Headlines

ಅಪ್ರಾಪ್ತನಿಂದ ಬೈಕ್ ಚಾಲನೆ – ತಂದೆಗೆ ಬಿತ್ತು ಭಾರಿ ದಂಡ | ಅಪ್ರಾಪ್ತರಿಗೆ ಬೈಕ್ ಕೊಡುವ ಪೋಷಕರೇ ಹುಷಾರ್ | Thirthahalli

ಅಪ್ರಾಪ್ತನಿಂದ ಬೈಕ್ ಚಾಲನೆ – ತಂದೆಗೆ ಬಿತ್ತು ಭಾರಿ ದಂಡ | ಅಪ್ರಾಪ್ತರಿಗೆ ಬೈಕ್ ಕೊಡುವ ಪೋಷಕರೇ ಹುಷಾರ್ | Thirthahalli

ಅಪ್ರಾಪ್ತರಿಗೆ ಬೈಕ್ ಕೊಡಬಾರದು ಎಂದು ಹಲವು ಬಾರಿ ಎಚ್ಚರಿಕೆ ನೀಡಿದರೂ ಕೂಡ ಪೋಷಕರು ಎಚ್ಚೆತ್ತುಕೊಂಡಿಲ್ಲ. ಅಪ್ರಾಪ್ತರಿಗೆ ಬೈಕ್ ಕೊಟ್ಟರೆ 25 ಸಾವಿರಕ್ಕೂ ಹೆಚ್ಚು ದಂಡ ವಿಧಿಸಲಾಗುತ್ತದೆ.

ಇದೀಗ ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ತಂದೆಗೆ ಕೋರ್ಟ್ 25 ಸಾವಿರ ದಂಡ ವಿಧಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ.

ಬೈಕ್ ಚಲಾಯಿಸಿದ 17 ವರ್ಷದ ಬಾಲಕ ತೀರ್ಥಹಳ್ಳಿಯವನು ಎಂದು ತಿಳಿದು ಬಂದಿದೆ. ತೀರ್ಥಹಳ್ಳಿ ಟೌನ್ ದೊಡ್ಮನೆ ಕೇರಿ ಬಳಿ ಶಿವಮೊಗ್ಗ ಸಂಚಾರ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಬೈಕ್ ಚಲಾಯಿಸಿಕೊಂಡು ಬಂದ 17 ವರ್ಷದ ಬಾಲಕನನ್ನು ತಪಾಸಣೆ ನಡೆಸಿದಾಗ ಡಿಎಲ್ ಇಲ್ಲದಿರುವುದು ಹಾಗೂ ಆತ ಅಪ್ರಾಪ್ತ ಎಂಬುದು ಬಯಲಿಗೆ ಬಂದಿದೆ.

ಅಪ್ರಾಪ್ತ ಮಕ್ಕಳ ವಾಹನ ಚಾಲನೆ ಹಾಗೂ ಬೆಂಗಳೂರಿನ ರಸ್ತೆಗಳಲ್ಲಿ ಬೈಕ್ ವ್ಹೀಲಿಂಗ್ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಸಂಚಾರಿ ಪೊಲೀಸರು ಪೋಷಕರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

About The Author

Leave a Reply

Your email address will not be published. Required fields are marked *

Exit mobile version