Shivamogga | ನಾಯಿ ಮೇಲೆ ಗುಂಡಿನ ದಾಳಿ – ದೂರು ದಾಖಲು
ಶಿವಮೊಗ್ಗ : ಸಾಕು ನಾಯಿಯೊಂದು ಮತ್ತೊಂದು ಸಾಕು ನಾಯಿಗೆ ಕಚ್ಚಿದೆ ಎಂಬ ಕಾರಣಕ್ಕೆ ಗುಂಡು ಹಾರಿಸಿದ ಘಟನೆ ನಡೆದಿದ್ದು ಈ ಘಟನೆ ವಿರುದ್ಧ ನಾಇಯ ಮಾಲೀಕರು ದೂರು ದಾಖಲಿಸಲಾಗಿದೆ.
ಅಮೀರ್ ಅಹ್ಮದ್ ಕಾಲೋನಿಯಲ್ಲಿ ಚಂದ್ರಿಕಾ ಎಂಬುವರು ಸುರಕ್ಷತೆಯ ದೃಷ್ಟಿಯಿಂದ ಹಾಗೂ ಮನೆಯಲ್ಲಿ ಕಳ್ಳತನವನ್ನ ತಡೆಗಟ್ಟುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಸುಮಾರು 8 ವರ್ಷಗಳಿಂದ ಒಂದು ಹೆಣ್ಣು ನಾಯಿಯನ್ನು ಸಾಕಿಕೊಂಡಿದ್ದರು.
ಡಿ.20 ರಂದು ಚಂದ್ರಿಕಾರವರ ಸಾಕು ನಾಯಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ಮುಸ್ತಫಾ ಖಾನ್ ರವರ ಮನೆಯಲ್ಲಿ ಸಾಕಿದ್ದ ನಾಯಿಗೆ ಕಚ್ಚಿದೆ. ನಾಯಿ ಕಚ್ಚಿದ ಕಾರಣಕ್ಕೆ ಮನಸ್ಸಿನಲ್ಲಿಟ್ಟುಕೊಂಡು ಮುಸ್ತಫಾ ಖಾನ್ ಚಂದ್ರಿಕಾರ ಹೆಣ್ಣು ನಾಯಿಗೆ ಕಲ್ಲಿನಿಂದ ಹೊಡೆಯುವುದು, ಕೋಲಿನಿಂದ ಹೊಡೆಯುವುದು ಮಾಡುತ್ತಿದ್ದರು.
ನಾಯಿಯನ್ನು ಇವತ್ತಲ್ಲ ನಾಳೆ ಹೊಡೆದು ಸಾಯಿಸುತ್ತೇನೆಂದು ಹೇಳುತ್ತಿದ್ದು, ಡಿ.24 ರಂದು ಮಧ್ಯಾಹ್ನ ಸುಮಾರು 1-10 ಗಂಟೆ ಸಮಯದಲ್ಲಿ ಮನೆಯಲ್ಲಿದ್ದಾಗ ಮನೆಯ ಹೊರಗಡೆ ಗನ್ ಶೂಟ್ ಸದ್ದು ಕೇಳಿಸಿದೆ. ಕೂಡಲೇ ಹೊರಗಡೆ ಬಂದು ನೋಡಲಾಗಿ ಚಂದ್ರಿಕಾರ ಸಾಕು ನಾಯಿ ಕೂಗುತ್ತಾ ತಬಾರಕ್ ರವರ ಮನೆ ಕಡೆಯಿಂದ ಓಡಿ ಮನೆಗೆ ಬಂದಿದೆ,
ಪರೀಕಸಿದಾಗ ನಾಯಿಯ ಹಿಂಭಾಗ ಸೊಂಟದ ಹತ್ತಿರ ಆಳವಾದ ಸಣ್ಣ ಗಾಯವಾಗಿದ್ದು, ಮುಸ್ತಫಾ ಖಾನ್ ಈತನು ಕೈಯಲ್ಲಿ ಏರ್ ಗನ್ ಹಿಡಿದುಕೊಂಡು ತಬಾರಕ್ ಮನೆಯಿಂದ ಅವರ ಮನೆಯ ಕಡೆ ಹೋಗುತ್ತಿದ್ದನು. ಅಲ್ಲಿ ಅಕ್ಕಪಕ್ಕದಲ್ಲಿದ್ದ ಗಾಯಗೊಂಡ ನಾಯಿಗೆ ಮನೆಯಲ್ಲಿ ಚಿಕಿತ್ಸೆ ಕೊಟ್ಟಿದ್ದಾರೆ.
ನಂತರ ಮನೆಯಲ್ಲಿದ್ದ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಮುಸ್ತಫಾ ಖಾನ್ ಕೈಯಲ್ಲಿ ಗನ್ ಹಿಡಿದುಕೊಂಡು ಬಂದು ತಬಾರಕ್ ರವರ ಮನೆಯ ಮುಂದೆ ನಿಲ್ಲಿಸಿದ್ದ ಕಾರ್ ವಾಹನದ ಕೆಳಗೆ ಮಲಗಿದ್ದ ಸಾಕು ಹೆಣ್ಣುನಾಯಿಗೆ ಗನ್ ನಿಂದ ಶೂಟ್ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿ ಫೂಟೇಜ್ ನಲ್ಲಿ ಕಂಡು ಬಂದಿರುತ್ತದೆ.
ಈ ಕೃತ್ಯದ ಬಗ್ಗೆ ಏರಿಯಾದವರೊಂದಿಗೆ ಚರ್ಚಿಸಿ ಸಾಕುನಾಯಿಗೆ ಶೂಟ್ ಮಾಡಿ ಗಾಯಗೊಳಿಸಿದ ಮುಸ್ತಫಾ ಖಾನ್ ಮೇಲೆ ಮುಂದಿನ ಕಾನೂನು ಕ್ರಮಕೈಗೊಳ್ಳಬೇಕೆಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್