Ripponpete | ಹರತಾಳು ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸಚಿವ ಹರತಾಳು ಹಾಲಪ್ಪ
ರಿಪ್ಪನ್‌ಪೇಟೆ : ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹೆಚ್ ಹಾಲಪ್ಪ ಹರತಾಳು ರವರು ಹರತಾಳು ಸರ್ಕಾರಿ ಶಾಲೆಗೆ ಆಗಮಿಸಿ ಮತ ಚಲಾಯಿಸಿದರು.
ಹೊಸನಗರ ತಾಲೂಕಿನ ಹರತಾಳು ಗ್ರಾಮದ ಮತಗಟ್ಟೆ 195 ರಲ್ಲಿ ಪ್ರಥಮ ಮತ ಚಲಾಯಿಸಿದ ಅವರು ನಂತರ ಮಾತನಾಡಿ ಮತದಾನ ಪ್ರತಿಯೊಬ್ಬರ ಹಕ್ಕು, ಪ್ರತಿಯೊಬ್ಬರು ಕೂಡ ತಪ್ಪದೆ ಮತ ಚಲಾಯಿಸಿ ಎಂದು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.


