ಅರಸಾಳುವಿನಲ್ಲಿ ಭೀಕರ ಬೈಕ್ ಅಪಘಾತ – ಯುವಕ ಸ್ಥಳದಲ್ಲಿಯೇ ಸಾವು

ಅರಸಾಳುವಿನಲ್ಲಿ ಭೀಕರ ಬೈಕ್ ಅಪಘಾತ – ಯುವಕ ಸಾವು

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಅರಸಾಳು ಕೆರೆ ಏರಿ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಅಪಘಾತವಾಗಿ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.

ಮೃತಪಟ್ಟ ಯುವಕನನ್ನು ಅರಸಾಳು ಗ್ರಾಮದ ಅನೂಪ್ ( 22) ಎಂದು ಗುರುತಿಸಲಾಗಿದೆ.

ಖಾಸಗಿ ಮೆಡಿಕಲ್ ಕಂಪನಿಯಲ್ಲಿ ರೆಪ್ ಆಗಿ ಕಾರ್ಯನಿರ್ವಹಿಸುತಿದ್ದ ಅನೂಪ್ ಕಾರ್ಯನಿಮಿತ್ತ ರಿಪ್ಪನ್ ಪೇಟೆಗೆ ತೆರಳಿ ಅರಸಾಳುವಿಗೆ ಹಿಂದಿರುಗುತಿದ್ದಾಗ ಅರಸಾಳು ಗ್ರಾಮದ ಕೆರೆ ಏರಿ ಮೇಲಿನ ಕಬ್ಬಿಣದ ತಡೆಗೋಡೆಗೆ ಬೈಕ್ ಡಿಕ್ಕಿಯಾಗಿದೆ. ಕೆರೆ ಏರಿ ಮೇಲೆ ಹೋಗುತ್ತಿರುವಾಗ ಎದುರಿನಿಂದ ಬಂದ ವಾಹನ ಸೈಡ್ ನೀಡದೇ ಇದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.

ಈ ಘಟನೆಯಲ್ಲಿ ಬೈಕ್ ನ ಹಿಂಬದಿ ಸವಾರನಿಗೂ ಕಾಲು ಮತ್ತು ಕೈಗೆ ಗಂಭೀರ ಗಾಯಗಳಾಗಿದೆ ಎನ್ನಲಾಗುತ್ತಿದೆ ಆತನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರಿಪ್ಪನ್ ಪೇಟೆ ಆಸ್ಪತ್ರೆಯಲ್ಲಿರಿಸಲಾಗಿದೆ.

ರಿಪ್ಪನ್ ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಗಣೇಶೋತ್ಸವ ಹಿನ್ನೆಲೆ: ಸೆ.4ರಂದು ರಿಪ್ಪನ್‌ಪೇಟೆಯಲ್ಲಿ ಎಎಸ್‌ಪಿ ಭಾನುಪ್ರಕಾಶ್ ನೇತೃತ್ವದಲ್ಲಿ ಶಾಂತಿ ಸಭೆ

ಗಣೇಶೋತ್ಸವ ಹಿನ್ನೆಲೆ: ಸೆ.4ರಂದು ರಿಪ್ಪನ್‌ಪೇಟೆಯಲ್ಲಿ ಎಎಸ್‌ಪಿ ಭಾನುಪ್ರಕಾಶ್ ನೇತೃತ್ವದಲ್ಲಿ ಶಾಂತಿ ಸಭೆ A peace meeting for Ganesh festival…

5 hours ago

ನೀರಿನಲ್ಲಿ ಅಡಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನ ; ಸಿನಿಮೀಯ ರೀತಿಯಲ್ಲಿ ರೌಡಿಶೀಟರ್‌ನನ್ನು ಬಂಧಿಸಿದ ಪೊಲೀಸರು

ನೀರಿನಲ್ಲಿ ಅಡಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನ ; ಸಿನಿಮೀಯ ರೀತಿಯಲ್ಲಿ ರೌಡಿಶೀಟರ್‌ನನ್ನು ಬಂಧಿಸಿದ ಪೊಲೀಸರು Bhadravathi police dramatically…

19 hours ago

ಅಜಾಗರೂಕ ಚಾಲನೆಯಿಂದ ಕೆರೆಗೆ ನುಗ್ಗಿದ ಲಾರಿ! ತಪ್ಪಿದ ಭಾರಿ ದುರಂತ

ಅಜಾಗರೂಕ ಚಾಲನೆಯಿಂದ ಕೆರೆಗೆ ನುಗ್ಗಿದ ಲಾರಿ! ತಪ್ಪಿದ ಭಾರಿ ದುರಂತ A container lorry allegedly driven recklessly under…

19 hours ago

ರಿಪ್ಪನ್‌ಪೇಟೆ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಅನಾಹುತ; ಡಿಸ್ಕಸ್ ತಲೆಗೆ ಬಿದ್ದು ಶಿಕ್ಷಕ ಗಂಭೀರ ಗಾಯ

ರಿಪ್ಪನ್‌ಪೇಟೆ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಅನಾಹುತ; ಡಿಸ್ಕಸ್ ತಲೆಗೆ ಬಿದ್ದು ಶಿಕ್ಷಕ ಗಂಭೀರ ಗಾಯ A physical education teacher…

1 day ago

ನೆಲ್ಲಿಬೀಡು ಟಿಪ್ಪರ್ – ಬೈಕ್ ಅಪಘಾತ: ಮಗಳ ಸಾವಿನ ಬಳಿಕ ಚಿಕಿತ್ಸೆ ಫಲಿಸದೆ ತಂದೆಯೂ ಮೃತ್ಯು

ನೆಲ್ಲಿಬೀಡು ಟಿಪ್ಪರ್ – ಬೈಕ್ ಅಪಘಾತ: ಮಗಳ ಸಾವಿನ ಬಳಿಕ ಚಿಕಿತ್ಸೆ ಫಲಿಸದೆ ತಂದೆಯೂ ಮೃತ್ಯು A tragic tipper-bike…

1 day ago

ಬಾಲಕ ಓಡಿಸಿದ ಬೊಲೆರೊ, ದಂಡ ಕಟ್ಟಿದ ತಂದೆ! ₹26,500 ಫೈನ್

ಬಾಲಕ ಓಡಿಸಿದ ಬೊಲೆರೊ, ದಂಡ ಕಟ್ಟಿದ ತಂದೆ! ₹26,500 ಫೈನ್ A Shivamogga court fined a father ₹26,500…

1 day ago