POSTMANNEWS

ನೈಜ ಸುದ್ದಿ ನೇರ ಬಿತ್ತರ..

ನಕಲಿ ದಾಖಲೆ ಸೃಷ್ಟಿಸಿ ಕೋರ್ಟ್ ನಲ್ಲಿ ಐವರಿಗೆ ಜಾಮೀನು ನೀಡಿದ್ದ ವ್ಯಕ್ತಿ – ಆರೋಪಿ ಸೇರಿ 7 ಮಂದಿ ವಿರುದ್ಧ ಕೇಸ್

ನಕಲಿ ದಾಖಲೆ ಸೃಷ್ಟಿಸಿ ಕೋರ್ಟ್ ನಲ್ಲಿ ಐವರಿಗೆ ಜಾಮೀನು ನೀಡಿದ್ದ ವ್ಯಕ್ತಿ – ಆರೋಪಿ ಸೇರಿ 7 ಮಂದಿ ವಿರುದ್ಧ ಕೇಸ್

ನಕಲಿ ದಾಖಲೆ ಸೃಷ್ಟಿಸಿ ಶಿವಮೊಗ್ಗ ನ್ಯಾಯಾಲಯದಲ್ಲಿ ಐವರು ಆರೋಪಿಗಳಿಗೆ ವ್ಯಕ್ತಿಯೊಬ್ಬ ಜಾಮೀನು ನೀಡಿದ್ದಾನೆ. ಜಾಮೀನು ಪಡೆದವರಲ್ಲಿ ಒಬ್ಬ ವಿಚಾರಣೆಗೆ ಹಾಜರಾಗದಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇಬ್ರಾಹಿಂ ಖಲೀಲ್, ಫೈರೋಜ್, ಅರ್ಬಾಜ್, ನಯಾಜ್ ಅಹಮದ್, ಸುಹೇಲ್ ಎಂಬ ಆರೋಪಿಗಳಿಗೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಜಗದೀಶ್ ಎಂಬುವರು ಶಿವಮೊಗ್ಗ ನ್ಯಾಯಾಲಯದಲ್ಲಿ ಜಾಮೀನುದಾರರಾಗಿದ್ದರು.

ಈ ಪ್ರಕರಣದಲ್ಲಿ ಐದನೇ ಆರೋಪಿ ಸುಹೇಲ್ ಜಾಮೀನು ಪಡೆದ ನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ.

ನಂತರ ಜಾಮೀನುದಾರ ಜಗದೀಶ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಂತೆಯೇ ನ್ಯಾಯಾಲಯಕ್ಕೆ ಹಾಜರಾದ ಅವರು ತಾನು ಯಾರಿಗೂ ಜಾಮೀನು ನೀಡಿಲ್ಲ. ಅಲ್ಲದೆ ಪ್ರಮಾಣಪತ್ರದಲ್ಲಿರುವ ಫೋಟೋ ಕೂಡ ನನ್ನದಲ್ಲ. ಮತ್ತು ಆರೋಪಿಗಳು ನನಗೆ ಪರಿಚಯವಿಲ್ಲ ಎಂದು ಕೋರ್ಟ್ ಗೆ ಹಾಜರಾಗಿ ನ್ಯಾಯಾಧೀಶರ ಮುಂದೆ ಮಾಹಿತಿ ನೀಡಿದ್ದಾರೆ.

ಆಗ ನಕಲಿ ದಾಖಲೆ ಸೃಷ್ಟಿಸಿ ಅಪರಿಚಿತನೊಬ್ಬ ಜಗದೀಶ್ ಹೆಸರಲ್ಲಿ ಜಾಮೀನು ನೀಡಿರುವುದು ಗೊತ್ತಾಗಿದೆ. ಈ ಬಗ್ಗೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಜಾಮೀನುದಾರನಾಗಿ ಬಂದಿದ್ದ ವ್ಯಕ್ತಿ, ಆತನನ್ನು ಕರೆತಂದಿದ್ದ ನಸರುಲ್ಲಾ ಮತ್ತು ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

Exit mobile version