Headlines

ಸ್ನೇಹಿತನ ಚೇಷ್ಟೆಗೆ ದುರಂತ ಅಂತ್ಯ ಕಂಡ ಡೆಲಿವರಿ ಬಾಯ್ – ತಮಾಷೆ ಮಾಡೋ‌ ಮುನ್ನ ಹುಷಾರ್ | Viral News

ಸ್ನೇಹಿತನ ಚೇಷ್ಟೆಗೆ ದುರಂತ ಅಂತ್ಯ ಕಂಡ ಡೆಲಿವರಿ ಬಾಯ್ – ತಮಾಷೆ ಮಾಡೋ‌ ಮುನ್ನ ಹುಷಾರ್ | Viral News

ಬಲೂನ್ ಗೆ ಗಾಳಿ ತುಂಬಿದರೆ ಹೇಗೆ ಊದಿಕೊಳ್ಳುತ್ತೆ ನೋಡಿದ್ದೀರಲ್ವಾ? ಅದೇ ರೀತಿ ಮನುಷ್ಯರಿಗೆ ಗಾಳಿ ತುಂಬಿದ್ರೆ ಹೇಗೆ ಕಾಣ್ತೀವಿ.? ಕಾರ್ಟೂನ್‌ ಚಿತ್ರಗಳ ನೆನಪಾಗುತ್ತೆ. ಅಲ್ವಾ..? ಆದರೆ ಇಲ್ಲೊಬ್ಬ ಸ್ನೇಹಿತನೊಂದಿಗೆ ತಮಾಷೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಬೈಕ್‌ ಸರ್ವೀಸ್‌ ಸೆಂಟರ್‌ನಲ್ಲಿ ಕೆಲಸ ಮಾಡ್ತಿದ್ದವನು ಅರೆಸ್ಟ್‌ ಆಗುವಂತ ಕೆಲಸ ಏನಪ್ಪ ಮಾಡಿದ್ದು ಅನ್ನೋದನ್ನು ನೋಡೋದಾದರೆ, ಈ ಫೋಟೋದಲ್ಲಿ ಕಾಣ್ತಿದ್ದಾನಲ್ಲ ಈತನ ಹೆಸರು ಯೋಗೇಶ್‌. ದೇವನಹಳ್ಳಿ ಬಳಿಯ ವಿಜಯಪುರದ ಈತ 4 ವರ್ಷದಿಂದ ನಾಗವಾರದ ಅಜ್ಜಿ ಮನೆಯಲ್ಲಿ ಇದ್ಕೊಂಡು ಸ್ವಿಗ್ಗಿ, ಜೊಮ್ಯಾಟೋದಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡ್ತಿದ್ದ. ಆದರೆ ವಿಧಿಯಾಟಕ್ಕೆ ಬಲಿಯಾಗಿದ್ದಾನೆ.

ಅಚ್ಚರಿ ಅನ್ನಿಸಿದರೂ ಇದು ಸತ್ಯ. ಮಾರ್ಚ್‌ 25ರಂದು ಸಂಪಿಗೆಹಳ್ಳಿಯ ಮೃತ ಯುವಕ ಯೋಗೇಶ್‌ ಬೈಕ್‌ ಸರ್ವೀಸ್‌ಗೆ ಅಂತಾ CNS ಬೈಕ್‌ ಸರ್ವೀಸ್‌ ಸೆಂಟರ್‌ಗೆ ಹೋಗಿದ್ದ. ಆದರೆ ಬೈಕ್‌ ಸರ್ವೀಸ್‌ ಮಾಡ್ತಿದ್ದ ಸ್ನೇಹಿತ ಮುರಳಿ, ಯೋಗೇಶ್‌ ಕಡೆಗೆ ಏರ್‌ ಪ್ರೆಶರ್‌ನಿಂದ ಗಾಳಿ ಬಿಟ್ಟಿದ್ದ. ಗಾಳಿ ಒತ್ತಡ ತಾಳಲಾರದ ಹಿಂದಕ್ಕೆ ತಿರುಗಿದಾಗ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದಾನೆ. ಕೂಡಲೇ ಹೊಟ್ಟೆ ಉಬ್ಬರ ಶುರುವಾಗಿ ಕುಸಿ ಬಿದ್ದಿದ್ದಾನೆ. ಕುರುಳು ಬ್ಲಾಸ್ಟ್‌ ಆಗಿ ಸತ್ತೇ ಹೋಗಿದ್ದಾನೆ.

CNS ಸರ್ವೀಸ್‌ ಸೆಂಟರ್‌ನಲ್ಲಿ ಸ್ನೇಹಿತ ಇದ್ದಾನೆ ಅನ್ನೋ ಕಾರಣಕ್ಕೆ ಅಲ್ಲಿಗೆ ಹೋಗಿದ್ದ ಯೋಗೇಶ್‌ ಸಾವನ್ನಪ್ಪಿದ್ದಾನೆ. ಸಂಪಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಾವಿಗೆ ಕಾರಣವಾದ ಮುರಳಿಯನ್ನು ಬಂಧಿಸಿದ್ದಾರೆ. ಕೊಲೆ‌ ಮಾಡೋ ಉದ್ದೇಶ ಇರಲಿಲ್ಲ. ತಮಾಷೆ ಮಾಡಲು ಹೋಗಿ ಹೀಗಾಯ್ತು ಅಂತಾ ಕಣ್ಣೀರು ಹಾಕಿದ್ದಾ‌ನೆ ಎನ್ನಲಾಗಿದೆ.

ಈ ಸ್ಟೋರಿಯಿಂದ ಗೊತ್ತಾದ ಸಂಗತಿ ಏನಪ್ಪ ಅಂದರೆ ಎಲ್ಲಾ ವಿಚಾರದಲ್ಲೂ ತಮಾಷೆ ಸರಿಯಲ್ಲ ಅನ್ನೋದು. ಬರ್ತ್‌ ಡೇ ಬಂಪ್ಸ್‌ ಅಂತಾ ಇತ್ತೀಚಿಗೆ ಓರ್ವ ಯುವಕನ ಕೊಲೆ ನಡೆದಿತ್ತು. ಇದೀಗ ಮತ್ತೊಂದು ತಮಾಷೆ ಮರ್ಡರ್‌, ಇತ್ತ ಕುಟುಂಬಕ್ಕೆ ಆಧಾರವಾಗಿದ್ದ 24 ವರ್ಷದ ಮಗನನ್ನು‌ ಕಳೆದುಕೊಂಡು ಇಡೀ ಕುಟುಂಬ ಕಣ್ಣೀರು ಹಾಕುವಂತಾಗಿದೆ.

Leave a Reply

Your email address will not be published. Required fields are marked *

Exit mobile version