IIFL ಫೈನಾನ್ಸ್ ನಿಂದ ಮೋಸ ಆರೋಪ – ಕಛೇರಿಗೆ ಬೀಗ ಜಡಿದ ಗ್ರಾಹಕ
IIFL ಫೈನಾನ್ಸ್ ನಿಂದ ಮೋಸ ಆರೋಪ – ಕಛೇರಿಗೆ ಬೀಗ ಜಡಿದ ಗ್ರಾಹಕ
IIFL ಫೈನಾನ್ಸ್ ನಿಂದ ಮೋಸ ಆರೋಪ – ಕಛೇರಿಗೆ ಬೀಗ ಜಡಿದ ಗ್ರಾಹಕ
ರಿಪ್ಪನ್ ಪೇಟೆ : ಇಲ್ಲಿನ ಐಐಎಫ಼್ಎಲ್ ಗೋಲ್ಡ್ ಫೈನಾನ್ಸ್ ನಲ್ಲಿ ಗ್ರಾಹಕನೊಬ್ಬನಿಗೆ ಮೋಸವಾಗಿದೆ ಎಂದು ಆರೋಪಿಸಿ ಇಂದು ಕಛೇರಿಯಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತಿದ್ದಾಗಲೇ ಬೀಗ ಜಡಿದು ಕಛೇರಿ ಮುಂದೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ರಿಪ್ಪನ್ ಪೇಟೆ ಸಮೀಪದ ಕಾರಗೋಡು ನಿವಾಸಿ ಗಣೇಶ್ ಎಂಬಾತ IIFL ಫೈನಾನ್ಸ್ ನಲ್ಲಿ ಎರಡು ತಿಂಗಳ ಹಿಂದೆ ಬಂಗಾರವನ್ನು ಅಡವಿಟ್ಟಿದ್ದು ದಿನಾಂಕ 21-04-2025 ರಂದು ಬಿಡಿಸಲು ಹೋಗಿದ್ದಾನೆ ಈ ಸಂಧರ್ಭದಲ್ಲಿ ಬಂಗಾರ ಬಿಡಿಸಲು ಒಂದು ಲಕ್ಷದ ಒಂಬತ್ತು ಸಾವಿರ ರೂ ಗಳನ್ನು ಸ್ಥಳೀಯ ಕಛೇರಿಯ ಸಿಬ್ಬಂದಿಗಳು ಸೂಚಿಸಿ ಸ್ಕ್ಯಾನರ್ ಗೆ ಆನ್ ಲೈನ್ ಮೂಲಕ ಕಂಪನಿಯ ಅಕೌಂಟ್ ಗೆ ಕಳುಹಿಸಿದ್ದಾನೆ ಈ ಸಂಬಂಧ ಮೊಬೈಲ್ ಆಪ್ ನಲ್ಲಿ ಸಹ ಪಾವತಿಯಾಗಿದೆ ಎಂದು ಬಂದಿದೆ.
ಅಷ್ಟು ಹಣ ಪಾವತಿಸಿದ್ದರೂ ಸ್ಥಳೀಯ ಫೈನಾನ್ಸ್ ಸಿಬ್ಬಂದಿಗಳು ಬಂಗಾರ ಕೊಡಲು ಒಪ್ಪಲಿಲ್ಲ ಯಾಕೆಂದು ಕೇಳಿದಾಗ ನೀವು ಕಳುಹಿಸಿದ ಹಣ ನಮ್ಮ ಸಿಸ್ಟಮ್ ನಲ್ಲಿ ತೋರಿಸುತಿಲ್ಲ ಎಂದು ಸಬೂಬು ಹೇಳಿದ್ದಾರೆ ಗ್ರಾಹಕ ಗಣೇಶ್ ಸಿಬ್ಬಂದಿಗಳ ಬಳಿ ಅಂಗಲಾಚಿ ಕೇಳಿದರೂ ಸಹ ಅವರು ಕೊಡಲು ಸಾಧ್ಯವೇ ಇಲ್ಲ ನಿಮ್ಮ ಹಣ ಎಲ್ಲೋ ಬ್ಲಾಕ್ ಆಗಿದೆ ನಿಮ್ಮ ಅಕೌಂಟ್ ಗೆ ಅದು ವಾಪಾಸ್ ಬರುತ್ತೆ ಎಂದು ಹೇಳಿ ಸಾಗಹಾಕಿದ್ದಾರೆ.
ಕುಟುಂಬದ ಕಾರ್ಯಕ್ರಮವಿದ್ದ ಹಿನ್ನಲೆಯಲ್ಲಿ ಅದೇ ದಿನ ಗ್ರಾಹಕ ಗಣೇಶ್ ಸ್ನೇಹಿತರ ಬಳಿ ಮತ್ತೆ ಒಂದು ಲಕ್ಷದ ಒಂಬತ್ತು ಸಾವಿರೂ ಹೊಂಚಿಕೊಂಡು ಬಂದು ಬಂಗಾರ ಬಿಡಿಸಿದ್ದಾನೆ ನಂತರ ಹಣ ವಾಪಾಸು ಯಾವಾಗ ಬರುತ್ತೆ ಎಂದು ವಿಚಾರಿಸಿದಾಗ ಒಂದೆರಡು ದಿನಗಳಲ್ಲಿ ಬರುತ್ತೆ ಎಂದು ಹೇಳಿ ಸಾಗಹಾಕಿದ್ದಾರೆ.
ಹೀಗೆ ಕಳೆದ ಹದಿನೈದು ದಿನಗಳಿಂದ ಫೈನಾನ್ಸ್ ಗೆ ಓಡಾಡುತಿದ್ದ ಗ್ರಾಹಕನಿಗೆ ಸುಮ್ಮನೆ ಸಬೂಬು ಹೇಳುತಿದ್ದಾರೆ ನಾಲ್ಕು ದಿನಗಳ ಹಿಂದೆ ನಿಮ್ಮ ಹಣ ನಮ್ಮ ಅಕೌಂಟ್ ಗೆ ಬಂದಿದೆ ನಿಮ್ಮ ಅಕೌಂಟ್ ನಂಬರ ಕಳಿಸಿ ಎಂದಿದ್ದಾರೆ ಆದರೆ ಇಲ್ಲಿವರೆಗೂ ಆ ಹಣ ಹಿಂದಿರುಗದೇ ಇರುವ ಕಾರಣ ರೊಚ್ಚಿಗೆದ್ದ ಗ್ರಾಹಕ ಗಣೇಶ್ ಸೋಮವಾರ ಕಛೇರಿಯಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತಿದ್ದಾಗಲೇ ಕಛೇರಿಗೆ ಬೀಗ ಜಡಿದು ಅಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾನೆ.
ನಂತರ IIFL ಫೈನಾನ್ಸ್ ನಿಂದ ಗ್ರಾಹಕ ಗಣೇಶ್ ಗೆ ಸಂಜೆ ಫೈನಾನ್ಸ್ ಸಿಬ್ಬಂದಿಗಳು ಪ್ರಾಮಿಸ್ ಲೆಟರ್ ಕೊಟ್ಟು ಸಾಗಹಾಕಿದ್ದಾರೆ. ಇನ್ನೂ ಈ ಬಗ್ಗೆ ಮೇಲಾಧಿಕಾರಿಗಳು ಏನು ಕ್ರಮ ಕೈಗೊಳ್ಳುತಾರೆ ಕಾದುನೋಡಬೇಕಾಗಿದೆ.
ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆಗೆ ಚಾಲನೆ - ಮಳೆಯಲ್ಲೂ ಮುಂದುವರಿದ ಪಾದಯಾತ್ರೆ MLA Belur Gopalakrishna and RM Manjunath…
ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟಕ್ಕೆ ಹೊಸನಗರ ತಾಲ್ಲೂಕು ವಕೀಲರ ಸಂಘದ ಸಂಪೂರ್ಣ ಬೆಂಬಲ Hosanagara Taluk Advocates Association extends…
ಅಕ್ರಮ ಬಂದೂಕಿನಿಂದ ಬೀದಿ ನಾಯಿಯ ಬರ್ಬರ ಹತ್ಯೆ - ಆರೋಪಿ ಅರೆಸ್ಟ್! Sagar police arrested a man accused…
ಉಚಿತ ಸೆಲ್‌ಫೋನ್ ರಿಪೇರಿ ತರಬೇತಿ: ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನ Free 31-day mobile phone repair training for…
ಹೊಸನಗರದಲ್ಲಿ ನಾಳೆ ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆ, ಬಹಿರಂಗ ಸಭೆ Farmers and agricultural workers will hold a…
ಸಾಗರ: ಕಸ್ತೂರಿ ರಂಗನ್ ವರದಿ ವಿರುದ್ಧ ರೈತರ ಆಕ್ರೋಶ; ಬ್ಯಾರಿಕೇಡ್ ಕಿತ್ತೆಸೆದು ಪ್ರತಿಭಟನೆ Farmers staged a massive protest…