ಕಳೂರು ಸಹಕಾರ ಸಂಘ ಚುನಾವಣೆ – ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ ಜಿ ನಾಗರಾಜ್ ಗೆ ಸೋಲು , 12 ಸ್ಥಾನ ಗೆದ್ದು ಗೆಲುವಿನ ನಗೆ ಬೀರಿದ ಹಾಲಿ ಅಧ್ಯಕ್ಷ ದುಮ್ಮ ವಿನಯ್ ಗೌಡ
ಹೊಸನಗರ : ಇಲ್ಲಿನ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಬಿ ಜಿ ನಾಗರಾಜ್ 10 ಮತಗಳ ಅಂತರದಿಂದ ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಸಾಲಗಾರ ರಲ್ಲದ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಬಿ ಜಿ ನಾಗರಾಜ್ 164 ಮತಗಳನ್ನು ಪಡೆದರೆ ಎದುರು ಸ್ಪರ್ಧಿ ಶ್ರೀನಿವಾಸ ಹೆಚ್ 174 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
ಇನ್ನೂ ಸಾಲಗಾರರ ಕ್ಷೇತ್ರದಲ್ಲಿ ರವಿ ಜಿ ಎಸ್ 239 ಮತಗಳನ್ನು ಪಡೆದರೆ ವಿನಯ್ ಕುಮಾರ ಡಿ ಆರ್ 244 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
ಇಂದಿನ ಕಳೂರು ರಾಮೇಶ್ವರ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದು ಕ್ಲೀನ್ ಸ್ವೀಪ್ ಅನ್ನು ಹಾಲಿ ಅಧ್ಯಕ್ಷ ದುಮ್ಮಾ ವಿನಯ್ ಗೌಡ ಮಾಡಿದ್ದಾರೆ.
ಸಾಲಗಾರ ರಲ್ಲದ ಕ್ಷೇತ್ರದ ಅಭ್ಯರ್ಥಿಗಳು ಪಡೆದ ಮತಗಳು
1). ನಾಗರಾಜ ಬಿ.ಜಿ 164 ಮತಗಳು
2). ವಿಶ್ವೇಶ್ವರಯ್ಯ 07 ಮತಗಳು
3). ಶ್ರೀನಿವಾಸ ಹೆಚ್ 174 ಮತಗಳು – ಗೆಲುವು
ಸಾಲಗಾರ ಕ್ಷೇತ್ರದ ಅಭ್ಯರ್ಥಿಗಳು ಪಡೆದ ಮತಗಳು
1). ಈಶ್ವರಪ್ಪ ಕೆ ಆರ್ 66 ಮತಗಳು
2). ರವಿ ಜಿ ಎಸ್ 239 ಮತಗಳು
3). ವಿನಯ್ ಕುಮಾರ ಡಿ ಆರ್ 244 ಮತಗಳು – ಗೆಲುವು
ಗಣೇಶೋತ್ಸವ ಹಿನ್ನೆಲೆ: ಸೆ.4ರಂದು ರಿಪ್ಪನ್‌ಪೇಟೆಯಲ್ಲಿ ಎಎಸ್‌ಪಿ ಭಾನುಪ್ರಕಾಶ್ ನೇತೃತ್ವದಲ್ಲಿ ಶಾಂತಿ ಸಭೆ A peace meeting for Ganesh festival…
ನೀರಿನಲ್ಲಿ ಅಡಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನ ; ಸಿನಿಮೀಯ ರೀತಿಯಲ್ಲಿ ರೌಡಿಶೀಟರ್‌ನನ್ನು ಬಂಧಿಸಿದ ಪೊಲೀಸರು Bhadravathi police dramatically…
ಅಜಾಗರೂಕ ಚಾಲನೆಯಿಂದ ಕೆರೆಗೆ ನುಗ್ಗಿದ ಲಾರಿ! ತಪ್ಪಿದ ಭಾರಿ ದುರಂತ A container lorry allegedly driven recklessly under…
ರಿಪ್ಪನ್‌ಪೇಟೆ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಅನಾಹುತ; ಡಿಸ್ಕಸ್ ತಲೆಗೆ ಬಿದ್ದು ಶಿಕ್ಷಕ ಗಂಭೀರ ಗಾಯ A physical education teacher…
ನೆಲ್ಲಿಬೀಡು ಟಿಪ್ಪರ್ – ಬೈಕ್ ಅಪಘಾತ: ಮಗಳ ಸಾವಿನ ಬಳಿಕ ಚಿಕಿತ್ಸೆ ಫಲಿಸದೆ ತಂದೆಯೂ ಮೃತ್ಯು A tragic tipper-bike…
ಬಾಲಕ ಓಡಿಸಿದ ಬೊಲೆರೊ, ದಂಡ ಕಟ್ಟಿದ ತಂದೆ! ₹26,500 ಫೈನ್ A Shivamogga court fined a father ₹26,500…