Ripponpete | ಹೆಚ್ಚುತ್ತಿರುವ ಡೆಂಗ್ಯೂ – ಖಾಸಗಿ ಮೆಡಿಕಲ್ ಶಾಪ್ ಗಳಿಗೆ ವಾರ್ನಿಂಗ್ ಕೊಟ್ಟ ಪಿಎಸ್‌ಐ ಪ್ರವೀಣ್

Ripponpete | ಹೆಚ್ಚುತ್ತಿರುವ ಡೆಂಗ್ಯೂ – ಖಾಸಗಿ ಮೆಡಿಕಲ್ ಶಾಪ್ ಗಳಿಗೆ ವಾರ್ನಿಂಗ್ ಕೊಟ್ಟ ಪಿಎಸ್‌ಐ ಪ್ರವೀಣ್

ರಿಪ್ಪನ್‌ಪೇಟೆ : ಪಟ್ಟಣದ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಮರಣ ಮೃದಂಗ ಬಾರಿಸುತಿದ್ದು ಈಗಾಗಲೇ ಒಬ್ಬರು ಸಾವನ್ನಪ್ಪಿ ನೂರಕ್ಕೂ ಹೆಚ್ಚು ಜನ ಡೆಂಗ್ಯೂ ಜ್ವರದಿಂದ ತೀರ್ಥಹಳ್ಳಿ, ಶಿವಮೊಗ್ಗ ಹಾಗೂ ಸಾಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.


ಈ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಪಟ್ಟಣದ ಎಲ್ಲ ಖಾಸಗಿ ಮೆಡಿಕಲ್ ಶಾಪ್ ಗಳಿಗೆ ತೆರಳಿ ವೈದ್ಯರ ಚೀಟಿಯಿಲ್ಲದೇ ಜ್ವರ ಸಂಬಂಧಿತ ಖಾಯಿಲೆಗಳಿಗೆ ಔಷಧ ನೀಡದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಡೆಂಗ್ಯೂ ಲಕ್ಷಣವಿರುವ ರೋಗಿಗಳು ಪಟ್ಟಣದ ಮೆಡಿಕಲ್ ನಲ್ಲಿ ಜ್ವರದ ಮಾತ್ರೆ ತಿಂದು ಆ ಕ್ಷಣಕ್ಕೆ ಗುಣಮುಖರಾಗಿ ಮಾರನೇ ದಿನ ಮತ್ತೆ ಜ್ವರ ಕಾಣಿಸಿಕೊಂಡು ಮತ್ತೆ ಮೆಡಿಕಲ್ ಗೆ ಮಾತ್ರೆಗೆ ಮೊರೆ ಹೋಗುತ್ತಾರೆ.ಕೊನೆಗೆ ಬಿಳಿರಕ್ತ ಕಣಗಳು ತೀವ್ರವಾಗಿ ಕ್ಷೀಣಿಸಿದ ನಂತರ ಆಸ್ಪತ್ರೆಯ ಕಡೆಗೆ ಮುಖ ಮಾಡುತ್ತಾರೆ ಹಾಗಾಗಿ ಯಾವುದೇ ಕಾರಣಕ್ಕೂ ಜ್ವರಕ್ಕೆ ಸಂಬಂಧಿಸಿದ ಖಾಯಿಲೆಗಳಿಗೆ ವೈದ್ಯರ ಚೀಟಿಯಿಲ್ಲದೇ ಔಷಧ ನೀಡಬೇಡಿ ಎಂದು ಪಿಎಸ್‌ಐ ಪ್ರವೀಣ್ ಎಸ್ ಪಿ ವಾರ್ನಿಂಗ್ ನೀಡಿದ್ದಾರೆ.


ಆರೋಗ್ಯ ಇಲಾಖೆಯಿಂದಲೂ ಪಟ್ಟಣ ವ್ಯಾಪ್ತಿಯ ಎಲ್ಲಾ ಖಾಸಗಿ ಕ್ಲಿನಿಕ್ , ಲ್ಯಾಬ್ ಹಾಗೂ ಮೆಡಿಕಲ್ ಶಾಪ್ ಗಳಿಗೆ ನೋಟೀಸ್ ಜಾರಿ ಮಾಡಿದ್ದು ಜ್ವರಕ್ಕೆ ಸಂಬಂಧಿಸಿದ ರೋಗಿಗಳ ಬಗ್ಗೆ ತತ್ತಕ್ಷಣ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಈ ಸಂಧರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ್ , ಸಂತೋಷ್ ಕೊರವರ ಹಾಗೂ ಮಧುಸೂಧನ್ ಇದ್ದರು.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಸಾಗರ ತಾಲೂಕಿನ ಮಡಸೂರಿನಲ್ಲಿ ವ್ಯಕ್ತಿ ಹತ್ಯೆ: ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ತೆರಳಿದ್ದ ವೇಳೆ ಕೃತ್ಯ

ಸಾಗರ ತಾಲೂಕಿನ ಮಡಸೂರಿನಲ್ಲಿ ವ್ಯಕ್ತಿ ಹತ್ಯೆ: ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ತೆರಳಿದ್ದ ವೇಳೆ ಕೃತ್ಯ A man identified…

1 day ago

ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು

ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು SSLC student Krishna drowned while swimming in Tunga Channel…

1 day ago

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ Shivamogga witnessed a grand and peaceful Eid Milad procession…

1 day ago

ಹುಂಚ ಆಸ್ಪತ್ರೆಯ ಶವಾಗಾರಕ್ಕೆ ಕೊನೆಗೂ ‘ಮುಹೂರ್ತ’: DHO ಭೇಟಿ, ಬಾಕಿ ಕಾಮಗಾರಿ ಆರಂಭ

ಹುಂಚ ಶವಾಗಾರಕ್ಕೆ ಕೊನೆಗೂ ‘ಮುಹೂರ್ತ’: DHO ಭೇಟಿ, ಬಾಕಿ ಕಾಮಗಾರಿ ಆರಂಭ Postman News report brings action on…

1 day ago

ಸಿದ್ದರಮಟ್ಟಿ ಬಳಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, ₹31,350 ಮೌಲ್ಯದ ಗಾಂಜಾ ಜಪ್ತಿ

ಸಿದ್ದರಮಟ್ಟಿ ಬಳಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, ₹31,350 ಮೌಲ್ಯದ ಗಾಂಜಾ ಜಪ್ತಿ Two accused persons were…

1 day ago

ಬೀದಿ ನಾಯಿಗಳ ದಾಳಿಗೆ ಆರು ಕುರಿ ಮರಿಗಳು ಸಾವು

ಬೀದಿ ನಾಯಿಗಳ ದಾಳಿ: ಆರು ಕುರಿಗಳು ಸಾವು Six sheep belonging to a resident of Sagar were…

1 day ago