IND vs AUS | ಮೈದಾನದಲ್ಲಿದ್ದವರ ಕಣ್ಣಂಚಲ್ಲಿ ನೀರು ತುಂಬಿಕೊಳ್ಳುವಂತೆ ಮಾಡಿದ ನಿತೀಶ್ ಕುಮಾರ್ ಶತಕ
ಚೊಚ್ಚಲ ಶತಕವನ್ನು ತನ್ನ ಪಾಲಿನ ಹೀರೋಗೆ ಅರ್ಪಿಸಿದ ನಿತೀಶ್ ರೆಡ್ಡಿ
ಆಸ್ಟ್ರೇಲಿಯಾ(Australia) ನೆಲದಲ್ಲಿ ಶತಕ ಗಳಿಸುವುದು ಅಷ್ಟು ಸುಲಭವಲ್ಲ. ಆದರೆ ಭಾರತ ಈ ಬಾರಿ ಆಸೀಸ್ ಪ್ರವಾಸದಲ್ಲಿ ಹೊಸ ತಾರೆಯನ್ನು ಕಂಡುಕೊಂಡಿದೆ. ಇಂದು ನಿತೀಶ್ ಕುಮಾರ್ ರೆಡ್ಡಿ(Nithish kumar reddy) ಎಂಬ ಯುವ ಪ್ರತಿಭೆ ಶತಕ ಸಿಡಿಸುವಾಗ ಇಡೀ ಮೈದಾನವೇ ಖುಷಿಯಿಂದ ಕಣ್ಣೀರು ಹಾಕಿದೆ.
ಒಂದು ಹಂತದಲ್ಲಿ ಭಾರತ 250 ರನ್ ಗಳೊಳಗೆ ಆಲೌಟ್ ಆಗುವ ಭೀತಿಯಿತ್ತು. ಆದರೆ ನಿತೀಶ್ ಕುಮಾರ್ ರೆಡ್ಡಿ ಸಂಕಷ್ಟದ ಸಮಯದಲ್ಲಿ ಮತ್ತೊಮ್ಮೆ ಭಾರತದ(india) ಪಾಲಿಗೆ ಆಪತ್ ಬಾಂಧವರಾದರು. ಕೆಳ ಕ್ರಮಾಂಕದಲ್ಲಿ ಅದೂ ತಂಡ ಸಂಕಷ್ಟದಲ್ಲಿರುವಾಗ ಬ್ಯಾಟಿಂಗ್ ಬಂದು ಶತಕ ಸಿಡಿಸಿ ಎಲ್ಲರೂ ಹೆಮ್ಮೆಯಿಂದ ಚಪ್ಪಾಳೆ ತಟ್ಟುವಂತೆ ಮಾಡಿದರು.
ನಿತೀಶ್ 85 ರನ್ ಗಳಿಸಿದ್ದಾಗ ಭಾರತ 7 ವಿಕೆಟ್ ಕಳೆದುಕೊಂಡಿತ್ತು. ಆಗ ಮಳೆ ಬಂದಿದ್ದರಿಂದ ಕೆಲವು ಕಾಲ ಪಂದ್ಯ ಸ್ಥಗಿತಗೊಂಡಿತ್ತು. ಇದಾಗಿ ಪಂದ್ಯ ಶುರುವಾದ ಮೇಲೆ 50 ರನ್ ಗಳಿಸಿ ವಾಷಿಂಘ್ಟನ್ ಸುಂದರ್(Washington Sundar) ವಿಕೆಟ್ ಒಪ್ಪಿಸಿದರು. ಆಗ ನಿತೀಶ್ ಎದೆಯಲ್ಲಿ ಢವ ಢವ ಶುರುವಾಗಿತ್ತು.
ವಿಪರ್ಯಾಸವೆಂದರೆ ನಂತರ ಬಂದ ಬುಮ್ರಾ(bumrah) ಕೂಡಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಈ ವೇಳೆ ನಿತೀಶ್ 99 ರನ್ ಗಳಿಸಿ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದರು. ಮೊಹಮ್ಮದ್ ಸಿರಾಜ್ ಬ್ಯಾಟಿಂಗ್ ಗೆ ಬಂದಿದ್ದರು. ಪ್ಯಾಟ್ ಕಮಿನ್ಸ್ (Cummins) ಬೆಂಕಿ ಚೆಂಡು ಎಸೆಯುತ್ತಿದ್ದರು. ಸಿರಾಜ್ ಮೂರು ಬಾಲ್ ಎದುರಿಸಬೇಕಿತ್ತು. ಭಾರತೀಯ ಡ್ರೆಸ್ಸಿಂಗ್ ರೂಂ, ನಿತೀಶ್ ಕುಮಾರ್ ರೆಡ್ಡಿ, ಕಾಮೆಂಟೇಟರ್ಸ್, ಮೈದಾನದಲ್ಲಿದ್ದ ಪ್ರೇಕ್ಷಕರು ಮತ್ತು ಟಿವಿ ವೀಕ್ಷಿಸುತ್ತಿದ್ದ ಕೋಟ್ಯಾಂತರ ವೀಕ್ಷಕರ ಎದೆಯಲ್ಲಿ ಆಗಲೇ ಲಬ್ ಡಬ್ ಶುರುವಾಗಿತ್ತು.
ಅದೃಷ್ಟವಶಾತ್ ಸಿರಾಜ್(Siraj) ಆ ಮೂರೂ ಎಸೆತಗಳನ್ನು ಡಿಫೆಂಡ್ ಮಾಡುವಲ್ಲಿ ಯಶಸ್ವಿಯಾದರು. ಓವರ್ ಮುಗಿದಾಗ ಸಿರಾಜ್ ಅರ್ಧಶತಕ ಗಳಿಸಿದವರಂತೆ ನಿಟ್ಟುಸಿರು ಬಿಟ್ಟರು. ಮುಂದಿನ ಓವರ್ ನಲ್ಲಿ ನಿತೀಶ್ ಗೆ ಸ್ಟ್ರೈಕ್ ಸಿಕ್ಕಿತ್ತು.
ಮೊದಲ ಎರಡು ಎಸೆತವನ್ನು ಡಿಫೆಂಡ್ ಮಾಡಿದ ಅವರು ನಂತರದ ಎಸೆತದಲ್ಲಿ ಬೌಂಡರಿ ಗಳಿಸುವ ಮೂಲಕ ಚೊಚ್ಚಲ ಶತಕ ಗಳಿಸಿಯೇ ಬಿಟ್ಟರು.
ಮೈದಾನದಲ್ಲಿದ್ದ ಅವರ ತಂದೆಯ ಖುಷಿಯಿಂದ ಕಣ್ಣೀರು ಹಾಕಿದರು. ಸ್ವತಃ ನಿತೀಶ್ ಭಾವುಕರಾಗಿದ್ದು ಕಂಡುಬಂತು. ಜೊತೆಗೆ ಇಡೀ ಮೈದಾನದೇ ಖುಷಿಯಿಂದ ಹುಚ್ಚೆದ್ದು ಕುಣಿಯಿತು. ಇಂತಹದ್ದೊಂದು ಭಾವನಾತ್ಮಕ ಸನ್ನಿವೇಶದೊಂದಿಗೆ ಎಂದೆಂದಿಗೂ ನೆನಪಿನಲ್ಲುಳಿಯುವಂತಹ ಶತಕವನ್ನು ನಿತೀಶ್ ಪೂರ್ತಿ ಮಾಡಿಯೇ ಬಿಟ್ಟಿದ್ದರು.
ಇದೀಗ ಭಾರತ 9 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಿದ್ದು, ಇನಿಂಗ್ಸ್ ಹಿನ್ನಡೆಯನ್ನು 116 ರನ್ ಗೆ ಬಂದು ನಿಂತಿದೆ.
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…
ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…
ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !! A…
ಈಸ್ಟ್‌ವೆಸ್ಟ್ ಬಸ್ ಮಾಲೀಕ ತಲ್ಕೀನ್ ಅಹ್ಮದ್ ನಿಧನ Talkeen Ahmed, owner of East West Bus institution and…
ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು Thieves broke into journalist Shi.…
ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ: ಅನುಮಾನಾಸ್ಪದವಾಗಿ ಲಾಡ್ಜ್‌ನಲ್ಲಿ ತಂಗಿದ್ದ…