Hosanagara | ರೀಲ್ಸ್ ರಾಣಿ ಸನ್ನಿಧಿಯ ಲವ್ , ಮ್ಯಾರೇಜ್ ದೋಖಾ – ಮಲೆನಾಡಿನ ಯುವಕರು ನೋಡಲೇಬೇಕಾದ ಸ್ಟೋರಿ ಇದು
ಮಲೆನಾಡಿನಲ್ಲೊಂದು ಲವ್, ಮ್ಯಾರೇಜ್ ಮೋಸ ಪ್ರಕರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ.
ಆದರೆ ವಿಚಿತ್ರವೇನೆಂದರೇ ಹಲವಾರು ಪ್ರಕರಣಗಳಲ್ಲಿ ಯುವಕ ಯುವತಿಗೆ ಮೋಸ ಲವ್ ,ಮ್ಯಾರೇಜ್ ದೋಖಾ ಮಾಮೂಲಿ ಆದರೆ ಈ ಪ್ರಕರಣ ಸ್ವಲ್ಪ ತದ್ವಿರುದ್ದವಾಗಿದೆ.
ಘಟನೆಯ ಹಿನ್ನಲೆ :
ಶಿವಮೊಗ್ಗದ ಬೊಮ್ಮನ್ ಕಟ್ಟೆಯ ನಿವಾಸಿ ಸಂಕೇತ್ ಎಂಬ ಯುವಕನಿಗೆ ಹೊಸನಗರ ತಾಲೂಕಿನ ಹೆಂಡೆಗದ್ದೆ ಗ್ರಾಮದ ನಿವಾಸಿ ಸನ್ನಿಧಿ ಎಂಬಾಕೆ ಮದುವೆಯಾಗಿ 20 ಲಕ್ಷ ಹಣವನ್ನು ಯುವತಿ ವಂಚಿಸಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಪ್ರೀತಿಸಿ ಮೋಸ ಮಾಡಿ ಹಣ ಪೀಕುವುದು ಇವಲ್ಲ ಖಯ್ಯಾಲಿ ಎಂದು ಸಂಕೇತ್ ದೂರಿದ್ದಾನೆ. ಆದರೆ ಯುವತಿ ಸಹ ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಪ್ರಕರಣ ದಾಖಲಿಸಿದ್ದಾಳೆ. ಈ ಪ್ರಕರಣ ದಾಖಲಾದ ಬೆನ್ನಲ್ಲೇ ಸಂಕೇತ್ ದೊಡ್ಡಪೆಟೆ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾನೆ.
ರೀಲ್ಸ್ ಸುಂದರಿಯ ಮ್ಯಾರೇಜ್ ದೋಖಾ
ಹಣಕ್ಕಾಗಿ ಮದುವೆಯಾಗೋದು ಇವಳ ಖಯಾಲಿಯಾಗಿದೆ. ಸೌಂದರ್ಯವತಿಯ ಹಿಂದೆ ಹೋಗುವ ಮಲೆನಾಡಿನ ಯುವಕರೇ ಎಚ್ಚರವಾಗಿರಿ ಎಂಬ ಸಂದೇಶವನ್ನು ಶಿವಮೊಗ್ಗ ನಗರದ ಸಂಕೇತ್ ನೀಡುತಿದ್ದಾರೆ. ಈತ ಯುವತಿಯಿಂದ ಲವ್, ಸೆಕ್ಸ್, ಮ್ಯಾರೇಜ್ ದೋಖಾಗೆ ಒಳಗಾಗಿ ಬರೋಬ್ಬರಿ 20 ಲಕ್ಷ ರೂ. ಕಳೆದುಕೊಂಡಿದ್ದಾನೆ.
ಇನ್ನು ಮೋಸ ಮಾಡಿದ ಯುವತಿ ಇಲ್ಲಿ ಕಾಣುತ್ತಿರುವ ಅಪ್ಪಟ ಸುಂದರಿ ಸನ್ನಿಧಿ ಎಚ್.ವೈ. ಈಕೆ ಮೂಲತಃ ಮಲೆನಾಡಿದ ಹೊಸನಗರ ತಾಲೂಕಿನ ನಗರ ಸಮೀಪದ ಹೆಂಡೆಗದ್ದೆ ಗ್ರಾಮದ ಯುವತಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಸನ್ನಿಧಿಗೆ ಪ್ರೀತಿಸಿ ಮದುವೆಯಾಗುವುದಾಗಿ ನಾಟಕವಾಡಿ ಮೋಸ ಮಾಡುವುದು ಖಯಾಲಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿ ಹರಿಬಿಟ್ಟು ತನ್ನ ಸೌಂದರ್ಯಕ್ಕೆ ಮೋಹಗೊಂಡ ಯವಕರಿಗೆ ಪ್ರೀತಿಯ ಬಲೆ ಬೀಸುತ್ತಾಳೆ ಎನ್ನುವುದು ಸಂಕೇತ್ ಆರೋಪ.
ಪ್ರೀತಿಸಿ ಮದುವೆಯಾಗುವ ಟಿಕ್ ಟಾಕ್ ಸುಂದರಿ ಸನ್ನಿಧಿ, ಅದೇ ಕ್ಷಣಗಳಲ್ಲಿ ಮತ್ತೊಬ್ಬರೊಂದಿಗೂ ಸಂಬಂಧವನ್ನು ಹೊಂದಿರುತ್ತಾಳೆ. ಮದುವೆಯಾದ ಗಂಡನೊಂದಿಗೆ ಸ್ವಲ್ಪ ಹೊಂದಾಣಿಕೆ ತಪ್ಪಿದರೂ ಅಲ್ಲಿಂದ ಜೂಟ್ ಆಗುತ್ತಾಳೆ ಎನ್ನುವ ಸಂಕೇತ್ , ಈ ಸುಂದರಿ ಸನ್ನಿಧಿ ಕಳೆದ ವರ್ಷ ನನ್ನನ್ನು ಫೆಬ್ರವರಿಯಲ್ಲಿ ಮದುವೆಯಾಗಿದ್ದಳು. ಒಂದೆರಡು ತಿಂಗಳ ಸಂಸಾರ ಮಾಡಿ ಕೈಕೊಟ್ಟು ಹೋಗಿದ್ದಾಳೆ.
ಅಷ್ಟಕ್ಕೂ ಪ್ರೀತಿಸಿ ಮದುವೆಯಾಗಿ, ಕೆಲವು ತಿಂಗಳು ಒಟ್ಟಿಗೆ ಸಂಸಾರ ಸುಖವನ್ನೂ ಅನುಭವಿಸಿದ ಈಕೆಗೆ, ಈಗ ನಾನು ಕೀಳು ಜಾತಿಯವನಾಗಿ ಕಾಣಿಸಿದ್ದೇನೆ. ತನ್ನಿಂದ ಆಗಿಂದಾಗ್ಗೆ ಹಣ ಕಿತ್ತುಕೊಂಡ ಈಕೆಗೆ, ಈಗ ಹಣ ಕೊಡದ ಕಾರಣ ಹೀಯಾಳಿಸಿ ಮತ್ತೊಬ್ಬ ಯುವಕನೊಂದಿಗೆ ಓಡಾಟ ಆರಂಭಿಸಿದ್ದಾಳೆ. ಸನ್ನಿಧಿ ಈ ಹಿಂದೆಯೂ ಕಡೂರು ಮೂಲದ ಯುವಕನ ಜೊತೆ ಮದುವೆಯಾಗಿದ್ದು, ಆತನಿಗೂ ಕೈ ಕೊಟ್ಟು ನನ್ನನ್ನು ಪ್ರೀತಿಸುವ ನಾಟಕವಾಡಿ ಮದುವೆಯಾಗಿದ್ದಳು.
ತನ್ನ ಸೌಂದರ್ಯವನ್ನು ನೋಡಿ ಹಿಂದೆ ಬೀಳುವ ಹುಡುಗರನ್ನು ಲವ್ ಮಾಡಿ ಹಣ ಪೀಕಿಕೊಳ್ಳೋದು ಇವಳ ಚಾಳಿಯಾಗಿದೆ. ಈಕೆ ಮಲೆನಾಡಿನ ಭಾಗದ ಖತರ್ನಾಕ್ ಯುವತಿಯಾಗಿದ್ದಾಳೆ ಎಂದು ಸಂಕೇತ್ ಎಚ್ಚರಿಕೆ ನೀಡಿದ್ದಾನೆ.
ಇನ್ನು ಸಂಕೇತ್ ಕಳೆದ ನವಂಬರ್ ತಿಂಗಳಿನಲ್ಲಿ ಸನ್ನಿಧಿ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್