ಮೂಲಭೂತ ಸೌಕರ್ಯಕ್ಕಾಗಿ ಈಚಲುಕೊಪ್ಪ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ | Election Boycott
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ಈಚಲುಕೊಪ್ಪ ಗ್ರಾಮದಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಕೇಳಿ ಬಂದಿದೆ. ಇನ್ನೇನು ಲೋಕಸಭಾ ಚುನಾವಣೆಗೆ 7 ದಿನ ಬಾಕಿ ಇರುವಾಗಲೇ ನಮ್ಮೂರಿಗೆ ಚುನಾವಣಾ ಪ್ರಚಾರಕ್ಕೆ ಯಾರೂ ಬರಬಾರದೆಂದು ಗ್ರಾಮಸ್ಥರು ನಿರ್ಬಂಧ ವಿಧಿಸಿ ಪ್ಲೆಕ್ಸ್ ಅಳವಡಿಸಿದ್ದಾರೆ.
ಶರಾವತಿ ಮುಳುಗಡೆಯಿಂದಾಗಿ ಆಸ್ತಿಪಾಸ್ತಿ ಮನೆಮಠ ಕಳೆದುಕೊಂಡು ನೆಲೆಯರಸಿ ಈಚಲುಕೊಪ್ಪ, ಬಗ್ಗಳ, ಹಲುಸಾಲೆ ಮಳವಳ್ಳಿ, (ಕಾಪೇರ ಮನೆ )ಗಳಿಗೆ ಬಂದ 40ಕ್ಕೂ ಹೆಚ್ಚು ಕುಟುಂಬಗಳಿಗೆ ಮುಳುಗಡೆಯಾಗಿ 65 ವರ್ಷ ಕಳೆದರೂ ಮೂಲಭೂತ ಸೌಲಭ್ಯ ಇನ್ನೂ ಮರೀಚಿಕೆಯಾಗೆ ಉಳಿದಿದೆ.
ಮಳೆಗಾಲದಲ್ಲಿ ಈ ಕುಟುಂಬಗಳ ಪರಿಸ್ಥಿತಿ ತೀರಾ ಕಷ್ಟಕರವಾಗಿದೆ.
ಮೂಲಭೂತ ಸೌಕರ್ಯಕ್ಕಾಗಿ ಈಗಾಗಲೆ ಸುಮಾರು 65 ವರ್ಷದಿಂದ ರಸ್ತೆಗಾಗಿ ಹೋರಾಟ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಮತ್ತೆ ಏನಕ್ಕೆ ಬೇಕು ಚುನಾವಣೆ?? ಏನಕ್ಕೆ ಬೇಕು ರಾಜಕಾರಣಿಗಳು?? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಮಳೆಗಾಲದ ಸನ್ನಿವೇಶದಲ್ಲಿ ಯಾವುದೇ ವಾಹನಗಳು ಬರಲಾಗದ ಪರಿಸ್ಥಿತಿ ಊರಿನದ್ದು,ಕಳೆದ 65 ವರ್ಷಗಳಲ್ಲಿ ಆಶ್ವಾಸನೆ ಗಳಿಂದ ಜನರಿಂದ ಮತವನ್ನು ಕೇಳಿರುವುದು ಬಿಟ್ಟರೆ ,ಹೇಳಿ ಕೊಳ್ಳುವುದಕ್ಕೂ ಯಾವುದೇ ಅಭಿವೃದ್ಧಿ ಆಗಿಲ್ಲ. ವಯಸ್ಕರು ಅಸ್ಪತೆ ಗೆ ಹೋಗಬೇಕಾದರೆ ಅಥವಾ ಮಕ್ಕಳು ಶಾಲೆಗಳಿಗೆ ಹೋಗವರಿಗೆ ತುಂಬಾ ಕಷ್ಟದ ಪರಿಸ್ಥಿತಿ ಈ ಊರಿನಲ್ಲಿದೆ ಎಂದು ದೂರಿದರು.
ರಾಜಕೀಯ ಪ್ರಮುಖರು ಮತ ಕೇಳುವುದಕ್ಕೆ ಬರುವಾದರೆ ದಯವಿಟ್ಟು ಬರಲೇಬೇಡಿ…ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಿ ಅಭಿವೃದ್ಧಿಯೊಂದಿಗೆ ಬನ್ನಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಈ ಗ್ರಾಮಕ್ಕೆ ಸುಮಾರು 3.5 km ರಸ್ತೆಯ ಅವಶ್ಯಕತೆ ಇದೆ, ಪ್ರತಿವರ್ಷ ಗ್ರಾಮಸ್ಥರೇ ಸೇರಿ ರಸ್ತೆಗೆ ಮಣ್ಣು ತುಂಬಿಸಿ ರಸ್ತೆ ಮಾಡಿಕೊಂಡರು ಸುರಿಯುವ ಮಳೆಯಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿ ಬರಿ ಕಲ್ಲುಗಳು ರಸ್ತೆಯ ಮೇಲೆ ಉಳಿಯುವಂತಾಗಿದೆ,
ಆ ರಸ್ತೆಯಲ್ಲಿ ವಾಹನವಿರಲಿ ಕಾಲ್ನಡಿಗೆಯಲ್ಲಿ ಕೂಡ ಚಲಿಸಲು ಈ ರಸ್ತೆ ಯೋಗ್ಯವಾಗಿಲ್ಲ. ಮಳೆಗಾಲದಲ್ಲಿ ಸಂಪೂರ್ಣ ರಸ್ತೆ ಜಖಂಗೊಂಡು ವಾಹನಗಳು ಯಾವುದು ಬರುವುದಿಲ್ಲ , ಈ ಎಲ್ಲಾ ವಿಷಯಗಳು ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರಿಗೂ ತಿಳಿದಿದ್ದರು ಅದರಿಂದ ಯಾವುದೇ ಉಪಯೋಗಗಳು ವಾಗಿಲ್ಲ.
ಆದ್ದರಿಂದ ಇಷ್ಟು ವರ್ಷಗಳು ಮತ ನೀಡಿಯೂ ಕೂಡ ಯಾವುದೇ ಮೂಲಭೂತ ಸೌಕರ್ಯಗಳು ಸಿಕ್ಕಿರುವುದಿಲ್ಲ ಅದಕ್ಕಾಗಿ ಬಗ್ಗಳ, ಈಚಲುಕೊಪ್ಪ, ಹಲುಸಾಲೆ ಮಳವಳ್ಳಿ(ಕಾಪೇರ ಮನೆ )ಯ ಸುಮಾರು 250-300 ಜನರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿರುತ್ತಾರೆ. KPC ಅವರ ಕಡೆಯಿಂದಲೂ ನಮಗೆ ರಸ್ತೆ ಮಾಡಿಕೊಡದಿರುವುದು ಇವರ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ…ಹಲವು ಬಾರಿ ತಾಲೂಕಿನ ಜನಪ್ರತಿನಿದಿನಗಳು, ಅಧಿಕಾರಿಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ… ಆದ್ದರಿಂದ ಎಲ್ಲಾ ಗ್ರಾಮಸ್ಥರು ಬೇಸತ್ತು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ವರದಿ : ಶಶಿಕುಮಾರ್ ಹರತಾಳು


