Hosanagara | ವಿವಿಧೆಡೆ 78ನೇ ಸ್ವಾತಂತ್ಯ್ರೋತ್ಸವ ಆಚರಣೆ

Hosanagara | ವಿವಿಧೆಡೆ 78ನೇ ಸ್ವಾತಂತ್ಯ್ರೋತ್ಸವ ಆಚರಣೆ

ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 78ನೇ ಸ್ವಾತಂತ್ಯ್ರೋತ್ಸವ ಆಚರಣೆ

ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು 78ನೇ ಸ್ವಾತಂತ್ಯ್ರ ದಿನಾಚರಣೆಯನ್ನು  ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾ. ಉಮೇಶ್ ಕೆ. ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಪ್ರಭಾಕರ್ ರಾವ್ ಕೆ. ಅವರು ಭಾರತದ ಸ್ವಾತಂತ್ರ್ಯದ ಚಳವಳಿಯ ಕುರಿತಾದ ವಿಶೇಷ ಉಪನ್ಯಾಸವನ್ನು ನೀಡಿದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶ್ರೀ. ಸುಬ್ರಹ್ಮಣ್ಯ ಮಾಸ್ತಿಕಟ್ಟೆ, ಉಪಾಧ್ಯಕ್ಷರು, ಕಾಲೇಜು ಅಭಿವೃದ್ದಿ ಸಮಿತಿ, ಮತ್ತು ಸದಸ್ಯರಾದ ಶ್ರೀ. ಶ್ರೀಧರ್ ಹಳಗುಂದ, ಡಾ. ಕವಿತಾ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಮಂದಾರ ಟಿ. ಮಾಡಿದರು. ಶ್ರೀ ದೊಡ್ಡಯ್ಯ ಹೆಚ್.  ಸ್ವಾಗತಿಸಿದ್ದರು. ಡಾ. ಬಸವರಾಜಪ್ಪ ಎಂ. ಟಿ. ವಂದಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Hosanagara | ಬದ್ರಿಯಾ ಜುಮ್ಮಾ ಮಸೀದಿಯಲ್ಲಿ 78ನೇ ಸ್ವಾತಂತ್ಯ್ರೋತ್ಸವ ಆಚರಣೆ

ಹೊಸನಗರ ಟೌನ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಅದ್ದೂರಿಯಾಗಿ  ಸ್ವತಂತ್ರೋತ್ಸವ ಧ್ವಜಾರಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಮಸೀದಿ ಅಧ್ಯಕ್ಷರಾದ ಕೆ ಅಮಾನುಲ್ಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು ಹೊಸನಗರ ಪೊಲೀಸ್ ಸರ್ಕಲ್ ಗುರಣ್ಣ ಹೆಬ್ಬಾಳ್ ಹಾಗೂ ಪಟ್ಟಣ ಪಂಚಾಯತ್ ಸದಸ್ಯರಾದ ಅಶ್ವಿನಿ ಕುಮಾರ್ ಸಾಹೀನ ನಾಸಿರ್ ಮುಖಂಡರಾದ ಶ್ರೀಧರ್ ಉಡುಪ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಸೀದಿಯ ಧರ್ಮ ಗುರುಗಳಾದ ಬದುರುದ್ದೀನ್ ಜೋಹರಿಯವರು ಪ್ರೀತಿ ಸೌಹಾರ್ದ ಸಹಿಷ್ಣತೆ ದೇಶಪ್ರೇಮ ಈಮನಿನ ಭಾಗವಾಗಿದೆ ಅದಾಗಿದೆ ನಮ್ಮ ಪೈಗಂಬರರ ಮಾರ್ಗದರ್ಶನ ಅವರ ಹಿಂಬಾಲಕರಾದ ನಾವು ವಾಸಿಸುವ ಪ್ರದೇಶದಲ್ಲಿರುವ ಜನರನ್ನ ಪ್ರೀತಿಸುವುದು ದೇಶಪ್ರೇಮ ನಮ್ಮದಾಗಬೇಕು ಮುಂದಿನ ಯುವ  ಸಮೂಹಕ್ಕೆ ನಾವು ಬದುಕುವ ರೀತಿ ಮಾರ್ಗದರ್ಶನವಾಗಬೇಕು ಎಂದು ಹೇಳಿದರು.

ವಿಶೇಷ ಕಾರ್ಯಕ್ರಮವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಶುಶ್ರೂಷಕಿ ಶೈಲಜಾ ಹಾಗೂ ಆಶಾ ಕಾರ್ಯಕರ್ತೆ ಸವಿತಾ ಅವರನ್ನು ಜಮಾತ್ ಬಾಂಧವರ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಿತಿಯ ಅಹಮದ್ ಮೊಹಮ್ಮದ್ ಆಲಿ ಝುಬೇರ್ ಸೈಯದ್ ಯಾಸಿರ್ ಹಾಗೂ ಊರಿನ ಪ್ರಮುಖರಾದ ಮೊಹಮ್ಮದ್ ಹಾಜಿ ನಾಸಿರ್ ಯೂಸುಫ್ ರಫೀಕ್ ಫಾರೂಕ್ ಇನ್ನು ಹಲವಾರು ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಮದರಸದಲ್ಲಿ ನಡೆಸಿದ ಸ್ಪರ್ಧಾ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಮೂಲೇಗದ್ದೆ ಮಠದಲ್ಲಿ 78ನೇ ಸ್ವಾತಂತ್ಯ್ರೋತ್ಸವ ಆಚರಣೆ :

ಇಂದು ಶ್ರೀ ವ್ಯಾಸ ಮಹರ್ಷಿ ಗುರುಕುಲದಲ್ಲಿ ನಡೆದ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಮೂಲೆಗದ್ದೆ ಶ್ರೀ ಸದಾನಂದ ಶಿವಾಯೋಗಾಶ್ರಮದ ಶ್ರೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ನೆರವೇರಿಸಿದರು.

ಈದಿನ ಹೊಸನಗರ ಅಂಚೆ ಕಚೇರಿ ಯಲ್ಲಿ ಹಿರಿಯರಾದ ನಾಗೇಶ್ ರಾವ್ ರವರು ದ್ವಜಾರೋಹಣ ನೆರವೇರಿಸಿದರು.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಚಾಲಕನ ನಿಯಂತ್ರಣ ತಪ್ಪಿ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಖಾಸಗಿ ಬಸ್ – ತಪ್ಪಿದ ಭಾರಿ ಅನಾಹುತ

ಚಾಲಕನ ನಿಯಂತ್ರಣ ತಪ್ಪಿ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಖಾಸಗಿ ಬಸ್ - ತಪ್ಪಿದ ಭಾರಿ ಅನಾಹುತ Private bus…

13 hours ago

ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆಗೆ ಚಾಲನೆ – ಮಳೆಯಲ್ಲೂ ಮುಂದುವರಿದ ಪಾದಯಾತ್ರೆ

ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆಗೆ ಚಾಲನೆ - ಮಳೆಯಲ್ಲೂ ಮುಂದುವರಿದ ಪಾದಯಾತ್ರೆ MLA Belur Gopalakrishna and RM Manjunath…

20 hours ago

ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟಕ್ಕೆ ಹೊಸನಗರ ತಾಲ್ಲೂಕು ವಕೀಲರ ಸಂಘದ ಸಂಪೂರ್ಣ ಬೆಂಬಲ

ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟಕ್ಕೆ ಹೊಸನಗರ ತಾಲ್ಲೂಕು ವಕೀಲರ ಸಂಘದ ಸಂಪೂರ್ಣ ಬೆಂಬಲ Hosanagara Taluk Advocates Association extends…

2 days ago

ಅಕ್ರಮ ಬಂದೂಕಿನಿಂದ ಬೀದಿ ನಾಯಿಯ ಬರ್ಬರ ಹತ್ಯೆ – ಆರೋಪಿ ಅರೆಸ್ಟ್!

ಅಕ್ರಮ ಬಂದೂಕಿನಿಂದ ಬೀದಿ ನಾಯಿಯ ಬರ್ಬರ ಹತ್ಯೆ - ಆರೋಪಿ ಅರೆಸ್ಟ್! Sagar police arrested a man accused…

2 days ago

ಉಚಿತ ಸೆಲ್‌ಫೋನ್ ರಿಪೇರಿ ತರಬೇತಿ: ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನ

ಉಚಿತ ಸೆಲ್‌ಫೋನ್ ರಿಪೇರಿ ತರಬೇತಿ: ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನ Free 31-day mobile phone repair training for…

2 days ago

ಹೊಸನಗರದಲ್ಲಿ ನಾಳೆ ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆ, ಬಹಿರಂಗ ಸಭೆ

ಹೊಸನಗರದಲ್ಲಿ ನಾಳೆ ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆ, ಬಹಿರಂಗ ಸಭೆ Farmers and agricultural workers will hold a…

2 days ago