Headlines

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಡಗರದಿಂದ ನಡೆದ ಆಯುಧ ಪೂಜೆ – ಡಿವೈಎಸ್ ಪಿ ಭಾಗಿ|dasara

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಡಗರದಿಂದ ನಡೆದ ಆಯುಧ ಪೂಜೆ – ಡಿವೈಎಸ್ ಪಿ ಭಾಗಿ
ರಿಪ್ಪನ್‌ಪೇಟೆ : ನಾಡಹಬ್ಬ ದಸರಾ ಹಿಂದಿನ ದಿನವಾದ ಇಂದು ಆಯುಧ ಪೂಜೆಯನ್ನು ಪಟ್ಟಣದ ಹಲವಾರು ಕಡೆಗಳಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಸರ್ಕಾರಿ ವಾಹನಗಳು, ಖಾಸಗಿ ವಾಹನಗಳಿಗೆ ಪೂಜೆ ಸಲ್ಲಿಸಿ ಸಂಭ್ರಮದಿಂದ ಹಬ್ಬ ಆಚರಣೆ ಮಾಡಲಾಯಿತು.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ  ಚಾಮುಂಡೇಶ್ವರಿ ದೇವಿಯ ಫೋಟೋ ಪ್ರತಿಷ್ಠಾಪನೆ ಮಾಡಿ ವಾಹನಗಳಿಗೆ ಪೂಜೆ ಸಲ್ಲಿಸಿ ಬಂದೂಕು ಮತ್ತು ರಿವಾಲ್ವರ್ ಗಳಿಗೆ ಪೂಜೆ ಮಾಡಲಾಯಿತು.

ಈ ಪೂಜೆಯಲ್ಲಿ ಡಿವೈಎಸ್ ಪಿ ಗಜಾನನ ವಾಮನ ಸುತಾರ,ಪಿಎಸ್‌ಐ ಪ್ರವೀಣ್ ಎಸ್ ಪಿ,ಎಎಸ್ ಐ ಹಾಲಪ್ಪ ,ಮಂಜಪ್ಪ ,ಜ್ಯೋತಿ , ಹಾಗೂ ಸಿಬ್ಬಂದಿಗಳಾದ ಉಮೇಶ್ ,ಶಿವುಕುಮಾರ್ ,ಪರಮೇಶ್ವರಪ್ಪ, ಮಧುಸೂಧನ್ ಸೇರಿ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದರು.

About The Author

Leave a Reply

Your email address will not be published. Required fields are marked *

Exit mobile version