ವಿಜೃಂಭಣೆಯ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ
ರಿಪ್ಪನ್‌ಪೇಟೆ;-ಇಲ್ಲಿನ ಶ್ರೀವರಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವವು ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯೊಂದಿಗೆ ನೆರವೇರಿತು.
ಇಂದು ಅಪರಾಹ್ನ 12. ಗಂಟೆ 45 ನಿಮಿಷದಲ್ಲಿ ಸಿದ್ದಿವಿನಾಯಕ ಸ್ವಾಮಿ ರಥವನ್ನೇರುತ್ತಿದ್ದಂತೆ ಭಕ್ತರ ಜಯಘೋಷಣೆ ಮುಗಿಲು ಮುಟ್ಟಿತು.
ಕೋಣಂದೂರು ಬೃಹನ್ಮಠದ ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿ ಮತ್ತು ನಿಟ್ಟೂರು ನಾರಾಯಣಗುರು ಮಠದ ರೇಣುಕಾನಂದ ಮಹಾಸ್ವಾಮಿಜಿ ಮತ್ತು ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ಧರ್ಮದರ್ಶಿ ಸಮಿತಿ ಆಧ್ಯಕ್ಷ ಈಶ್ವರಶೆಟ್ಟಿ ಇವರು ಹಾಜರಿದ್ದು ರಥೋತ್ಸವಕ್ಕೆ ಚಾಲನೆ ನೀಡಿದರು.
ಜಾತ್ರಾ ಮಹೋತ್ಸವವು ಜನರಲ್ಲಿನ ಶ್ರದ್ದಾ ಭಕ್ತಿಯ ಪರಾಕಾಷ್ಟತೆಯೊಂದಿಗೆ ಬೇಡಿದ ವರ ಕರಣಿಸುವ ವಿನಾಯಕ ಸ್ವಾಮಿ ಮತ್ತು ಜಗನ್ಮಾತೆ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವರುಗಳ ದರ್ಶನಕ್ಕೆ ಬಿಸಿಲು ಲೆಕ್ಕಿಸದೇ ಜನರು ರಥೋತ್ಸವದಲ್ಲಿ ಪಾಲ್ಗೊಂಡು ಬಾಳೆಹಣ್ಣು ಉತ್ತುತ್ತಿ ಯನ್ನು ರಥದತ್ತ ಎಸೆಯುತ್ತಾ ಜಯಘೋಷಣೆ ಕೂಗಿದರು.
ರಥೋತ್ಸವವು ದೇವಸ್ಥಾನದಿಂದ ಹೊರಟು ವಿನಾಯಕ ವೃತ್ತದವರೆ ಚಲಿಸಿ ನಂತರ ದೇವಸ್ಥಾನದ ಬಳಿ ವಾಪಾಸ್ಸು ತರುವುದರೊಂದಿಗೆ ನೆಲೆ ನಿಂತಿತು.
ಶಿವಮೊಗ್ಗದ ಅಗಮ ಪ್ರವೀಣ ವಸಂತಭಟ್ ಮತ್ತು ವೃಂದ ಹಾಗೂ ರಿಪ್ಪನ್‌ಪೇಟೆ ಗಂಪತಿ ದೇವಸ್ಥಾನದ ಪ್ರಧಾನ ಆರ್ಚಕರಾದ ಚಂದ್ರಶೇಖರಭಟ್, ಗುರುರಾಜಭಟ್, ಸಿದ್ದಿವಿನಾಯಕ ದೇವಸ್ಥಾನ ಧರ್ಮದರ್ಶಿಗಳು ಸೇವಾಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.
ಈ ರಥೋತ್ಸವದಲ್ಲಿ ಠೇವಣಿ ಸಂಗ್ರಹಕಾರರು ಮತ್ತು ವಿವಿಧ ಸಂಘ ಸಂಸ್ಥೆಯವರು ಮಜ್ಜಿಗೆ ಸೇವೆ ಮತ್ತು ನೀರಿನ ಸೌಲಭ್ಯವನ್ನು ನೀಡಿದರು.ನಂತರ ಸಾಮೂಹಿಕ ಅನ್ನ ಸಂತರ್ಪಣೆ ನೆರವೇರಿತು.
ಕರ್ನಾಟಕ SIR ಅವಧಿ ಮತ್ತೆ ವಿಸ್ತರಣೆ: ಆಗಸ್ಟ್ 17ರವರೆಗೆ ಮನೆ ಮನೆಗೆ BLO ಭೇಟಿ ; ಅಕ್ಟೋಬರ್ 27ಕ್ಕೆ ಅಂತಿಮ…
RIPPONPETE | ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಧೀರ್ ಪಿ , ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಆಯ್ಕೆ –…
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಮನನೊಂದು ವಿಷ ಸೇವಿಸಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಸಾವು A NEET aspirant…
ಆಗುಂಬೆಯಿಂದ ರಿಪ್ಪನ್‌ಪೇಟೆವರೆಗೆ ಪೊಲೀಸರ ಚೇಸಿಂಗ್ ಪ್ರಕರಣ : ಕಾರು ಬಿಟ್ಟು ಕಾಡಿಗೆ ಪರಾರಿಯಾಗಿದ್ದ ಆರೋಪಿಯ ಬಂಧನ Agumbe Police arrested…
ಎಂಟು ಕಾಲು, ಮೂರು ಕಿವಿ, ಎರಡು ಬಾಲ, ಎರಡು ನಾಲಿಗೆ ಇರುವ ಕುರಿ ಜನನ - ಗ್ರಾಮಸ್ಥರಲ್ಲಿ ಅಚ್ಚರಿ A…
ಆನಂದಪುರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ಬಂಗಾರದ ನಾಣ್ಯಗಳ ನೀಡಿ ₹9.60 ಲಕ್ಷ ವಂಚನೆ - ನಗದು ಸಹಿತ ಆರೋಪಿ…