ಶಿಕಾರಿಪುರದಲ್ಲಿ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ – ಈಶ್ವರಪ್ಪ ಗುಡುಗು | KSE
ಶಿಕಾರಿಪುರದಲ್ಲಿ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ – ಈಶ್ವರಪ್ಪ ಗುಡುಗು ಶಿವಮೊಗ್ಗ : ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ದುಡ್ಡು ನಡೆಯಲ್ಲ, ಶಿಕಾರಿಪುರದಲ್ಲಿ ಅಪ್ಪ-ಮಕ್ಕಳ ಶಿಕಾರಿ ಮಾಡುತ್ತೇನೆ, ಬಿಡುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದ ವಿರುದ್ದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕಾರಿಪುರದಲ್ಲಿ ಅವರ ಸ್ಥಿತಿ ನೋಡಿಕೊಳ್ಳಲಿ. ಲಿಂಗಾಯತರಾದಿಯಾಗಿ ಎಲ್ಲರೂ ಅವರ ಕುಟುಂಬದ ಬಗ್ಗೆ ಜರಿಯುತ್ತಿದ್ದಾರೆ. ಈ ಚುನಾವಣೆಯಲ್ಲಿ ಯಾವುದೇ ದುಡ್ಡು ನಡೆಯಲ್ಲ. ಶಿಕಾರಿಪುರದಲ್ಲಿ ಅಪ್ಪ-ಮಕ್ಕಳ ಶಿಕಾರಿ ಮಾಡುತ್ತೇನೆ ಎಂದರು. …


