ಸಾಲಭಾದೆಗೆ ಬೇಸತ್ತ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ
ಸಾಲ ಬಾಧೆಯಿಂದ ಬೇಸತ್ತು ಮಹಿಳೆಯೊಬ್ಬಳು ತುಂಗಾ ನದಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ತುಂಗಾ ಸೇತುವೆಯಿಂದ ಹಾರಿದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾಲದ ಕಿರಿಕಿರಿ ತಾಳಲಾರದೇ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.
ತುಮಕೂರು ಜಿಲ್ಲೆ ಮಧುಗಿರಿಯ ಕೋಡಿಗೆಹಳ್ಳಿ ಮೂಲದ ಲತಾಮಣಿ(44) ಮೃತ ಮಹಿಳೆಯಾಗಿದ್ದಾಳೆ. ಸ್ಥಳದಲ್ಲಿ ಲತಾಮಣಿ ಡೆತ್ ನೋಟ್ ಮತ್ತು ಕೆಲ ದಾಖಲೆಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಆಕೆಯ ಆಧಾರ್ ಕಾರ್ಡ್, ಸಾಲದ ಬಗ್ಗೆ ಮಾಹಿತಿ ಪತ್ರ ದೊರೆತ ಹಿನ್ನೆಲೆ, ಪೊಲೀಸರಿಂದ ತನಿಖೆ ಆರಂಭವಾಗಿದೆ.
ಘಟನೆ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.