Headlines

ಶ್ರೀಬಸವೇಶ್ವರ ಆಂಗ್ಲಮಾಧ್ಯಮ ಶಾಲೆ ಶೇ. 93% ಫಲಿತಾಂಶ | ರಿಪ್ಪನ್‌ಪೇಟೆ ಸರ್ಕಾರಿ ಪ್ರೌಡಶಾಲೆಗೆ 79.40% ಫಲಿತಾಂಶ | ಬೆಳ್ಳೂರು ಸರ್ಕಾರಿ ಪ್ರೌಢಶಾಲೆ 96% ರಷ್ಟು ಫಲಿತಾಂಶ

ಶ್ರೀಬಸವೇಶ್ವರ ಆಂಗ್ಲಮಾಧ್ಯಮ ಶಾಲೆ ಶೇ. 93 ಫಲಿತಾಂಶ

ರಿಪ್ಪನ್‌ಪೇಟೆ :  ಇಲ್ಲಿನ ಶ್ರೀಬಸವೇಶ್ವರ ಅಂಗ್ಲಮಾಧ್ಯಮ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಶೇ. 93 ರಷ್ಟು ಫಲಿತಾಂಶಗಳಿಸಿದೆ ಎಂದು ಮುಖ್ಯೋಪಾಧ್ಯಾಯ ಚಂದ್ರಪ್ಪ ತಿಳಿಸಿದರು.

ಬಸವೇಶ್ವರ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ನಿಶಾದ್ 625 ಕ್ಕೆ 597 ಅಂಕ ಗಳಿಸಿದ್ದಾನೆ.ಇವರು ರಿಪ್ಪನ್‌ಪೇಟೆಯ ವಿನಾಯಕನಗರದ ಅಬ್ದುಲ್ ರವೂಫ್ ಹಾಗೂ ವಹೀದಾ ದಂಪತಿಗಳ ಪುತ್ರನಾಗಿದ್ದಾರೆ.

ಒಟ್ಟು 28 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 26 ವಿದ್ಯಾರ್ಥಿಗಳು ಉತ್ತಿರ್ಣಾರಾಗಿದ್ದಾರೆ. ಅತ್ಯುನ್ನತ 11, ಪ್ರಥಮ ಸ್ಥಾನದಲ್ಲಿ 6, ದ್ವಿತೀಯ ಸ್ಥಾನ 4 ಮತ್ತು ತೃತೀಯ ಸ್ಥಾನದಲ್ಲಿ 5 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

———————————————————–

ರಿಪ್ಪನ್‌ಪೇಟೆ ಸರ್ಕಾರಿ ಪ್ರೌಡಶಾಲೆಗೆ 79.40% ಫಲಿತಾಂಶ


ರಿಪ್ಪನ್‌ಪೇಟೆ : ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪ್ರೌಢಶಾಲೆಗೆ ಶೇ. 79.40 ರಷ್ಟು ಫಲಿತಾಂಶ ಬಂದಿದೆ ಎಂದು ಉಪಪ್ರಾಚಾರ್ಯ ಕೆಸವಿನಮನೆ ರತ್ನಾಕರ್ ತಿಳಿಸಿದರು.

ಶಾಲೆಯ ವಿದ್ಯಾರ್ಥಿ ಸುಮುಖ 625ಕ್ಕೆ 593 ಅಂಕವನ್ನು ಪಡೆದಿರುತ್ತಾನೆ‌

165 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 131 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 4, ಪ್ರಥಮ ಸ್ಥಾನದಲ್ಲಿ 17, ದ್ವಿತೀಯ ಸ್ಥಾನದಲ್ಲಿ 42, ತೃತೀಯ ಸ್ಥಾನದಲ್ಲಿ 68, ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆಂದರು.

—————————————————-

ಬೆಳ್ಳೂರು ಸರ್ಕಾರಿ ಪ್ರೌಢಶಾಲೆ 96% ರಷ್ಟು ಫಲಿತಾಂಶ

ರಿಪ್ಪನ್‌ಪೇಟೆ : ಇಲ್ಲಿನ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 96 ರಷ್ಟು ಫಲಿತಾಂಶ ಬಂದಿದೆ ಎಂದು ಮುಖ್ಯೋಪಾಧ್ಯಾಯ ಸೋಮಶೇಖರ ಬಂಡಿ ತಿಳಿಸಿದರು.

ಪರೀಕ್ಷೆಗೆ ಕುಳಿತವರು 27  ಉತ್ತೀರ್ಣಾರಾದವರು 26 ವಿದ್ಯಾರ್ಥಿಗಳು ಅದರಲ್ಲಿ ಅತ್ಯುನ್ನತ ಶ್ರೇಣಿ 5, ಪ್ರಥಮ ಸ್ಥಾನ 17, ದ್ವಿತೀಯ ಸ್ಥಾನ 4. ಒಟ್ಟು 26 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆಂದರು.

SSLC ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ವತಿಯಿಂದ ಅಭಿನಂದನೆಗಳು…….

Leave a Reply

Your email address will not be published. Required fields are marked *

Exit mobile version