District Okkaligar Sangh Director Election Result Announced | Allegation of malpractice in election – Complaint
ಶಿವಮೊಗ್ಗ ಒಕ್ಕಲಿಗ ಸಂಘದ ಜಿಲ್ಲಾ ಸಂಘದ 21 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು 20 ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ. ಈ ಚುನಾವಣೆಯಲ್ಲಿ ಲೋಪ ನಡೆದಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿ ದೂರು ಸಲ್ಲಿಸಿರುವ ಘಟನೆ ನಡೆದಿದೆ.
ಭಾನುವಾರ ನಡೆದ ಚುನಾವಣೆಯಲ್ಲಿ ಲೋಪ ನಡೆದಿದೆ ಕೂಡಲೇ ಫಲಿತಾಂಶ ತಡೆ ಹಿಡಿದು ಮರುಎಣಿಕೆ ನಡೆಸಬೇಕು ಎಂದು ಒತ್ತಾಯಿಸಿ ಒಕ್ಕಲಿಗ ಸಂಘದ ಸದಸ್ಯರಾದ ದೇವೇಂದ್ರಪ್ಪ ರವರು ಚುನಾವಣಾಧಿಕಾರಿ ಕೃಷ್ಣಪ್ಪ ರವರಿಗೆ ದೂರು ಸಲ್ಲಿಸಿದ್ದಾರೆ.
ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಮೇಶ್ ಹೆಗ್ಡೆ 2001 ಮತಗಳನ್ನ ಪಡೆದು ಮೊದಲ ಆಯ್ಕೆಯಾಗಿದ್ದಾರೆ.ಮೂರು ಜನ ಮಹಿಳೆಯರಿಗೆ ಮೀಸಲಿದ್ದ ಸ್ಥಾನಕ್ಕೆ 6 ಜನ ಸ್ಪರ್ಧಿಸಿದ್ದರು. ಭಾನುವಾರ 12-30 ರಾತ್ರಿಯ ವರೆಗೂ ಮತ ಎಣಿಕೆಯಾಗಿದ್ದು ಆಯ್ಕೆ ವಿಚಾರದಲ್ಲಿ ಗೊಂದಲ ಮುಂದುವರೆದಿದೆ.
ಈ ಕುರಿತು ಸಂಘದ ಕಾರ್ಯಕಾರಿಣಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ರಮೇಶ್ ಹೆಗಡೆ, ಡಾ.ಕಡಿದಾಳ್ ಗೋಪಾಲ, ರವಿ ಕುಮಾರ್ ಸೇರಿ 20 ಜನ ಆಯ್ಕೆಯಾಗಿದ್ದಾರೆ. ಮಹಿಳೆಯರ ಆಯ್ಕೆ ಏನಾಗಲಿದೆ ಕಾದು ನೋಡಬೇಕಿದೆ.
ಚುನಾವಣೆಗಳಲ್ಲಿ 29 ಜನ ಸ್ಪರ್ಧಿಸಿದ್ದರು. 21 ಜನರ ಸಿಂಡಿಕೇಟ್ ನಿರ್ಮಿಸಿದ್ದರು. 4137 ಮತಗಳಲ್ಲಿ 2599 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ 2024ರ ಸದಸ್ಯರ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಮತ್ತು ಮತಗಳು ಹೀಗಿವೆ
1) ಬಿ ಎ ರಮೇಶ್ ಹೆಗ್ಡೆ= 2001, 2) ರವಿಕುಮಾರ್ =1856, 3) ಡಾ. ಕಡಿದಾಳ್ ಗೋಪಾಲ್=1805 , 4) ಆಶಿತ್ ಬಳಗಟ್ಟೆ =1630, 5) ಬಂಡೆ ವೆಂಕಟೇಶ್ =1527, 6) ಸುದರ್ಶನ್ ತಾಯಿಮನೆ = 1461, 7) ಎಂ ಎ ರಮೇಶ ಹೆಗ್ಡೆ = 1442, 8) ಉಂಬಳೇಬೈಲು ಮೋಹನ್ = 1436, 9) ಪುಟ್ಟಸ್ವಾಮಿ =1417, 10) ಆದಿಮೂರ್ತಿ =1410, 11) ಪ್ರತಿಮಾ ಡಾಕಪ್ಪ=1367, 12) ರಮೇಶ್ ಬಿ ನಾಯಕ್=1366, 13) ನೀರುಳ್ಳಿ ನಾಗರಾಜ್ =1342, 14) ಸುಂದರೇಶ್ =1301 15) ಸುಮಿತ್ರ ಕೇಶವಮೂರ್ತಿ=1298, 16) ಭಾರತಿ ರಾಮಕೃಷ್ಣ =1262, 17) ಚೇತನ್ =1260, 18) ಅನ್ನಪೂರ್ಣ =1259, 19) ಸಹನಾ =1055, 20) ವನಮಾಲ =1031 ಮತಗಳನ್ನ ಪಡೆದಿದ್ದಾರೆ.
District Okkaligar Sangh Director Election Result Announced | Allegation of malpractice in election – Complaint
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

- ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್