ಅಪ್ರಾಪ್ತೆಗೆ ಯುವಕನಿಂದ ಕಿರುಕುಳ – ಪೋಕ್ಸೋ ಪ್ರಕರಣ ದಾಖಲು | Pocso
 ಅಪ್ರಾಪ್ತ ಯುವತಿಗೆ ಯುವಕನೋರ್ವ ಚುಡಾಯಿಸಿದ್ದಲ್ಲದೇ ಆಕೆಯ ಹಿಂದೆ ಸುತ್ತುತ್ತಿದ್ದ ಎಂಬ ದೂರಿನ ಆಧಾರದ ಮೇಲೆ ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣವೊಂದು ದಾಖಲಾಗಿದೆ.
 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನ್ಯಾಯಾಧೀಶರ ಮುಂದೆ ಹಾಜರಾಗಿ ಯುವತಿ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು ಅಷ್ಟೇ ಅಲ್ಲದೆ ಯುವತಿಯ ಹೇಳಿಕೆ ಪಡೆದಿರುವ ಪೊಲೀಸರು ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
 ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
 


