ಮೈಕ್ರೋ ಫೈನಾನ್ಸ್ ನವರಿಂದ ಬಡವರಿಗೆ ಕಿರುಕುಳ ತಡೆಗಟ್ಟಲು ಪೊಲೀಸರಿಗೆ ವಿಶೇಷ ಅಧಿಕಾರ : ಗೃಹ ಸಚಿವ
ತುಮಕೂರು : ಮೈಕ್ರೋ ಫೈನಾನ್ಸ್ನವರಿಂದ ಬಡವರ ಮೇಲಾಗುತ್ತಿರುವ ಕಿರುಕುಳ ತಪ್ಪಿಸಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲು, ಕಾನೂನು ರಚಿಸುವ ಸಲುವಾಗಿ ರಾಜ್ಯಪಾಲರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕುರಿತು ಸಿಎಂ, ಡಿಸಿಎಂ, ಕಾನೂನು ಸಚಿವರು ಹಾಗೂ ನಾನು ಚರ್ಚೆ ಮಾಡಿದ್ದೇವೆ. ಆರ್ಬಿಐ ಪ್ರತಿನಿಧಿಗಳು, ಮೈಕ್ರೋ ಫೈನಾನ್ಸ್ ಪ್ರತಿನಿಧಿ, ಪೊಲೀಸ್ ಇಲಾಖೆ, ರೆವೆನ್ಯೂ ಇಲಾಖೆ, ಹಣಕಾಸಿನ ಇಲಾಖೆಯವರೆಲ್ಲರೂ ಕುಳಿತು ಮಾತನಾಡಿದ್ದೇವೆ. ಸಿಎಂ ರಿವ್ಯೂ ಮಾಡುವಾಗ ಒಂದು ತೀರ್ಮಾನಕ್ಕೆ ಬಂದರು ಎಂದು ಹೇಳಿದರು.
ಅದರಲ್ಲಿ ಈಗಾಗಲೇ ಇರುವಂತಹ ಕಾನೂನನ್ನು ಭದ್ರ ಮಾಡುವಂತಹದ್ದು. ಮತ್ತು ಹೊಸದಾಗಿ ಏನಾದ್ರು ಪ್ರಾವಿಜನ್ಅನ್ನ ಸೇರಿಸುವುದರ ಕುರಿತು ಚರ್ಚಿಸಿದ್ದೇವೆ. ಲೆಂಡಿಂಗ್ ಮಾಡುವವರಿಗೆ, ರಿಕವರಿ ಮಾಡುವವರಿಗೆ ಹಾಗೂ ಬೆನಿಫಿಷಿಯರಿಗೆ ತೊಂದರೆ ಮಾಡದಂತೆ ಆರ್ಬಿಐ ಗೈಡ್ಲೈನ್ಸ್ಗಳಿವೆ. ಅದರಲ್ಲಿ, 6 ಗಂಟೆ ಮೇಲೆ ಹಣ ರಿಕವರಿ ಮಾಡಬಾರದು ಅಂತ ಇದೆ. ಅವಾಚ್ಯ ಶಬ್ದ ಬಳಕೆ ಮಾಡಬಾರದು. ಮನೆಗಳ ಮೇಲೆ ದಾಳಿ ಮಾಡಬಾರದು, ಅವರ ವಸ್ತುಗಳನ್ನ ಹೊತ್ತೊಯ್ಯಬಾರದು ಅಂತ ಇದೆ. ಅದನ್ನು ಪಾಲಿಸಬೇಕು ಅಂತ ನಾವು ಹೇಳಿದ್ದೇವೆ. ಅದಕ್ಕೆ ಕಾನೂನು ಏನಾದ್ರು ಬದಲಾವಣೆ ಮಾಡುವುದಿದ್ರೆ ಅದನ್ನ ನಾವು ಮಾಡುತ್ತೇವೆ. ಹೊಸದಾಗಿ ತರಬೇಕಾದ ಕಾನೂನನ್ನ ಆರ್ಡಿನೆನ್ಸ್ ಮೂಲಕ ತರಬೇಕು ಅಂದುಕೊಂಡಿದ್ದೇವೆ.ಇನ್ನೊಂದು ವಾರದಲ್ಲಿ ಆರ್ಡಿನೆನ್ಸ್ ಮಾಡಿ ಕ್ಯಾಬಿನೆಟ್ನಲ್ಲಿ ಅಪ್ರೂವಲ್ ಪಡೆದು ಗವರ್ನರ್ಗೆ ಕಳುಹಿಸಿಕೊಡುತ್ತೇವೆ ಎಂದು ಮಾಹಿತಿ ನೀಡಿದರು.
ಅದು ಬಹಳ ಕಠಿಣವಾದ ಕಾನೂನು ಆಗಬೇಕು. ಹಾಗೆಯೇ ಪೊಲೀಸರಿಗೆ ಹೆಚ್ಚಿನ ಅಧಿಕಾರ ಕೊಡಬೇಕು ಎಂದು ನಿರ್ಧರಿಸಿದ್ದೇವೆ. ಏಕೆಂದ್ರೆ ಪೊಲೀಸರಿಗೆ ಈಗ ಸುಮೋಟೋ ಕೇಸ್ ದಾಖಲಿಸುವ ಅಧಿಕಾರ ಇಲ್ಲ. ಆದ್ದರಿಂದ ಅವರಿಗೆ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಳ್ಳುವ ಅಧಿಕಾರವನ್ನ ನೀಡಲು ನಿರ್ಧರಿಸಿದ್ದೇವೆ. ಐಪಿಸಿ ಸೆಕ್ಷನ್ನಲ್ಲಿ ಏನೇನು ಪ್ರಾವಿಜನ್ ಮಾಡಬೇಕೋ ಅದನ್ನ ಈ ಆರ್ಡಿನೆನ್ಸ್ ಮೂಲಕ ಕೊಡುತ್ತೇವೆ. ಕೇಂದ್ರ ಸರ್ಕಾರ ಇದನ್ನೇ ಚಿಂತನೆ ಮಾಡುತ್ತಿದೆ. ಕಳೆದ ಎಂಟತ್ತು ವರ್ಷಗಳಿಂದ ಇದನ್ನು ತರಬೇಕು ಅಂತ ಇದ್ದಾರೆ, ಆದರೆ ತಂದಿಲ್ಲ. ಅವರಿಗೂ ನಾವು ಒತ್ತಾಯ ಮಾಡುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿ ಅವರು ಪ್ರಧಾನಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ ಎಂದರು.
ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !? Illegal liquor…
ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…
ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…
ಪೊಲೀಸರ ದಿಢೀರ್ ದಾಳಿ – ಅಕ್ರಮ ಕಸಾಯಿ ಖಾನೆಯಿಂದ ಮಾಂಸ ವಶಕ್ಕೆ , ಪ್ರಕರಣ ದಾಖಲು Police conduct a…
ರಿಪ್ಪನ್‌ಪೇಟೆ ಸರ್ಕಾರಿ ಶಾಲೆ ಶತಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿ ನಿರೂಪ್ ಕುಮಾರ್ , ಕಾರ್ಯಾಧ್ಯಕ್ಷರಾಗಿ ಸುರೇಶ್ ಸಿಂಗ್ ಆಯ್ಕೆ Ripponpete Government…
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…