ಆನಂದಪುರದ ಮಧ್ಯ ರಸ್ತೆಯಲ್ಲಿ ಲಾಂಗ್ ಝಳಪಿಸಿದ ಯುವಕ , ಸ್ಥಳೀಯರಿಂದ ಧರ್ಮಧೇಟು : ಅಷ್ಟಕ್ಕೂ ಅಲ್ಲಿ ನಡೆದದ್ದೇನು..?? Crime News
ಆನಂದಪುರ : ಇಲ್ಲಿನ ಹೆದ್ದಾರಿಯಲ್ಲೆ ಯುವಕನೊಬ್ಬ ಲಾಂಗ್ ಝಳಪಿಸಿ ಹೆದರಿಸಿದ್ದು ಇದರಿಂದ ಜನರು ಆತಂಕಗೊಂಡ ಘಟನೆ ನಡೆದಿದೆ.
ಆನಂದಪುರದ ಹೆದ್ದಾರಿಯಲ್ಲಿ ಯುವಕನೊಬ್ಬ ಲಾಂಗ್ ಹಿಡಿದು ರೋಡಲ್ಲಿ ಬೀಸಿದ್ದಾನೆ. ವೆಹಿಕಲ್‌ಗಳ ಮೇಲೆ ಆತ ಲಾಂಗ್ ಬೀಸಿದ್ದಾನೆ ಎನ್ನಲಾಗಿದೆ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಈ ಹೈಡ್ರಾಮಾ ನಡೆದಿದೆ ಎನ್ನಲಾಗುತಿದ್ದು,ಇದರಿಂದ ರಸ್ತೆಯಲ್ಲಿ ಪ್ರಯಾಣಿಸುತಿದ್ದ ವಾಹನ ಮಾಲೀಕರು ಕೆಲಕಾಲ ಆತಂಕಗೊಂಡಿದ್ದಾರೆ.
ಮದುವೆ ಮನೆಯ ಗಲಾಟೆ ವಿಕೋಪಕ್ಕೆ ತೆರಳಿದೆ ಎನ್ನಲಾಗುತಿದ್ದು ಈ ಗಲಾಟೆ ಬೆನ್ನಲ್ಲೆ ಯುವಕರ ಕಡೆಯ ಇನ್ನೊಬ್ಬ ಯುವಕ ಆನಂದಪುರಕ್ಕೆ ಬಂದಿದ್ದಾನೆ. ಅಲ್ಲದೆ ಆನಂದಪುರ ಆಸ್ಪತ್ರೆಯ ಮುಂಭಾಗದಲ್ಲಿ ಕುಲುಮೆ ವ್ಯಾಪಾರಸ್ಥರು ಮಾರಾಟಕ್ಕೆ ಇಡಲಾಗಿದ್ದ ಲಾಂಗ್ ನ್ನು ಹಿಡಿದು ಅಲ್ಲಿದ್ದವರ ಮೇಲೆ ಬೀಸಲು ಆರಂಭಿಸಿದ್ದಾರೆ.
ಸಾಗರ ಮೂಲದ ಯುವಕನಿಂದ ಈ ಕೃತ್ಯವೊಂದು ನಡೆದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ರಂಪಾಟ ನಡೆಸಿದ್ದಾನೆ. ಸ್ಥಳೀಯರಿಂದ ಯುವಕನಿಗೆ ಗೂಸ ಬಿದ್ದಿದ್ದು, ಲಾಂಗ್ ಕಿತ್ತು ಕೆರೆಗೆ ಎಸೆದಿದ್ದಾರೆ.
ಯುವಕನ ಬಂಧನವಾಗಿದ್ದು ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ. ಈ ದೃಶ್ಯದಿಂದ ರಸ್ತೆಯಲ್ಲಿ ಸಾಗುತ್ತಿರುವ ವಾಹನಸವಾರರು ಬೆಚ್ಚಿಬಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್, ಆನಂದಪುರಂನಲ್ಲಿ ನಡೆದಿದ್ದ ಮದುವೆಯಲ್ಲಿ ಸಮೀರ್ ಮತ್ತು ಶಿವ ಎಂಬುವರು ಭಾಗಿಯಾಗಿದ್ದರು. ಶಿವ ಎಂಬುವನು ಸಾರ್ವಜನಿಕ ಸ್ಥಳದಲ್ಲಿ ಕಿರಿಕ್ ಮಾಡಿದ್ದರಿಂದ ಸುತ್ತಮುತ್ತಲಿನ ಜನ ಬೈದಿದ್ದಾರೆ.ಈ ಹಿನ್ನಲೆಯಲ್ಲಿ ತನ್ನ ಸ್ನೇಹಿತ ಸಮೀರ್ ಎಂಬುವನಿಗೆ ಕರೆ ಮಾಡಿ ಕರೆಸಿದ್ದಾನೆ. ಸಮೀರ್ ಬರುವಾಗ ಸ್ಥಳದಲ್ಲಿ ಬಳ್ಳಾರಿ ಮುಲದ ಕುಲುಮೆಯಲ್ಲಿರುವ ಲಾಂಗು ಹಿಡಿದು ಝಳಪಿಸಿದ್ದಾನೆ. ಸಾರ್ವನಿಕರು ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇವರಿಬ್ಬರು ಗಲಾಟೆ ಮಾಡಲು ಕಾರಣವೇನು ಎಂಬುದು ತನಿಖೆ ನಡೆಸಲಾಗುತ್ತಿದೆ. ಯುವಕರು ನಶೆಯಲ್ಲಿದ್ದರಾ? ಎಂಬುದನ್ನೂ ತಪಾಸಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್