ದ್ವೇಷದ ರಾಜಕೀಯಕ್ಕೆ ಇನ್ನೊಂದು ಹೆಸರೇ ಆರಗ ಜ್ಞಾನೇಂದ್ರ: ಕಿಮ್ಮನೆ ವಾಗ್ದಾಳಿ|thirthahalli news

ದ್ವೇಷದ ರಾಜಕೀಯಕ್ಕೆ ಇನ್ನೊಂದು ಹೆಸರೇ ಆರಗ ಜ್ಞಾನೇಂದ್ರ: ಕಿಮ್ಮನೆ ವಾಗ್ದಾಳಿ

ತೀರ್ಥಹಳ್ಳಿ – ಆರಗ ಜ್ಞಾನೇಂದ್ರ ಅವರಿಗೆ ಇತ್ತೀಚಿಗೆ ಐದನೇ ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ ಎಂಬ ಸೊಕ್ಕು ಅಹಂಕಾರ ಪಿತ್ತ ನೆತ್ತಿಗೇರಿದೆ. 83 ರಲ್ಲಿ ಮತ ಕೇಳುವಾಗ ಇದ್ದಂತಹ ಆರ್ಥಿಕ ಸ್ಥಿತಿ ಈಗಿಲ್ಲ. ಅವರ ಆಸ್ತಿ ಆದಾಯ ಎಲ್ಲವನ್ನು ವಿಸ್ತಾರ ಮಾಡಿಕೊಂಡಿದ್ದಾರೆ.ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರಿಗಳು ಎನ್ನುವ ಇವರು 50 ವರ್ಷಗಳ ಕಾಲ ವ್ಯಾಪಾರ ಮಾಡಿದ್ದಾ? ಸಭೆಗಳಲ್ಲೂ ದ್ವೇಷದ ಭಾಷಣ ಮಾಡುತ್ತಾರೆ, ನಾನೇನು ಮಾಡಿದರು ನಡೆಯುತ್ತೆ ಎಂಬ ಸೊಕ್ಕು ಅಹಂಕಾರ ಅವರಲ್ಲಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ವಾಗ್ದಾಳಿ ನೆಡೆಸಿದರು.

ಪಟ್ಟಣದ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ನಾನೇನೋ ಸಾಧನೆ ಮಾಡಿದ್ದೇನೆ ಎಂಬ ಗರ್ವ ಅವರಲ್ಲಿದೆ ಆದರೆ ಇಡೀ ರಾಜ್ಯದಲ್ಲಿ ಆಗಲಿ ಅಥವಾ ತೀರ್ಥಹಳ್ಳಿಯಲ್ಲಾಗಲಿ ಒಳ್ಳೆಯ ಅಭಿಪ್ರಾಯ ಇಲ್ಲ, ಚುನಾವಣೆ ಗೆದ್ದರೆ ಒಳ್ಳೆಯವರು ಸೋತವರು ಕೆಟ್ಟವರು ಎಂಬ ಭಾವನೆ ಅಲ್ಲ. ನಲವತ್ತು – ಐವತ್ತು ವರ್ಷಗಳ ರಾಜಕಾರಣದಲ್ಲಿ ದ್ವೇಷದ ರಾಜಕಾರಣವನ್ನು ಹುಟ್ಟು ಹಾಕಿದ್ದು ಜ್ಞಾನೇಂದ್ರ ಒಬ್ಬರೇ ಎಂದು ಹೇಳಿದರು.

ಆರ್ ಎಂ ಮಂಜುನಾಥ್ ಗೌಡರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದಾಗ ಪಕ್ಷದ ವತಿಯಿಂದ ಸನ್ಮಾನ ಮಾಡಿದೆವು. ಹಿಂದೆ ಅವರ ವಿರುದ್ಧವೂ ಹೋರಾಟ ಮಾಡಿದ್ದೇನೆ, ಗುಟ್ಟಲ್ಲಿ ಹೋರಾಟ ಮಾಡಿದ್ದಲ್ಲ ವಿಧಾನಸೌಧದಲ್ಲೇ ಹೇಳಿಕೆ ನೀಡಿರುವುದು. ನಮ್ಮ ಪಕ್ಷಕ್ಕೆ ಬಂದಿದ್ದಾರೆ ಹಾಗಾಗಿ ಅಭಿನಂದನೆ ತಿಳಿಸಿದ್ದೇವೆ. ನಾನು ಹಾರ ಹಾಕಿದರೆ ತಪ್ಪಾಗುತ್ತೆ ಆದರೆ ಇವರು ಬಿಜೆಪಿಯಲ್ಲಿದ್ದಾಗ ಚಿನ್ನದ ಕಿರೀಟ ತೊಡಿಸಿದ್ದರಲ್ಲ ಅದು ತಪ್ಪಲ್ಲವೇ? ಎಂದು ಪ್ರೆಶ್ನೆ ಮಾಡಿದರು.

ಶುದ್ಧ ನೀರನ್ನು ಸಪ್ಲೈ ಮಾಡುವ ಬಗ್ಗೆ ನಮ್ಮ ವಿರೋಧವಿಲ್ಲ:

ಕಳೆದ ಕೆಲವು ದಿನಗಳಿಂದ ತುಂಗಾ ನದಿಯ ವಿಷಯದಲ್ಲಿ ಹೋರಾಟ ಆಗುತ್ತಿದೆ. ಈ ಸಂದರ್ಭದಲ್ಲಿ ನಾನೇ 354 ಕೋಟಿ ಯೋಜನೆ ತಂದಿದ್ದರೆ ಎಲ್ಲರಿಗೂ ಕೇಸರಿ ಶಾಲು ಹಾಕಿಸಿ ಕಂಟ್ರಾಕ್ಟರ್ ಜೊತೆಗೆ ನನ್ನ ಹೆಸರು ಜೋಡಿಸಿ ಬಿಡುತ್ತಿದ್ದರು. ನಾನು 38 ಗ್ರಾಮ ಪಂಚಾಯಿತಿಗಳಲ್ಲ 62 ಗ್ರಾಮಪಂಚಾಯಿತಿಗಳು ಶುದ್ಧ ನೀರು ಕುಡಿಯಬೇಕು ಎನ್ನುವವನು. ಶುದ್ಧ ನೀರನ್ನು ಸಪ್ಲೈ ಮಾಡುವ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ ಎಲ್ಲಿ ಮಾಡಬೇಕು ಎನ್ನುವದಕ್ಕೆ ಯಾರು ಪ್ರೆಶ್ನೆ ಎತ್ತಿದ್ದಾರೋ ಅವರಿಗೆ ಉತ್ತರ ನೀಡಲಿ ಎಂದರು.

ಎಲೆ ಚುಕ್ಕೆ ರೋಗಬಂದ ಸಂದರ್ಭದಲ್ಲಿ ನಾನು ಪ್ರತಿಭಟನೆ ಮಾಡಿದ್ದೆ. ಆಗ ಅಲ್ಲಿಂದಲೇ 10 ಕೋಟಿ ಮಂಜೂರು ಮಾಡಿಸಿದ್ದೇನೆ ಎಂದರು ಆದರೆ ಅವರು ಹೇಳಿಕೆ ಕೊಟ್ಟಾಗಿನಿಂದ ಇಲ್ಲಿಯವರೆಗೆ ಒಂದು ರೂ ಹಣ ಬಂದಿಲ್ಲ. 19 ಲಕ್ಷ ಹಣ ಬಂದಿದೆ ಆದರೆ ಇವರಿಂದ ಅಲ್ಲ. ಎಲ್ಲೆಲ್ಲಿ ಎಲೆ ಚುಕ್ಕೆ ರೋಗ ಎಂದು ಹೇಳಿದ್ದರೋ ಅಲ್ಲೆಲ್ಲ ಹಣ ಕೊಟ್ಟಿದ್ದಾರೆ. ಅದರಲ್ಲಿ ಇವರ ಪ್ರಯತ್ನ ಏನಿಲ್ಲ, ನಾವು ಕಾಗೋಡು ತಿಮ್ಮಪ್ಪ ಬೇಳೂರು ಗೋಪಾಲಕೃಷ್ಣ ಕೊಟ್ಟ ಮನವಿಗೆ ಹಣ ಬಂದಿದೆ.
ನಮ್ಮ ಸರ್ಕಾರಕ್ಕೆ ಆರ್ಥಿಕವಾಗಿ ಸಮಸ್ಯೆ ಆಗಿದೆ ಎಂದರೆ ಅವರು ಮಾಡಿರುವ ಕೆಟ್ಟ ಕೆಲಸವೇ ಕಾರಣ ಎಂದರು.

ದ್ವೇಷದ ರಾಜಕೀಯಕ್ಕೆ ಇನ್ನೊಂದು ಹೆಸರೇ ಜ್ಞಾನೇಂದ್ರ:

ನವೆಂಬರ್ 1 ಕ್ಕೆ ನಂದಿತಾ ಶವ ಬಾಳೇಬೈಲಿನ ಮನೆಗೆ ಬಂದಿತ್ತು. ಸತ್ತವರದ್ದೆಲ್ಲ ಮರೆವಣಿಗೆ ಮಾಡುತ್ತಾರ? ಆತ್ಮಹತ್ಯೆ ಮಾಡಿಕೊಂಡವರದೆಲ್ಲಾ ಮೆರವಣಿಗೆ ಮಾಡುತ್ತಾರ?ನಾನು ಬೆಂಗಳೂರಿನಲ್ಲಿ ಧ್ವಜಾರೋಹಣ ಹಾರಿಸಿ ಸಂಜೆ ಇಲ್ಲಿಗೆ ಬಂದಿದ್ದೇನೆ. ಜ್ಞಾನೇಂದ್ರವರು ಶವದ ಮೆರವಣಿಗೆ ಮಸೀದಿ ರಸ್ತೆಯಲ್ಲಿ ಹೋಗಬೇಕೆಂದು ಅವರ ಕಡೆಯವರನ್ನು ಕೂರಿಸಿದ್ದಾರಲ್ಲ. ಯಾರೇ ಸತ್ತರು ಮಸೀದಿ ರಸ್ತೆಯಲ್ಲಿ ತೆಗೆದುಕೊಂಡು ಹೋಗುತ್ತಾರ? ಜ್ಞಾನೇಂದ್ರ ಅವರಿಗೆ ಆಗ ತಲೆ ಇರಲಿಲ್ಲವಾ? ದ್ವೇಷದ ರಾಜಕೀಯಕ್ಕೆ ಇನ್ನೊಂದು ಹೆಸರೇ ಜ್ಞಾನೇಂದ್ರ ಎಂದರು
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ರಿಪ್ಪನ್‌ಪೇಟೆ ಸುತ್ತಮುತ್ತ ನಾಳೆ ಕರೆಂಟ್ ಇಲ್ಲ! ಯಾವೆಲ್ಲ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ? ಈ ಸುದ್ದಿ ನೋಡಿ

ರಿಪ್ಪನ್‌ಪೇಟೆ ಸುತ್ತಮುತ್ತ ನಾಳೆ ಕರೆಂಟ್ ಇಲ್ಲ! ಯಾವೆಲ್ಲ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ? ಈ ಸುದ್ದಿ ನೋಡಿ Power outage in…

3 hours ago

ಹಿರಿಯ ನಾಗರಿಕರಿಂದ ನಿವೃತ್ತ ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ

ಹಿರಿಯ ನಾಗರಿಕರಿಂದ ನಿವೃತ್ತ ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ Retired government employees were specially honoured by senior…

6 hours ago

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು: ಶಾಸಕ ಬೇಳೂರು ಗೋಪಾಲಕೃಷ್ಣ

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು: ಶಾಸಕ ಬೇಳೂರು ಗೋಪಾಲಕೃಷ್ಣ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತಂದರೆ ₹10…

17 hours ago

RIPPONPETE | ಶಿಕ್ಷಣ ಕ್ಷೇತ್ರಕ್ಕೆ ಹೊಸ ಕೊಡುಗೆ – ಕಣಬಂದೂರಿನಲ್ಲಿ ಶ್ರೀ ಶಿವ ರಾಮಕೃಷ್ಣ ಸ್ಕೂಲ್ ನೂತನ ಕಟ್ಟಡಕ್ಕೆ ಅಡಿಗಲ್ಲು

RIPPONPETE | ಶಿಕ್ಷಣ ಕ್ಷೇತ್ರಕ್ಕೆ ಹೊಸ ಕೊಡುಗೆ - ಕಣಬಂದೂರಿನಲ್ಲಿ ಶ್ರೀ ಶಿವ ರಾಮಕೃಷ್ಣ ಸ್ಕೂಲ್ ನೂತನ ಕಟ್ಟಡಕ್ಕೆ ಅಡಿಗಲ್ಲು…

18 hours ago

ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರ ತೀವ್ರ ವಾಗ್ದಾಳಿ

ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರ ತೀವ್ರ ವಾಗ್ದಾಳಿ Former Education Minister Kimmane Ratnakar…

20 hours ago

ಪಟಗುಪ್ಪ ಸೇತುವೆ ಬಳಿಯ ಹಿನ್ನೀರಿನಲ್ಲಿ ಅನಾಮಧೇಯ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಪಟಗುಪ್ಪ ಸೇತುವೆ ಬಳಿಯ ಹಿನ್ನೀರಿನಲ್ಲಿ ಅನಾಮಧೇಯ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ An unidentified man’s partially decomposed…

20 hours ago