ಆನಂದಪುರ : ಇಲ್ಲಿನ ಕೊರಲಿಕೊಪ್ಪ ಗ್ರಾಮದ ಹೆದ್ದಾರಿಯಲ್ಲಿ ರಸ್ತೆಗೆ ಬಾಗಿರುವ ಬೃಹತ್ ಮರವೊಂದು ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಸಾಧ್ಯತೆಗಳಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ.
ಕೊರಲಿಕೊಪ್ಪದ ಭೂತರಾಯನ ಗುಡಿ ಬಳಿ ಇರುವ ಈ ಮರವು ರಸ್ತೆ ಅರ್ಧ ಬಾಗಿದ್ದು, ಅದರ ಮೇಲೆ ವಿದ್ಯುತ್ ಲೈನ್ ಕೂಡ ಹಾದುಹೋಗುತ್ತಿದೆ.
ನಿನ್ನೆ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಮರ ರಸ್ತೆಗೆ ಅಡ್ದಲಾಗಿ ಬಾಗಿದ್ದು ಭಾರಿ ಅನಾಹುತಕ್ಕೆ ಕಾದುಕುಳಿತಂತಿದೆ.ಈ ಬಗ್ಗೆ ಸ್ಥಳೀಯರು ಸಂಭಂಧಪಟ್ಟ ಮೆಸ್ಕಾಂ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗೆ ಮಾಹಿತಿ ತಿಳಿಸಿದ್ದರೂ ಇನ್ನು ಮರ ತೆರವು ಕಾರ್ಯಾಚರಣೆ ಕೈಗೊಂಡಿರುವುದಿಲ್ಲ.
ನಿನ್ನೆ ತೀರ್ಥಹಳ್ಳಿ ತಾಲೂಕಿನ ದೇಮ್ಲಾಪುರದಲ್ಲಿ ವ್ಯಕ್ತಿಯೊಬ್ಬರು ಬೈಕ್ ನಲ್ಲಿ ಚಲಿಸುತಿದ್ದಾಗ ಮರ ಬಿದ್ದು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಇನ್ನೊಂದು ಭಾರಿ ಅನಾಹುತಕ್ಕೆ ಈ ಮರ ಕಾದು ಕುಳಿತಂತಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಮರ ತೆರವುಗೊಳಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಲಿ ಎನ್ನುವುದೇ ಪೋಸ್ಟ್ ಮ್ಯಾನ್ ನ್ಯೂಸ್ ನ ಕಳಕಳಿ.