ಶಿವಮೊಗ್ಗ ಜಿಲ್ಲೆಯಿಂದ ವಿಮಾನಯಾನ ಸೇವೆ ಆರಂಭಸಿಲು ಸಜ್ಜಾಗಿರುವ ಸ್ಟಾರ್ ಏರ್ (STAR AIR) ಸಂಸ್ಥೆ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸಜ್ಜಾಗಿದೆ. ನ.6ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ರಾಯಲ್ ಆರ್ಕಿಡ್ ಹೊಟೇಲ್ನಲ್ಲಿ ಸಂದರ್ಶನ ನಡೆಸಲಿದೆ. ಈ ಕುರಿತು ಸ್ಟಾರ್ ಏರ್ ಸಂಸ್ಥೆ ತನ್ನ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಪ್ರಕಟಿಸಿದೆ.
 ಸ್ಟಾರ್ ಏರ್ ಸೋಶಿಯಲ್ ಮೀಡಿಯಾದಲ್ಲಿ ನೀಡಿದ ಜಾಹಿರಾತಿನ ಪ್ರಕಾರ, ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಲ್ಲಿ ಕಮರ್ಷಿಯಲ್ ವಿಭಾಗದಲ್ಲಿ ಡ್ಯೂಟಿ ಸೂಪರ್ವೈಸರ್ ಅಥವಾ ಆಫೀಸರ್, ಸೀನಿಯರ್ ಕಸ್ಟಮರ್ ಸರ್ವಿಸ್ ಎಗ್ಸಿಕ್ಯೂಟಿವ್, ಕಸ್ಟಮರ್ ಸರ್ವಿಸ್ ಎಗ್ಸಿಕ್ಯೂಟಿವ್, ಟ್ರೈನಿ ಕಸ್ಟಮರ್ ಸರ್ವಿಸ್ ಎಗ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.
  ಇನ್ನು, ಸೆಕ್ಯೂರಿಟಿ ವಿಭಾಗದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್, ಸೆಕ್ಯೂರಿಟಿ ಸೂಪರ್ವೈಸರ್, ಸೀನಿಯರ್ ಸೆಕ್ಯೂರಿಟಿ ಏಜೆಂಟ್, ಸೆಕ್ಯೂರಿಟಿ ಏಜೆಂಟ್, ಟ್ರೈನಿ ಸೆಕ್ಯೂರಿಟಿ ಏಜೆಂಟ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.
 ಆಸಕ್ತರು ತಮ್ಮ ರೆಸ್ಯೂಮ್, ಯಾವುದಾದರು ಸರ್ಕಾರಿ ಐಡಿ ಕಾರ್ಡ್, ಅನುಭವ ಪತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಿದೆ. 
 ಇದೇ ನವೆಂಬರ್  6ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ರಾಯಲ್ ಆರ್ಕಿಡ್ ಹೊಟೇಲ್ನಲ್ಲಿ ಸಂದರ್ಶನ ನಡೆಯಲಿದೆ. 
  


