ ಸಂಬಂಧಕ್ಕೆ ಇಬ್ಬರು ಮಕ್ಕಳು ಆ ಕಡೆ ಅಪ್ಪನೂ ಇಲ್ಲದೇ ಈ ಕಡೇ ಅಮ್ಮನೂ ಇಲ್ಲದೇ ಅನಾಥರಾಗಿದ್ದಾರೆ.
ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…
ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…
ಪೊಲೀಸರ ದಿಢೀರ್ ದಾಳಿ – ಅಕ್ರಮ ಕಸಾಯಿ ಖಾನೆಯಿಂದ ಮಾಂಸ ವಶಕ್ಕೆ , ಪ್ರಕರಣ ದಾಖಲು Police conduct a…
ರಿಪ್ಪನ್‌ಪೇಟೆ ಸರ್ಕಾರಿ ಶಾಲೆ ಶತಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿ ನಿರೂಪ್ ಕುಮಾರ್ , ಕಾರ್ಯಾಧ್ಯಕ್ಷರಾಗಿ ಸುರೇಶ್ ಸಿಂಗ್ ಆಯ್ಕೆ Ripponpete Government…
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…
ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…