Headlines

RIPPONPET NEWS ರಿಪ್ಪನ್‌ಪೇಟೆ : ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆ

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಶಾಸಕ ಹರತಾಳು ಹಾಲಪ್ಪ ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಬಿಗ್ ಶಾಕ್ ನೀಡಿದ್ದು ಮಾಜಿ ಗ್ರಾಪಂ ಸದಸ್ಯೆ ಸೇರಿದಂತೆ ಅನೇಕ ಮುಖಂಡರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ರಿಪ್ಪನ್‌ಪೇಟೆ ಶಬರೀಶನಗರದ ಕಾಂಗ್ರೆಸ್ ಮುಖಂಡರಾಗಿದ್ದ ಮಂಜನಾಯ್ಕ್ ಮತು ಮಾಜಿ ಗ್ರಾಪಂ ಸದಸ್ಯರಾದ ಗಿರಿಜಾ ಎಂ ನಾಯ್ಕ್ ರವರು ಇಂದು ಶಾಸಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಮಳವಳ್ಳಿ ಗ್ರಾಮದ PLD ಬ್ಯಾಂಕ್ ನಿರ್ದೇಶಕರು ಹಾಗೂ ಜೆಡಿಎಸ್ ಮುಖಂಡರಾಗಿದ್ದ ಗೋಪಾಲಣ್ಣ ಹಾಗೂ ಅವರ ಬೆಂಬಲಿಗರಾದ ರಮೇಶ್, ಕುಮಾರ್, ಉಮಾಪತಿ,…

Read More

ಗೃಹ ಸಚಿವ ಆರಗ ಜ್ಞಾನೇಂದ್ರ ಗನ್ ಮ್ಯಾನ್ ಜೈಜಗದೀಶ್ ಸೇರಿದಂತೆ ಜಿಲ್ಲೆಯ ಮೂವರಿಗೆ ಮುಖ್ಯಮಂತ್ರಿ ಪದಕ ಘೋಷಣೆ|Reward

ಕರ್ನಾಟಕ ರಾಜ್ಯದ 2022ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಗನ್ ಮ್ಯಾನ್ ಜೈಜಗದೀಶ್ ಸೇರಿದಂತೆ ಶಿವಮೊಗ್ಗ ಜಿಲ್ಲೆಯಿಂದ ಮೂವರು ಆಯ್ಕೆಯಾಗಿದ್ದಾರೆ. 2022 ನೇ ಸಾಲಿನ ಮುಖ್ಯಮಂತ್ರಿ ಪದಕ ಜಿಲ್ಲೆಯಲ್ಲಿ ಮೂವರಿಗೆ ಲಭಿಸಿದೆ. ಪೊಲೀಸ್ ಇಲಾಖೆಯಿಂದ ಪ್ರತಿ ವರ್ಷ ಕೊಡುವ ಮುಖ್ಯಮಂತ್ರಿಗಳ ಪದಕ ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ಅಂಜನ್ ಕುಮಾರ್, ಆಗುಂಬೆ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಕೆ.ಶಿವಕುಮಾರ್, ಡಿಎಆರ್ ನ ಸಿಬ್ಬಂದಿ ಜೈಜಗದೀಶ್ ಗೆ ಲಭಿಸಿದೆ. ಮುಖ್ಯಮಂತ್ರಿ ಪದಕವನ್ನ ನೀಡುವ…

Read More

ರಿಪ್ಪನ್‌ಪೇಟೆ : ಬಿದರಹಳ್ಳಿ ಕುಮಧ್ವತಿ ನದಿಯಲ್ಲಿ ಮೀನುಗಳ ಮಾರಣಹೋಮ – ನದಿಯ ಒಡಲಿಗೆ ವಿಷ ಬೆರೆಸಿದ ಪಾಪಿಗಳು|kumadwathi

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಬಿದರಹಳ್ಳಿ ಗ್ರಾಮದ ಕುಮದ್ವತಿ ನದಿಯಲ್ಲಿ ಕಿಡಿಗೇಡಿಗಳು ವಿಷ ಬೆರೆಸಿ ಮೀನು ಸೇರಿದಂತೆ ಪ್ರಾಣಿ ಪ್ರಭೇದಗಳ ಮಾರಣಹೋಮ ನಡೆಸಿರುವ ಘಟನೆ ನಡೆದಿದೆ. ಹೌದು ಬಿದರಹಳ್ಳಿ ಕುಮದ್ವತಿ ನದಿಯಲ್ಲಿ ಕಿಡಿಗೇಡಿಗಳು ನದಿಯ ನೀರಿಗೆ  ಮೈಲುತುತ್ತ ವಿಷ ಬೆರೆಸಿ ಪ್ರಾಣಿ ಪ್ರಭೇದಗಳ ಮಾರಣಹೋಮ ನಡೆಸಿದ್ದಾರೆ.ಕುಮದ್ವತಿ ನದಿಯಲ್ಲಿ ಬೇಸಿಗೆ ಕಾರಣದಿಂದ ನೀರು ಇಂಗಿ ಹೋಗಿದ್ದು ಅಲ್ಲಲ್ಲಿ ಕೆಲ ಹೊಂಡದಲ್ಲಿ ಪ್ರಾಣಿ ಪ್ರಭೇದಗಳು ಜೀವಿಸುತ್ತವೆ.ಇದನ್ನೇ ಗುರಿಯಾಗಿಸಿಕೊಂಡು ಕಿಡಿಗೇಡಿಗಳು ವಿಷಯುಕ್ತ “ಮೈಲುತುತ್ತ” ವನ್ನು ಆ ನೀರಿಗೆ ಬೆರೆಸಿ ಲಕ್ಷಾಂತರ…

Read More

ತೀರ್ಥಹಳ್ಳಿ : ಪೊಲೀಸ್ ಪೇದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ‌ ಕೊಲೆ ಪ್ರಕರಣ – ಓರ್ವನ ಬಂಧನ|arrested

ತೀರ್ಥಹಳ್ಳಿ : ತರಕಾರಿ ಮಾರ್ಕೆಟ್​ನಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧಪಟ್ಟಂತೆ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.   ಮಾರ್ಚ್​ 25 ರಂದು ಪಟ್ಟಣದ ಸಮೀಪವಿರುವ ತರಕಾರಿ ಮಾರ್ಕೆಟ್  ಬಳಿಯಲ್ಲಿ  ತೀರ್ಥಹಳ್ಳಿ ಪೊಲೀಸ್ ಸ್ಟೇಷನ್​ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪೇದೆಯಾಗಿ ಕೆಲಸ ನಿರ್ವಹಿಸಿದ್ದ ಪೂರ್ಣೇಶ್​ ಎಂಬಾತನನ್ನ ಹತ್ಯೆ ಮಾಡಲಾಗಿತ್ತು. ಭಾರೀ ಗಾತ್ರದ ಕಲ್ಲನ್ನು ತಲೆಮೇಲೆ ಎತ್ತಿಹಾಕಿ ಪೂರ್ಣೇಶ್​ನನ್ನ ಕೊಲೆ ಮಾಡಲಾಗಿತ್ತು.ವಿಪರೀತ ಮದ್ಯವ್ಯಸನಿಯಾಗಿದ್ದ ಪೂರ್ಣೇಶ್​, ಇದೇ ಕಾರಣಕ್ಕೆ ಪೊಲೀಸ್ ಕೆಲಸದಿಂದ ವಜಾಗೊಂಡಿದ್ದ. ಆನಂತರವೂ ಆತ ಬದಲಾಗಿರಲಿಲ್ಲ. ಘಟನೆ ನಡೆದ ದಿನ ಪೊಲೀಸರು…

Read More

ಶಿಕಾರಿಪುರ-ಶಿವಮೊಗ್ಗ ಹೆದ್ದಾರಿಯಲ್ಲಿ ಬೆಂಕಿ ಹಚ್ಚಿ ಗ್ರಾಮಸ್ಥರ ಆಕ್ರೋಶ – ಶಿವಮೊಗ್ಗಕ್ಕೂ ವ್ಯಾಪಿಸಿದ ಮೀಸಲಾತಿ ಹೋರಾಟ|Protest

ಶಿಕಾರಿಪುರ ತಾಲ್ಲೂಕಿನ ತಾಲ್ಲೂಕು ಆಫೀಸ್ ಹಾಗೂ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ನಿವಾಸದ ಬಳಿ ನಡೆದ ಬಂಜಾರ, ಬೋವಿ, ಕೊರಮ, ಕೊರಚ ಸಮುದಾಯದ ಪ್ರತಿಭಟನೆ ಇದೀಗ ಜಿಲ್ಲಾ ಕೇಂದ್ರಕ್ಕೂ ವ್ಯಾಪಿಸಿದೆ.   ಒಳ ಮೀಸಲಾತಿ ಜಾರಿ ಸಂಬಂಧ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿ ಹೆದ್ದಾರಿಯಲ್ಲಿ ರಸ್ತೆ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.  ರಸ್ತೆ ಮೇಲೆ ತೆಂಗಿನ ಗರಿ ಇಟ್ಟು ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಶಿವಮೊಗ್ಗ –…

Read More

ಬಿಎಸ್ ವೈ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ – ಘಟನೆಯಿಂದ ನೋವಾಗಿದೆ ,ಯಾರನ್ನು ಬಂಧಿಸಬೇಡಿ : ಯಡಿಯೂರಪ್ಪ|Bsy

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿರುವ ತಮ್ಮ ಮನೆ ಮೇಲೆ ನಡೆದ ಕಲ್ಲೂ ತೂರಾಟದ ಘಟನೆಯ ಬಗ್ಗೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಯಾರನ್ನು ಬಂಧಿಸಬೇಡಿ! ಬಂಜಾರ ಸಮುದಾಯದ ಕಾರ್ಯಕರ್ತರು ನಮ್ಮ ಮನೆಗೆ ಹಲ್ಲೆ ಮಾಡಿ, ಕಲ್ಲು ತೂರಾಟ ಮಾಡಿದಂತಹ ಘಟನೆಗಳು ನಡೆದಿವೆ. ಈ ಸಂಬಂಧ ಎಸ್​ಪಿ ಮತ್ತು ಡಿಸಿಯವರ ಬಳಿಯಲ್ಲಿ ಮಾತನಾಡಿ, ಬಂಜಾರ ಸಮುದಾಯದವರು ನಮ್ಮ ಜೊತೆ ಇದ್ದಾರೆ. ತಾಂಡಗಳ ಅಭಿವೃದ್ಧಿ ಮಾಡಿದ್ದೇನೆ, ತಪ್ಪು ಗೃಹಿಕೆಯಿಂದ ಈ ಘಟನೆ ಯಾಗಿದೆ. ಯಾರ ವಿರುದ್ಧವೂ ಕ್ರಮ…

Read More

ಮನಸ್ಸುಗಳನ್ನು ಕಟ್ಟುವ ಪ್ರಕ್ರಿಯೆಯೇ ರಂಗಭೂಮಿ – ಡಾ. ರತ್ನಾಕರ ಸಿ ಕುನುಗೋಡು|Ripponpet news

ಮನಸ್ಸುಗಳನ್ನು ಕಟ್ಟುವ ಪ್ರಕ್ರಿಯೆಯೇ ರಂಗಭೂಮಿ- ಡಾ. ರತ್ನಾಕರ ಸಿ ಕುನುಗೋಡು.  ರಿಪ್ಪನ್ ಪೇಟೆ :  ಎಲ್ಲ ಭೇದಗಳನ್ನು ಅಳಿಸಿ ಸಮತೆಯ ಕಣ್ಣಲ್ಲಿ ಒಡೆದ ಮನಸ್ಸುಗಳನ್ನು ಕಟ್ಟುವ ಸಮರ್ಥ ಮಾಧ್ಯಮ ರಂಗಭೂಮಿ. ರಂಗಭೂಮಿಯ ಮುಖಾಂತರ ಆರೋಗ್ಯಕರ ಮನಸ್ಸುಳ್ಳ ಯುವಜನತೆಯನ್ನು ರೂಪಿಸುವ ತುರ್ತು ಇದೆ ಎಂದು ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ರತ್ನಾಕರ ಸಿ ಕುನುಗೋಡು ಹೇಳಿದರು. ದಿ. ರೇಣುಕಪ್ಪಗೌಡ ಪ್ರತಿಷ್ಠಾನ, ಮಲೆನಾಡು ಕಲಾತಂಡ ಮಸರೂರು ಹಾಗ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ …

Read More

ಬೇಳೂರು ಗೋಪಾಲಕೃಷ್ಣ ರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು – ಕಾಗೋಡು ತಿಮ್ಮಪ್ಪ|Sagara

ಶಿವಮೊಗ್ಗ ಜಿಲ್ಲೆಯ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ಏಳು ಜನ ಆಕಾಂಕ್ಷಿಗಳು ಹೈಕಮಾಂಡ್ ಗೆ ಮನವಿ ಸಲ್ಲಿಸಿದ್ದರು ಅದರಲ್ಲಿ ಹಿರಿಯ ಮುತ್ಸದಿ ಕಾಗೋಡು ತಿಮ್ಮಪ್ಪ ಹಾಗೂ ಅವರ ಮಗಳು ಡಾ.ರಾಜನಂದಿನಿ ಪ್ರಬಲ ಆಕಾಂಕ್ಷಿಯಾಗಿದ್ದರು. ಕೊನೆಯಲ್ಲಿ ಹೈಕಮಾಂಡ್ ಪಕ್ಷದ ಆಂತರಿಕ ಸಮೀಕ್ಷೆಗೆ ಮನ್ನಣೆ ನೀಡಿ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರವರನ್ನು ಹೈಕಮಾಂಡ್ ಅಂತಿಮಗೊಳಿಸಿದ್ದು ಕಾಂಗ್ರೆಸ್ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿಸಿತ್ತು. ಆದರೆ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಬಣಗಳಿವೆ…

Read More

ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ|144 ಸೆಕ್ಷನ್ ಜಾರಿ

ಮೀಸಲಾತಿ ಪ್ರಮಾಣ ಕಡಿಮೆ ಮಾಡಿರುವುದನ್ನು ಖಂಡಿಸಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ಬಂಜಾರ ಸೇರಿದಂತೆ ವಿವಿಧ ಸಮುದಾಯದ ವತಿಯಿಂದ ಪ್ರತಿಭಟನೆ ನಡೆಸಿದರು.ಈ ವೇಳೆ ಕಲ್ಲು ತೂರಾಟ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾ.ಅಂಬೇಡ್ಕರ್ ಸರ್ಕಲ್‌ನಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ವೇಳೆ ಕೆಲವರು ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು‌. ಶಿಕಾರಿಪುರದ ಮಿನಿ ವಿಧಾನಸೌಧ, ಬಸ್ ನಿಲ್ದಾಣದ ಬಳಿ ಬಂಜಾರ ಸಮುದಾಯದ ಯುವಕರು ಪ್ರತಿಭಟನೆ ನಡೆಸಿದರು….

Read More

ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಸಾವು – ಪತಿಯ ವಿರುದ್ದ ಪ್ರಕರಣ ದಾಖಲು|death

ಶಿವಮೊಗ್ಗ ಹೊಳೆಹೊನ್ನೂರು  ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ವಿವಾಹಿತೆಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆಯ ಬಗ್ಗೆ ವರದಿಯಾಗಿದೆ. ಅನಿತಾ ಮೃತ ಯುವತಿ, ಈಕೆ  7 ತಿಂಗಳ ಹಿಂದೆ ಹೆತ್ತವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದರು. ಭದ್ರಾವತಿ ತಾಲೂಕಿನ  ಸಂತೋಷ್​ ಎಂಬವರ ಜೊತೆಗೆ ಅನಿತಾರ ಯುವತಿಯಾಗಿತ್ತು. ಸಂತೋಷ್ ಹಾಗೂ ಅನಿತಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಕಳೆದ ಶುಕ್ರವಾರ ಅನಿತಾಳ ಆರೋಗ್ಯ ಹದಗೆಟ್ಟಿದೆ ಎಂದು ಸಂತೋಷ್​ ಅನಿತಾರ ಹೆತ್ತವರಿಗೆ ವಿಷಯ ತಿಳಿಸಿದ್ದಾರೆ. ಆನಂತರ ಅನಿತಾರ ಪೋಷಕರು ಶಿವು ಎಂಬವರನ್ನ ಸಂತೋಷ್​ರ ಮನೆಗೆ ಕಳುಹಿಸಿ ವಿಚಾರಿಸುವಂತೆ ತಿಳಿಸಿದ್ದಾರೆ….

Read More
Exit mobile version