ಭೀಕರ ರಸ್ತೆ ಅಪಘಾತ: ಐಟಿಐ ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ 19 ವರ್ಷದ ಯುವಕ ದುರ್ಮರಣ

ಭೀಕರ ರಸ್ತೆ ಅಪಘಾತ: ಐಟಿಐ ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ 19 ವರ್ಷದ ಯುವಕ ದುರ್ಮರಣ

A 19-year-old ITI student died in a tragic road accident near Kumudvati Bridge in Shikaripura while returning home after completing his examination. A case has been registered by Shikaripura Town Police.

ಆನಂದಪುರ : ಶಿಕಾರಿಪುರ ಪಟ್ಟಣದ ಕುಮುದ್ವತಿ ನದಿ ಸೇತುವೆ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐಟಿಐ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಮೃತ ಯುವಕನನ್ನು ಸಾಗರ ತಾಲೂಕಿನ ಗೌತಮಪುರ ಗ್ರಾಮದ ಮಂಜುನಾಥ್ ಬಿನ್ ಚೌಡಪ್ಪ ಅವರ ಪುತ್ರ ಮಿಲನ್ (19) ಎಂದು ಗುರುತಿಸಲಾಗಿದೆ.

ಮಿಲನ್ ಐಟಿಐ ಪರೀಕ್ಷೆ ಬರೆಯಲು ಶಿರಾಳಕೊಪ್ಪಕ್ಕೆ ತೆರಳಿದ್ದು, ಪರೀಕ್ಷೆ ಮುಗಿಸಿಕೊಂಡು ಬೈಕ್‌ ನಲ್ಲಿ ಗೌತಮಪುರಕ್ಕೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಕುಮುದ್ವತಿ ಸೇತುವೆ ಸಮೀಪ ಮಿಲನ್ ಚಲಾಯಿಸುತ್ತಿದ್ದ ಬೈಕ್‌ಗೆ ಶಿಕಾರಿಪುರ ಕಡೆಯಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಮಿಲನ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆಯ ಕುರಿತು ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

About The Author

Exit mobile version