ರೈಲಿಗೆ ಸಿಲುಕಿ ಯುವಕ ಸಾವು | A young man died after being hit by a train
ಶಿವಮೊಗ್ಗ : ಟ್ರೈನ್ ಗೆ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಸೋಮಿನಕೊಪ್ಪದಲ್ಲಿ ನಡೆದಿದೆ.
ಭಾನುವಾರ ರಾತ್ರಿ ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ ಟ್ರೈನ್‌ಗೆ ಸಿಲುಕಿ ಶಿವಮೊಗ್ಗ ನಗರದ ನಿವಾಸಿ ಹೇಮಂತ್(24) ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಸೋಮಿನಕೊಪ್ಪ ಬಳಿ ಪಶುವೈದ್ಯಕೀಯ ಕಾಲೇಜಿನ ಸಮೀಪ ಸಿಗುವ ರೈಲ್ವೆ ಬ್ರಿಡ್ಜ್ ಸಮೀಪದಲ್ಲಿ ಸ್ನೇಹಿತರು ಕಳೆದುಕೊಂಡ ಮೊಬೈಲ್ ಹುಡುಕುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.



