Ripponpete | ಪ್ರತಿಯೊಬ್ಬರಿಗೂ ಸಮಾಜ ಸೇವೆ ಮಾಡುವ ಅವಕಾಶವಿದೆ : ಹೆಚ್ ಎಲ್ ರವಿ

ರಿಪ್ಪನ್ ಪೇಟೆಯಲ್ಲಿ  ರೋಟರಿ ಪದವಿ ಪ್ರಮಾಣ ಸಮಾರಂಭ.
ಪ್ರತಿಯೊಬ್ಬರಿಗೂ ಸಮಾಜ ಸೇವೆ ಮಾಡುವ ಅವಕಾಶವಿದೆ : ಹೆಚ್. ಎಲ್. ರವಿ

ರಿಪ್ಪನ್ ಪೇಟೆ : ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಸಮಾಜ ಸೇವೆ ಮಾಡುವ ಅವಕಾಶವಿರುತ್ತದೆ. ಆ ಅವಕಾಶಗಳನ್ನು ಉಪಯೋಗಿಸಿ ಕೊಳ್ಳುವುದರ ಮೂಲಕ  ಸಮಾಜ ಸೇವೆಗೆ ಮುಂದಾಗ ಬೇಕೆಂದು ರೋಟರಿ ಜಿಲ್ಲಾ 3182 ರ ಮಾಜಿ ಗವರ್ನರ್ ರೋ. ಹೆಚ್. ಎಲ್. ರವಿ ಹೇಳಿದರು.


ಪಟ್ಟಣದ ರೋಟರಿ ಕ್ಲಬ್ ವತಿಯಿಂದ  ಜಿ. ಎಸ್. ಬಿ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದ್ದ ರಿಪ್ಪನ್ ಪೇಟೆ ರೋಟರಿ ಕ್ಲಬ್ ನ  ನೂತನ ಪದಾಧಿಕಾರಿಗಳ  ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು ರೋಟರಿ ಸಂಸ್ಥೆ ಅಂತರ್ ರಾಷ್ಟ್ರೀಯ ಸಂಸ್ಥೆ ಯಾಗಿದ್ದು  ಸಮಾಜ ಸೇವೆ ಮಾಡುವ  ಸದುದ್ದೇಶದಿಂದ ಪ್ರಪಂಚದ 225 ಅಧಿಕ ರಾಷ್ಟ್ರಗಳಲ್ಲಿ  ರೋಟರಿ ಸಂಸ್ಥೆ ಸ್ಥಾಪನೆಯಾಗಿದ್ದು  ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ  ಗಣನೀಯವಾಗಿ ಸೇವೆ ಸಲ್ಲಿಸುತ್ತಿದೆ. ಹಾಗೆಯೇ ನಮ್ಮ ಜಿಲ್ಲೆಯಲ್ಲಿ ಸಹ  ritsrಸಂಸ್ಥೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವುದರ ಮೂಲಕ  ನೂರಾರು ಸಂಖ್ಯೆಯಲ್ಲಿ ಉಚಿತ ಆರೋಗ್ಯ ಶಿಬಿರ, ನೇತ್ರ ತಪಾಸಣಾ ಶಿಬಿರ ಹಾಗೂ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶಿಬಿರಗಳನ್ನು ಆಯೋಜಿಸುವುದರ ಮೂಲಕ ಸಮಾಜ ಸೇವೆಯಲ್ಲಿ ರೋಟರಿ ಸಂಸ್ಥೆ  ಮುಂಚೂಣಿಯಲ್ಲಿದೆ. ಪ್ರತಿಯೊಬ್ಬರು  ರೋಟರಿ ಸಂಸ್ಥೆ ಹಾಗೆಯೇ ಸಮಾಜದಲ್ಲಿನ ಸೇವಾ ಸಂಸ್ಥೆಯೊಂದಿಗೆ ಗುರುತಿ ಸಿಕೊಳ್ಳುವುದರ ಮೂಲಕ  ಸಮಾಜ ಸೇವೆಗೆ ಮುಂದಾಗಬೇಕು ಎಂದರು.


ರೋಟರಿ 3182ರ  ಅಸಿಸ್ಟೆಂಟ್ ಗವರ್ನರ್  ರೋ. ಹೆಚ್. ಎಂ. ಸುರೇಶ್ ಮಾತನಾಡಿ  ಸಮಾಜ ಸೇವೆಯನ್ನು ಮಾಡಬೇಕೆ ಎನ್ನುವ  ಸದುದ್ದೇಶದಿಂದ  ರೋಟರಿ ಸಂಸ್ಥೆಗೆ ಸೇರಿ  ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿರುವ ರಿಪ್ಪನ್ ಪೇಟೆ ರೋಟರಿ ಸಂಸ್ಥೆ ಅನೇಕ  ಸಮಾಜ ಸೇವಾಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ  ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದೆ  ಇದು ಸಂತಸದ ಸಂಗತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ರೋಟರಿ ಕ್ಲಬ್ಬಿನ ಅಧ್ಯಕ್ಷ  ಆರ್. ಎಚ್. ದೇವದಾಸ್ ವಹಿಸಿದ್ದರು.

ಪದಗ್ರಹಣ ಕಾರ್ಯಕ್ರಮದಲ್ಲಿ  ನೂತನ ಅಧ್ಯಕ್ಷರಾಗಿ ರಾಮಚಂದ್ರ ಕೆರೆಹಳ್ಳಿ, ಕಾರ್ಯದರ್ಶಿಯಾಗಿ  ಸಬಾಸ್ಟಿನ್  ಮ್ಯಾಥ್ಯೂ ಸ್  ಪದವಿ ಸ್ವೀಕರಿಸಿದರು.


ಕಾರ್ಯಕ್ರಮದಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಎಸ್ಎಸ್ ಎಲ್ ಸಿ. ದ್ವಿತೀಯ ಪಿಯುಸಿ ಹಾಗೂ ಅಂತಿಮ ಪದವಿ ತರಗತಿಗಳಲ್ಲಿ   ಗೌರವಿಸಿ ಸನ್ಮಾನಿಸಲಾಯಿತು.

ರೋಟರಿ 3182 ವಲಯ ಹನ್ನೊಂದರ ಝೋನಲ್ ಲೆಫ್ಟಿನೆಂಟ್  ರಾಧಾಕೃಷ್ಣ ಜೆ,,   ಸಂಸ್ಥೆಯ ಪದಾಧಿಕಾರಿಗಳಾದ ಎಂ. ಬಿ. ಲಕ್ಷ್ಮಣಗೌಡ, ರಾಧಾಕೃಷ್ಣ ಹೆಚ್. ಎ., ಸಾಜಿ ಜೇಕಬ್, ತಾನಾರಾಮ್ ಪಾಟೀಲ್ ,ಡಾಕಪ್ಪ,ಜಂಬಳ್ಳಿ ಸದಾನಂದ, ನಾಗಭೂಷಣ್ ಆರ್,. ಅಶೋಕ್, ರವೀಂದ್ರ ಬಲ್ಲಾಳ್, ಶಿವಕುಮಾರ್ ಶೆಟ್ಟಿ, ಪ್ರಮೀಳಾ ಲಕ್ಷ್ಮಣಗೌಡ, ಸವಿತಾ ರಾಧಾಕೃಷ್ಣ, ಪ್ರವೀಣಿ ಮಂಜುನಾಥ್, ಅಮಿತಾ ಬಲ್ಲಾಳ್, ವಿಕ್ಟೋರಿಯಾ ಸೆಬಾಸ್ಟಿಯನ್, ದೀಪಾ ಗಣೇಶ್, ಇನ್ನಿತರರಿದ್ದರು.

ಸಂಧ್ಯಾ ಕಾಮತ್ ಪ್ರಾರ್ಥಿಸಿ, ಎಂ.ಬಿ ಲಕ್ಷ್ಮಣಗೌಡ  ಸ್ವಾಗತಿಸಿ.ಆರ್ ಗಣೇಶ್., ಮತ್ತು ಎಂ.ಬಿ ಮಂಜುನಾಥ್ ಕಾರ್ಯಕ್ರಮವನ್ನು ನಿರೂಪಿಸಿ,ಸಬಾಸ್ಟಿನ್  ಮ್ಯಾಥ್ಯೂಸ್ ವಂದಿಸಿದರು.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಸಾಗರ ತಾಲೂಕಿನ ಮಡಸೂರಿನಲ್ಲಿ ವ್ಯಕ್ತಿ ಹತ್ಯೆ: ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ತೆರಳಿದ್ದ ವೇಳೆ ಕೃತ್ಯ

ಸಾಗರ ತಾಲೂಕಿನ ಮಡಸೂರಿನಲ್ಲಿ ವ್ಯಕ್ತಿ ಹತ್ಯೆ: ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ತೆರಳಿದ್ದ ವೇಳೆ ಕೃತ್ಯ A man identified…

1 day ago

ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು

ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು SSLC student Krishna drowned while swimming in Tunga Channel…

1 day ago

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ Shivamogga witnessed a grand and peaceful Eid Milad procession…

1 day ago

ಹುಂಚ ಆಸ್ಪತ್ರೆಯ ಶವಾಗಾರಕ್ಕೆ ಕೊನೆಗೂ ‘ಮುಹೂರ್ತ’: DHO ಭೇಟಿ, ಬಾಕಿ ಕಾಮಗಾರಿ ಆರಂಭ

ಹುಂಚ ಶವಾಗಾರಕ್ಕೆ ಕೊನೆಗೂ ‘ಮುಹೂರ್ತ’: DHO ಭೇಟಿ, ಬಾಕಿ ಕಾಮಗಾರಿ ಆರಂಭ Postman News report brings action on…

1 day ago

ಸಿದ್ದರಮಟ್ಟಿ ಬಳಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, ₹31,350 ಮೌಲ್ಯದ ಗಾಂಜಾ ಜಪ್ತಿ

ಸಿದ್ದರಮಟ್ಟಿ ಬಳಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, ₹31,350 ಮೌಲ್ಯದ ಗಾಂಜಾ ಜಪ್ತಿ Two accused persons were…

1 day ago

ಬೀದಿ ನಾಯಿಗಳ ದಾಳಿಗೆ ಆರು ಕುರಿ ಮರಿಗಳು ಸಾವು

ಬೀದಿ ನಾಯಿಗಳ ದಾಳಿ: ಆರು ಕುರಿಗಳು ಸಾವು Six sheep belonging to a resident of Sagar were…

1 day ago