ಅಡಿಕೆ ತೂಕದಲ್ಲಿ ಮೋಸ – ವ್ಯಾಪಾರಿಗೆ ಗ್ರಾಮಸ್ಥರಿಂದ 20 ಲಕ್ಷ ರೂ ದಂಡ
ಅಡಿಕೆ ವ್ಯಾಪಾರಿಯೊಬ್ಬ ರೈತರಿಂದ ಅಡಿಕೆ ಖರೀದಿ ಮಾಡಿ ತೂಕ ಮಾಡಿಕೊಂಡು ಹೋಗುವಾಗ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಹಿಡಿದು ಆ ವ್ಯಾಪಾರಿಗೆ ಬರೋಬ್ಬರಿ 20 ಲಕ್ಷ ರೂ.ದಂಡ ವಿಧಿಸಿರುವ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯಭದ್ರಾವತಿ ತಾಲೂಕಿನ ಅರಹತೊಳಲಿ ಗ್ರಾಮದಲ್ಲಿ ನಡೆದ ಘಟನೆಯಾಗಿದೆ. ಅಡಿಕೆ ತೂಕದಲ್ಲಿ ಮೋಸ ಮಾಡಿದ ವ್ಯಾಪಾರಿಗೆ ಗ್ರಾಮ ಸಮಿತಿಯಿಂದ ಬರೋಬ್ಬರಿ 20 ಲಕ್ಷ ರೂ. ದಂಡ ವಿಧಿಸಿದೆ. ರೈತರ ಮನೆ ಬಾಗಿಲಲ್ಲಿ ರಾಶಿ ಅಡಿಕೆ ತೂಕದಲ್ಲಿ ವರ್ತಕ ಮೋಸ ಮಾಡಿದ್ದಾನೆ. ಮೋಸ ಮಾಡಿದ ಸ್ಥಳೀಯ ಅಡಿಕೆ ವರ್ತಕ ತಟ್ಟೆಹಳ್ಳಿ ದಿಲೀಪ. ಗಣಕೀಕೃತ ತಕ್ಕಡಿಯಲ್ಲಿ ಬೆಳೆಗಾರರಿಗೆ ಗಮನಕ್ಕೆ ಬಾರದಂತೆ ಒಂದು ಕ್ವಿಂಟಾಲ್‌ಗೆ 3 ಕೆ.ಜಿ ಅಡಕೆ ವಂಚಿಸಿ ಸಿಕ್ಕಿಬಿದ್ದಿದ್ದಾನೆ. ಒಂದು ಕ್ವಿಂಟಾಲ್‌ಗೆ 200 ರೂ. ಹಣ ಹೆಚ್ಚಿಗೆ ನೀಡುವುದಾಗಿ ಹೇಳಿ ಅಡಕೆ ಖರೀದಿಸಿದ್ದಾನೆ. ನಂತರ, ಖರೀದಿಸಿದ 45 ಅಡಿಕೆ ಚೀಲಗಳನ್ನು ಎರಡು ವಾಹನದಲ್ಲಿ ತುಂಬಲಾಗಿತ್ತು.
ಅನುಮಾನಗೊಂಡ ರೈತರು ಒಂದು ಚೀಲ ಅಡಕೆಯನ್ನು ತಕ್ಕಡಿ ಮೇಲೆ ಇರಿಸಿ ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಯಾವುದೊ ಒಂದು ಚೀಲದಲ್ಲಿ ವ್ಯತ್ಯಾಸ ಆಗಿರಬಹುದೆಂದು ಇನ್ನೊಂದೆರಡು ಚೀಲಗಳನ್ನು ಕೆಳಗಿಳಿಸಿ ತೂಕ ಮಾಡಿದ್ದಾರೆ. ವರ್ತಕ ತುಂಬಿದ ಎಲ್ಲ ಚೀಲಗಳಲ್ಲೂ ಮೂರಾಲ್ಕು ಕೆ.ಜಿ ವ್ಯತ್ಯಾಸ ಕಾಣಿಸಿದೆ. ಎಚ್ಚೆತ್ತ ಬೆಳೆಗಾರರು ದಿಲೀಪ ಹಾಗೂ ಹಮಾಲಿ ಕಾರ್ಮಿಕರನ್ನು ಅಲ್ಲೇ ಇರುವಂತೆ ಹೇಳಿ ಗ್ರಾಮಸ್ಥರಿಗೆ ಮೋಸದ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ, ದಿಲೀಪನನ್ನು ಗ್ರಾಮದ ದೇವಸ್ಥಾನಕ್ಕೆ ಕರೆಸಿ ಗ್ರಾಮಸ್ಥರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಲಾಗಿದೆ.
ಇನ್ನು ಗ್ರಾಮದಲ್ಲಿ ಹಿರಿಯರ ನೇತೃತ್ವದಲ್ಲಿ ಸೇರಿದ್ದ ಪಂಚಾಯಿತಿಯಲ್ಲಿ ತೂಕದಲ್ಲಿ ನಾನು ಮೋಸ ಮಾಡಿಲ್ಲ. ನಮ್ಮ ಹಮಾಲರು ಮೋಸ ಮಾಡಿದ್ದಾರೆಂದು ಹೇಳಿ ನುಣುಚಿಕೊಳ್ಳಲು ಯತ್ನಿಸಿದ್ದಾನೆ. ಹಮಾಲರನ್ನು ಕರೆಸಿ ಎಂದಾಗ ಅವರು ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆಂದು ಹೇಳಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಗ್ರಾಮಸ್ಥರು ದಿಲೀಪನೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಗ್ರಾಮ ಸಮಿತಿಯ ತೀರ್ಮಾನದಂತೆ ತೂಕದಲ್ಲಿ ಮೋಸ ಮಾಡಿದ ದಿಲೀಪನಿಗೆ ದಂಡ ವಿಧಿಸಿದ್ದಾರೆ. ವಂಚಕ ವರ್ತಕನಿಗೆ ಬರೋಬ್ಬರಿ 20 ಲಕ್ಷ ರೂ. ಹಣವನ್ನು ದಂಡದ ರೂಪದಲ್ಲಿ ನೀಡುವಂತೆ ಗ್ರಾಮ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟಕ್ಕೆ ಹೊಸನಗರ ತಾಲ್ಲೂಕು ವಕೀಲರ ಸಂಘದ ಸಂಪೂರ್ಣ ಬೆಂಬಲ Hosanagara Taluk Advocates Association extends…
ಅಕ್ರಮ ಬಂದೂಕಿನಿಂದ ಬೀದಿ ನಾಯಿಯ ಬರ್ಬರ ಹತ್ಯೆ - ಆರೋಪಿ ಅರೆಸ್ಟ್! Sagar police arrested a man accused…
ಉಚಿತ ಸೆಲ್‌ಫೋನ್ ರಿಪೇರಿ ತರಬೇತಿ: ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನ Free 31-day mobile phone repair training for…
ಹೊಸನಗರದಲ್ಲಿ ನಾಳೆ ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆ, ಬಹಿರಂಗ ಸಭೆ Farmers and agricultural workers will hold a…
ಸಾಗರ: ಕಸ್ತೂರಿ ರಂಗನ್ ವರದಿ ವಿರುದ್ಧ ರೈತರ ಆಕ್ರೋಶ; ಬ್ಯಾರಿಕೇಡ್ ಕಿತ್ತೆಸೆದು ಪ್ರತಿಭಟನೆ Farmers staged a massive protest…
ಇಂಡಿಯಾ ಪೋಸ್ಟ್‌ನಲ್ಲಿ 25,000ಕ್ಕೂ ಹೆಚ್ಚು ಹುದ್ದೆ: 10ನೇ ತರಗತಿ ಪಾಸಾದವರಿಗೆ ಅವಕಾಶ, ಪರೀಕ್ಷೆ ಇಲ್ಲದೆ ನೇಮಕಾತಿ India Post GDS…