ವಾಟ್ಸಾಪ್‌ನಲ್ಲಿ ಹೊಸ ಕ್ರಾಂತಿ – ವಾಟ್ಸಾಪ್ ಚಾನಲ್ಸ್ ಆರಂಭಿಸಿದ ಮೋದಿ, ಸಿದ್ದರಾಮಯ್ಯ!Whatsup channel

ನಮ್ಮ ಪೋಸ್ಟ್ ಮ್ಯಾನ್ ನ್ಯೂಸ್(POSTMAN NEWS) ನ ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ! ಇಲ್ಲಿ ನೀವು ಸೇಫ್​,, ನಿಮ್ಮ ನಂಬರ್ ಕೂಡ ಸೇಫ್​! ಯಾರಿಗೂ ತಿಳಿಯದು ನಿಮ್ಮ ವಿವರ! ಯಾವಾಗ ಬೇಕಾದರು  ಸುದ್ದಿ ಓದಿ, ವಾಟ್ಸಾಪ್ ಆಪ್ ಅಪ್ಡೇಟ್ ಮಾಡಿದ್ದಲ್ಲಿ ಈ ಕೆಳಗಿನ ಲಿಂಕ್​ ಕ್ಲಿಕ್ ಮಾಡಿ – ಬಲಬದಿಯಲ್ಲಿರುವ follow ಬಟನ್ ಕ್ಲಿಕ್ ಮಾಡಿ..

ವಾಟ್ಸಾಪ್‌ (Whatsapp) ಬಳಕೆದಾರರು ಈಗಾಗಲೇ ಸಾಕಷ್ಟು ವಿವಿಧ ಫೀಚರ್ಸ್ ಮೂಲಕ ಹೊಸ ಹೊಸ ಸೇವೆ ಪಡೆಯುತ್ತಿದ್ದಾರೆ. ಈ ನಡುವೆ ವಾಟ್ಸಾಪ್‌ ಚಾನಲ್ಸ್‌ ಎಂಬ ಹೊಸ ಫೀಚರ್ಸ್‌ ಅನ್ನು ಘೋಷಣೆ ಮಾಡಿದ್ದು, ಇದು ಎಲ್ಲಾ ಕಡೆ ತನ್ನದೇ ಆದ ರೀತಿಯಲ್ಲಿ ಪ್ರಭಾವ ಬೀರಿದೆ. ಈ ಕಾರಣಕ್ಕೆ ಮೋದಿ ಹಾಗೂ ಸಿದ್ದರಾಮಯ್ಯ(Narendra modi, siddaramaiah) ಸಹ ಈ ಸೌಲಭ್ಯ ಪಡೆಯುತ್ತಿದ್ದಾರೆ.

ಹೌದು, ಟೆಕ್ನಾಲಜಿ ಅಭಿವೃದ್ಧಿಯಾಗಿತ್ತಿದ್ದಂತೆ ಜನರೊಂದಿಗಿನ ಪರಸ್ಪರ ಸಂಪರ್ಕ ಇನ್ನಷ್ಟು ಸರಳವಾಗುತ್ತಿದೆ. ಅದರಲ್ಲೂ ಪ್ರಮುಖ ಮೆಸೆಜಿಂಗ್‌ ಆಪ್‌ ಆಗಿರುವ ವಾಟ್ಸಾಪ್‌ ಬಳಕೆದಾರರಿಗೆ ವಿವಿಧ ಫೀಚರ್ಸ್‌ ಅನ್ನು ಪರಿಚಯಿಸುವ ಮೂಲಕ ಹೊಸ ಅನುಭವ ಪಡೆಯುತ್ತಿದ್ದಾರೆ. ಹಾಗಿದ್ರೆ ಏನಿದು ಹೊಸ ಚಾನಲ್ಸ್ ಫೀಚರ್ಸ್‌ ಹಾಗೂ ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನಿ ಮೋದಿ ಅವರು ಇದನ್ನು ಯಾಕೆ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ವಾಟ್ಸಾಪ್‌ ಚಾನಲ್ಸ್‌ ಫೀಚರ್ಸ್‌:

ಇನ್‌ಸ್ಟಂಟ್‌ ಮೆಸೆಜ್ ಆಪ್‌ ಆಗಿರುವ ವಾಟ್ಸಾಪ್‌ ಇತ್ತೀಚೆಗೆ ಬಳಕೆದಾರರಿಗಾಗಿ ಚಾನಲ್ಸ್‌ ಫೀಚರ್ಸ್‌ (WhatsApp Channels Features) ಪರಿಚಯಿಸಿದೆ. ಈ ಹೊಸ ಫೀಚರ್ಸ್‌ ಅನ್ನು ಬಳಕೆ ಮಾಡಿಕೊಂಡು ಬಳಕೆದಾರರು ತಮಗೆ ಆಸಕ್ತಿಯಿರುವ ಮತ್ತು ಅಪ್‌ಡೇಟ್‌ಗಳನ್ನು ಸ್ವೀಕರಿಸಲು ಬಯಸುವ ಜನರು ಅಥವಾ ಸಂಸ್ಥೆಗಳ ಸ್ಥಳಗಳಿಗೆ ನೇರವಾಗಿ ಸೇರಿಕೊಳ್ಳಬಹುದು. ಅಪ್‌ಡೇಟ್‌ಗಳನ್ನು ನೇರವಾಗಿ ಹಂಚಿಕೊಳ್ಳಲು ಅನುಯಾಯಿಗಳಿಗಾಗಿ ಚಾನಲ್ ನೀವೇ ಕ್ರಿಯೇಟ್‌ ಮಾಡಿಕೊಳ್ಳಬಹುದು.

ಈ ಹೊಸ ಫೀಚರ್ಸ್‌ ‘ಅಪ್‌ಡೇಟ್ಸ್‌’ ಕಾಲಮ್‌ನಲ್ಲಿರುವ ವೈಯಕ್ತಿಕ ಮೆಸೆಜ್‌ ಮತ್ತು ಕರೆಗಳಿಂದ ದೂರವಿರುವ ಆಪ್‌ನ ಪ್ರತ್ಯೇಕ ವಿಭಾಗದಲ್ಲಿ ಕಾಣಿಸಿಕೊಂಡಿದೆ. ಅಪ್‌ಡೇಟ್‌ಗಳನ್ನು ನೇರವಾಗಿ ಹಂಚಿಕೊಳ್ಳಲು ಅನುಯಾಯಿಗಳಿಗಾಗಿ ಚಾನಲ್ ಅನ್ನು ರಚಿಸಲು ನೀವು ಬಯಸಿದರೆ. ನಿಮ್ಮ ವಾಟ್ಸಾಪ್‌ ಅನ್ನು ಅಪ್‌ಡೇಟ್ ಮಾಡಬೇಕಿದೆ. ಅದರಲ್ಲೂ ಈ ವಿಶೇಷ ಫೀಚರ್ಸ್‌ ಭಾರತದಾದ್ಯಂತ ಎಲ್ಲಾ ಬಳಕೆದಾರರಿಗೆ ಲಭ್ಯವಿಲ್ಲ. ಇದು ಕೆಲವು ಬಳಕೆದಾರರಿಗೆ ಮಾತ್ರ ಲಭ್ಯ ಎನ್ನಬಹುದು.

ಮೋದಿ, ಸಿದ್ದರಾಮಯ್ಯರಿಗೂ ಈ ಫೀಚರ್ಸ್ ಅಂದ್ರೆ ಇಷ್ಟ:

ಭಾರತ ಸೇರಿದಂತೆ 150 ಕ್ಕೂ ಹೆಚ್ಚು ದೇಶಗಳಲ್ಲಿ ಕಳೆದ ವಾರ ಮೆಟಾ ವಾಟ್ಸಾಪ್‌ ಈ ಸೇವೆಯನ್ನು ಆರಂಭ ಮಾಡಿದೆ. ಈಗ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಸಹ ಈ ಚಾನೆಲ್ ಖಾತೆ ಆರಂಭಿಸಿದ್ದಾರೆ. ಈ ಮೂಲಕ ದೇಶದ ಜನರು ನೇರವಾಗಿ ಇವರನ್ನು ಸಂಪರ್ಕ ಮಾಡಬಹುದಾಗಿದೆ. ಈ ಸಂಬಂಧ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಈ ಲಿಂಕ್ ಕ್ಲಿಕ್ ಮಾಡಿ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ

ಅಂದರೆ ಚಾನಲ್ಸ್‌ನಲ್ಲಿಯೇ ಈ ಮಾಹಿತಿಯನ್ನು ಶೇರ್‌ ಮಾಡಿಕೊಳ್ಳಲಾಗಿದೆ. ಈ ಮಾಹಿತಿಯಲ್ಲಿ ಹೊಸ ಸಂಸತ್ತಿನ ಕಟ್ಟಡದಲ್ಲಿರುವ ತಮ್ಮ ಕಚೇರಿಯಲ್ಲಿ ಕೆಲಸದಲ್ಲಿ ಮುಳುಗಿರುವ ಪ್ರಧಾನಿಯ ಫೋಟೋವನ್ನು ಹಾಕಲಾಗಿದೆ. ಶೀರ್ಷಿಕೆಯಲ್ಲಿ, ವಾಟ್ಸಾಪ್ ಸಮುದಾಯವನ್ನು ಸೇರಲು ರೋಮಾಂಚನವಾಗಿದೆ! ಇದು ನಮ್ಮ ಮುಂದುವರಿದ ಪ್ರಯಾಣದಲ್ಲಿ ಇನ್ನೂ ಒಂದು ಹೆಜ್ಜೆ ಹತ್ತಿರವಾಗಿದೆ. ಇಲ್ಲಿ ಸಂಪರ್ಕದಲ್ಲಿರೋಣ! ಹೊಸ ಸಂಸತ್ತಿನ ಕಟ್ಟಡದ ಚಿತ್ರ ಇಲ್ಲಿದೆ ಎಂದು ಬರೆಯಲಾಗಿದೆ. ಈ ಪೋಸ್ಟ್ ನಿಮಿಷಗಳಲ್ಲಿ ಸುಮಾರು 200 ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ ಮತ್ತು ಚಾನಲ್ 17,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ.

ವಾಟ್ಸಾಪ್ ಚಾನಲ್ಸ್‌ ಆರಂಭಿಸಿದ ಮೊದಲ ಮುಖ್ಯಮಂತ್ರಿ

ಸಿದ್ದರಾಮಯ್ಯ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಟ್ಸಾಪ್ ಚಾನಲ್ಸ್‌ ಅನ್ನು ಪ್ರಾರಂಭಿಸಲು ಮತ್ತು ಸಮೂಹ ಸಂವಹನವನ್ನು ಸಾಧಿಸಲು ಮುಂದಾಗಿರುವ ಮೊದಲ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 12 ರಂದು ಈ ಚಾನಲ್ಸ್‌ ಆರಂಭಿಸಿದ್ದು, ಈಗಾಗಲೇ ಅವರು 50,000ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ.
ಈ ಲಿಂಕ್ ಕ್ಲಿಕ್ ಮಾಡಿ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ

ಪ್ರಮುಖ ವಿಷಯ ಏನೆಂದರೆ ದೇಶದ ಇತರೆ ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ವಾಟ್ಸಾಪ್ ಚಾನೆಲ್ ಆರಂಭಿಸಿದವರಲ್ಲಿ ಸಿದ್ದರಾಮಯ್ಯ ಮೊದಲಿಗರಾಗಿದ್ದಾರೆ. ಸರ್ಕಾರದ ದೈನಂದಿನ ವಿದ್ಯಮಾನಗಳ ಮಾಹಿತಿಯನ್ನು ಜನರ ಬೆರಳ ತುದಿಯಲ್ಲೇ ಈ ಮೂಲಕ ನೀಡಲು ಸಜ್ಜಾಗಿದ್ದಾರೆ. ಅದರಂತೆ ಆಡಳಿತವನ್ನು ಹೆಚ್ಚು ಪಾರದರ್ಶಕಗೊಳಿಸಲು ಕರ್ನಾಟಕ ಮುಖ್ಯಮಂತ್ರಿ ಎಂಬ ಚಾನಲ್ ಅನ್ನು ಪ್ರಾರಂಭಿಸಲಾಗಿದೆ.

ಇನ್ನು ಹೊಸ ವಾಟ್ಸಾಪ್‌ನ ಫೀಚರ್ಸ್‌ ಅನ್ನು ಲಾಂಚ್‌ ಮಾಡಿ ಮಾಹಿತಿ ನೀಡಿರುವ ಮೆಟಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್, ಇಂದು ನಾವು ಜಾಗತಿಕವಾಗಿ ವಾಟ್ಸಾಪ್‌ ಚಾನೆಲ್‌ಗಳನ್ನು ಹೊರತರಲು ಮುಂದಾಗಿದ್ದೇವೆ. ಜನರು ವಾಟ್ಸಾಪ್‌ನಲ್ಲಿ ಅನುಸರಿಸಬಹುದಾದ ಸಾವಿರಾರು ಹೊಸ ಚಾನಲ್‌ಗಳನ್ನು ಸೇರಿಸುತ್ತಿದ್ದೇವೆ. ನೀವು ಹೊಸ ಚಾನಲ್‌ಗಳನ್ನು ಕಾಣಬಹುದು ಎಂದು ಉಲ್ಲೇಖಿಸಿದ್ದಾರೆ.

ನಮ್ಮ ಪೋಸ್ಟ್ ಮ್ಯಾನ್ ನ್ಯೂಸ್(POSTMAN NEWS) ನ ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ! ಇಲ್ಲಿ ನೀವು ಸೇಫ್​,, ನಿಮ್ಮ ನಂಬರ್ ಕೂಡ ಸೇಫ್​! ಯಾರಿಗೂ ತಿಳಿಯದು ನಿಮ್ಮ ವಿವರ! ಯಾವಾಗ ಬೇಕಾದರು  ಸುದ್ದಿ ಓದಿ, ವಾಟ್ಸಾಪ್ ಆಪ್ ಅಪ್ಡೇಟ್ ಮಾಡಿದ್ದಲ್ಲಿ ಈ ಕೆಳಗಿನ ಲಿಂಕ್​ ಕ್ಲಿಕ್ ಮಾಡಿ – ಬಲಬದಿಯಲ್ಲಿರುವ follow ಬಟನ್ ಕ್ಲಿಕ್ ಮಾಡಿ

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Share
Published by
ರಫ಼ಿ ರಿಪ್ಪನ್ ಪೇಟೆ

Recent Posts

ಕಾರ್ಮಿಕರ ಸಂಘಟನೆ ವಿರುದ್ಧದ ಆರೋಪಗಳು ನಿರಾಧಾರ: ಸುಂದರ್ ಬಾಬು

ಕಾರ್ಮಿಕರ ಸಂಘಟನೆ ವಿರುದ್ಧದ ಆರೋಪಗಳು ನಿರಾಧಾರ: ಸುಂದರ್ ಬಾಬು Ripponpete: Akhila Karnataka Building Workers Organization district president…

14 hours ago

ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ರಿಪ್ಪನ್‌ಪೇಟೆಯ ಅಪೇಕ್ಷಾಗೆ ರನ್ನರ್‌ಅಪ್ ಸಾಧನೆ

ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ರಿಪ್ಪನ್‌ಪೇಟೆಯ ಅಪೇಕ್ಷಾಗೆ ರನ್ನರ್‌ಅಪ್ ಸಾಧನೆ Ripponpete's Apeksha K. secured second place and runner-up…

18 hours ago

ಆಗುಂಬೆಯಲ್ಲಿ ಮಕ್ಕಳೊಂದಿಗೆ ಗದ್ದೆಗಿಳಿದ ಪೊಲೀಸ್‌ ಅಧಿಕಾರಿ; ಹೂಟಿ–ನಾಟಿ ಕಲಿಸಿದ PSI ಶಿವನಗೌಡ ಪಾಟೀಲ್

ಆಗುಂಬೆಯಲ್ಲಿ ಮಕ್ಕಳೊಂದಿಗೆ ಗದ್ದೆಗಿಳಿದ ಪೊಲೀಸ್‌ ಅಧಿಕಾರಿ; ಹೂಟಿ–ನಾಟಿ ಕಲಿಸಿದ PSI ಶಿವನಗೌಡ ಪಾಟೀಲ್ Agumbe PSI Shivanagowda Patil joined…

18 hours ago

ವಿದ್ಯಾರ್ಥಿನಿಯನ್ನು ಬೆದರಿಸಿ 15 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ದುಷ್ಕರ್ಮಿ

ವಿದ್ಯಾರ್ಥಿನಿಯನ್ನು ಬೆದರಿಸಿ 15 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ದುಷ್ಕರ್ಮಿ College student threatened and robbed of…

1 day ago

ಚಂದ್ರಗುತ್ತಿಯಲ್ಲಿ 9 ಅಡಿ ಉದ್ದದ ಹೆಬ್ಬಾವು ಸೆರೆ

ಚಂದ್ರಗುತ್ತಿಯಲ್ಲಿ 9 ಅಡಿ ಉದ್ದದ ಹೆಬ್ಬಾವು ಸೆರೆ A 9-foot-long python was safely rescued from behind a…

1 day ago

ಪಾಗಲ್ ಪ್ರೇಮಿಯಿಂದ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ – ಕೆರೆಗೆ ಹಾರಿ ಸಾಗರದ ಯುವತಿ

ಪಾಗಲ್ ಪ್ರೇಮಿಯಿಂದ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ - ಕೆರೆಗೆ ಹಾರಿ ಸಾಗರದ ಯುವತಿ A 22-year-old woman from Sagara…

2 days ago