ಮನೆಯ ಹೂವಿನ ಕುಂಡದಲ್ಲಿ ಗಾಂಜಾ ಗಿಡ! ರೀಲ್ಸ್ ಮಾಡಿ ಸಿಕ್ಕಿ ಬಿದ್ದ ಮಹಿಳೆ
ಬೆಂಗಳೂರಿನ ಸದಾಶಿವನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಮನೆಯ ಬಾಲ್ಕನಿಯಲ್ಲಿ ಹೂವಿನ ಪಾಟ್ ಗಳ ನಡುವೆ ಮಾದಕವಸ್ತು ಗಾಂಜಾ ಗಿಡ ಬೆಳೆದಿದ್ದ ದಂಪತಿಯನ್ನು ಬಂಧಿಸಿದ್ದಾರೆ.
ಎಂ.ಎಸ್.ರಾಮಯ್ಯ ನಗರದ 3ನೇ ಮುಖ್ಯರಸ್ತೆ 6ನೇ ಅಡ್ಡರಸ್ತೆ ನಿವಾಸಿಗಳಾದ 37 ವರ್ಷದ ಊರ್ಮಿಳಾ ಕುಮಾರಿ ಮತ್ತು 38 ವರ್ಷದ ಸಾಗರ್ ಗುರುಂಗ್ ಬಂಧಿತ ದಂಪತಿ ಎನ್ನಲಾಗಿದೆ.
ಆರೋಪಿಗಳಿಂದ 54 ಗ್ರಾಂ ಗಾಂಜಾ ಸೊಪ್ಪು, ಎರಡು ಪಾಟ್ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಊರ್ಮಿಳಾ ಕುಮಾರಿ ಮನೆಯ ಬಾಲ್ಕನಿಯಲ್ಲಿ ಹೂವಿನ ಗಿಡಗಳ ನಡುವೆ ಗಾಂಜಾ ಬೆಳೆಸಿರುವುದಾಗಿ ವಿಡಿಯೋ ಮಾಡಿ ಆ ವಿಡಿಯೊವನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಳು. ಈ ಸಂಬಂಧ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಗಾಂಜಾ ಗಿಡ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಮನೆಯ ಬಾಲ್ಕನಿಯಲ್ಲಿ ಸುಮಾರು 15 ಪಾಟ್ ಗಳಲ್ಲಿ ವಿವಿಧ ಹೂವಿನ ಗಿಡಗಳನ್ನು ಬೆಳೆಸಿದ್ದರು. ಈ ನಡುವೆ ಎರಡು ಪಾಟ್ ಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಮನೆ ಮೇಲೆ ದಾಳಿ ಮಾಡಿದಾಗ ಆರೋಪಿಗಳು ಭಯಗೊಂಡು ಗಾಂಜಾ ಗಿಡಗಳನ್ನು ಪಾಟ್ ನಿಂದ ಕಿತ್ತು ಡಸ್ಟ್ ಬಿನ್ ಗೆ ಎಸೆದಿದ್ದರು. ಪರಿಶೀಲನೆ ವೇಳೆ ಡಸ್ಟ್ ಬಿನ್ ನಲ್ಲಿ ಮುರಿದ ಗಾಂಜಾ ಗಿಡದ ಎಲೆಗಳು ಹಾಗೂ ಕಾಂಡ ಪತ್ತೆಯಾಯಿತು.
ಬಳಿಕ ಆಕೆಯ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಗಾಂಜಾ ಗಿಡಗಳ ವಿಡಿಯೋಗಳು ಪತ್ತೆಯಾದವು. ಹೀಗಾಗಿ ಮಾಲುಗಳನ್ನು ಜಪ್ತಿ ಮಾಡಿ ದಂಪತಿಯನ್ನು ಬಂಧಿಸಲಾಗಿದೆ.
ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…
ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…
ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !! A…
ಈಸ್ಟ್‌ವೆಸ್ಟ್ ಬಸ್ ಮಾಲೀಕ ತಲ್ಕೀನ್ ಅಹ್ಮದ್ ನಿಧನ Talkeen Ahmed, owner of East West Bus institution and…
ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು Thieves broke into journalist Shi.…
ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ: ಅನುಮಾನಾಸ್ಪದವಾಗಿ ಲಾಡ್ಜ್‌ನಲ್ಲಿ ತಂಗಿದ್ದ…