ಚಲಿಸುತಿದ್ದ ಬಸ್ಸಿನಿಂದ ಬಿದ್ದು ಯುವಕ ಗಂಭೀರ – ಮಣಿಪಾಲ್ ಗೆ ರವಾನೆ
ತೀರ್ಥಹಳ್ಳಿ: ಪಟ್ಟಣದ ಆಗುಂಬೆ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಲ್ನಾಡ್ ಕ್ಲಬ್ ಸಮೀಪದ ರಾಕ್ ವಿವ್ ಹೋಟೆಲ್ ಸಮೀಪ ಚಲಿಸುತಿದ್ದ ಬಸ್ ನಿಂದ ಯುವಕ ಕೆಳಗೆ ಬಿದ್ದು ಗಂಬೀರ ಗಾಯಗೊಂಡಿರುವ ಘಟನೆ ನಡೆದಿದೆ.
ಕಲ್ಮನೆ ಸಮೀಪದ ಹೆಗ್ಗೋಡಿನ ಯುವಕನಿಗೆ ಗಂಭೀರ ಗಾಯವಾಗಿದೆ.ಬೆಳಗ್ಗೆ 9 ಗಂಟೆ ಹೊತ್ತಿಗೆ ಬಸ್ಸಿನಿಂದ ಬರುವಾಗ ಡೋರ್ ಸೈಡಿನಲ್ಲಿ ನೇತಾಡಿಕೊಂಡು ಬರುತ್ತಿದ್ದಾಗ ಪೊಲೀಸ್ ಬ್ಯಾರಿಕೇಡ್ ತಲೆಗೆ ಹೊಡೆದು ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.
ಗಾಯಗೊಂಡ ಯುವಕನನ್ನು ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎನ್ನಲಾಗುತಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.