ವರಪ್ರದಾಯಿನಿ ಕಳಸೆ ಗೌರಿ ಹೊಂಡದ ಗೌರಿಮಾತೆಗೆ ಮುತ್ತೈದೆಯರಿಂದ ಬಾಗಿನ ಸಮರ್ಪಣೆ|rpet news

ಬೇಡಿದ ವರವನ್ನು ವರ್ಷದೊಳಗೆ ಪೂರ್ಣಗೊಳಿಸುವ ಮಹಾತಾಯಿ;-

“ವರಪ್ರದಾಯಿನಿ ಕಳಸೆ ಗೌರಿ ಹೊಂಡದ ಗೌರಿಮಾತೆಗೆ ಮುತ್ತೈದೆಯರಿಂದ ಬಾಗಿನ ಸಮರ್ಪಣೆ’’


ರಿಪ್ಪನ್‌ಪೇಟೆ;-ಪುರಾತನ ಕಾಲದ ದೇವಾಲಯಗಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಮೂಲಧಾರಗಳು ಹಾಗೆಯೇ ಅಲ್ಲಿ ವಾಸಿಸಿದ ಋಷಿಮುನಿಗಳು ಶಿವಯೋಗ್ಯವರೇಣ್ಯರು ತಮ್ಮ ಪವಾಡ-ಪೂಜೆಗಳಿಂದ ಆಯಾ ಭಾಗದ ಕ್ಷೇತ್ರಗಳನ್ನು ಪಾವನಗೊಲಿಸಿ ಜಗದಿಂದ ಮರೆಯಾಗಿ ಹೋಗಿದ್ದಾರೆ.ಅಂತಹ ಸಾಧಕರ ಪಾದಸ್ಫರ್ಶದ ಸ್ಥಳಗಿಳಿಂದು ಪ್ರಚಾರವಿಲ್ಲದೆ.ಮೂಲೆಗುಂಪಾಗುತ್ತಾ ಎಷ್ಟೋ ಪ್ರಮುಖ ಇತಿಹಾಸವೂಳ್ಳ ದೇವಸ್ಥಾನಗಳು ಮತ್ತು ಧಾರ್ಮಿಕ ಪವಾಡದ ಹಲವು ಗುಹೆಗಳು ಆಳಿಯುವಂತಾಗಿರುವುದು ಕಾಣಬಹುದಾಗಿದ್ದರೂ ಕೂಡಾ ಅಳಿದುಳಿದಿರುವ ಕೆಲವು ಪ್ರಮುಖ ಧಾರ್ಮಿಕ ಕೇಂದ್ರಗಳಲೊಂದಾದ ಹೊಸನಗರ ತಾಲ್ಲೂಕಿನ ಕಳಸೆ ಗೌರಿ ಹೊಂಡದ ಗೌರಮ್ಮ ತಾಯಿಗೆ ಹರಿಕೆ ಹೊತ್ತು ಪ್ರಾರ್ಥಿಸಿದರೆ ಮುಂದಿನ ಗೌರಿ ಹಬ್ಬದೊಳಗೆ ಪೂರ್ಣಗೊಳ್ಳುವುದು ಎಂಬ ನಂಬಿಕೆಯಿಂದ ಸುತ್ತಮುತ್ತಲಿನ ನೂರಾರು ಹಳ್ಳಿಗಳ ಮಹಿಳೆಯರು ತಮ್ಮ ಆಶೋತ್ತರಗಳ ಈಡೇರಿಸುವಂತೆ ಪ್ರಾರ್ಥಿಸಿಕೊಂಡ ಒಂದು ವರ್ಷದಲ್ಲಿ ಬೇಡಿದ ವರವನ್ನು ಕರುಣಿಸುವ ಮಹಾತಾಯಿಗೆ ಮುತ್ತೈದೆಯರು ಬಾಗಿನ ನೀಡುವುದು ಇಲ್ಲಿನ ವಿಶೇಷವಾಗಿದೆ……………!

ಸಂತಾನ ಭಾಗ್ಯ ಮತ್ತು ವಿವಾಹಯೋಗ ಹೀಗೆ ಹತ್ತು ಹಲವು ಮಹಿಳೆಯರ ಕೌಟಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ಜಗನ್ಮಾತೆ ಗೌರಮ್ಮ ತಾಯಗೆ ಪ್ರಾರ್ಥಿಸಿ ಬರುವ ಗೌರಿ ಹಬ್ಬದೊಳಗೆ ಮಾಡಿಕೊಂಡ ಹರಿಕೆ ಪೂರ್ಣವಾಗುವುದು ಹರಿಕೆಯಂತೆಯೇ ಮಹಿಳೆಯರು ವರಪ್ರದಾಯಿನಿ ಗೌರಿ ಮಾತೆಗೆ ಗೌರಿ ಹಬ್ಬದ ಮುಂಜಾನೆ ಬ್ರಾಹ್ಮಿ ಮೂಹರ್ತದಲ್ಲಿ ವಿಶೇಷ ಪೂಜೆ ನಡೆದು ಗೌರಿ ಹೊಂಡದ ಬಳಿಯಲ್ಲಿಯೇ ಸಿದ್ದಪಡಿಸಿಕೊಂಡ ಬಂದಂತಹ ಬಾಗಿನವನ್ನು ಮುತ್ತೈದೆಯರು ಗೌರಮ್ಮ ತಾಯಿಗೆ ಅರ್ಪಿಸಿ ನಂತರ ಮುತ್ತೈದೆಯರು ಉಡಿ ತುಂಬಿ ಅರಿಶಿಣ ಕುಂಕುಮ ನೀಡಿ ಶುಭ ಹಾರೈಸುತ್ತಾರೆ.


ವರ್ಷವಿಡಿ ಗೌರಿ ಹೊಂಡದಲ್ಲಿ ನೀರು ಬತ್ತುವುದಿಲ್ಲ ಈ ಹಿಂದೆ ಶಿವಪಾರ್ವತಿಯವರು ಸಂಚಾರ ಮಾಡುವಾಗ ತನ್ನ ಜಟ್ಟೆಯಿಂದ ನೀರು ಹರಿದ ಕಾರಣ ಈ ಹೊಂಡವನ್ನು ಗೌರಿ ಹೊಂಡವೆAದು ಕೆರೆಯಲಾಗುತ್ತಿದೆ ಎಂದು ಪುರಾಣ ಹೇಳುತ್ತದೆ ಅದರಂತೆ ಗಣೇಶ ಚತುರ್ಥಿಯ ಹಿಂದಿನ ದಿನ ಗೌರಿ ಹಬ್ಬದೊಂದು ಮಹಿಳೆಯರು ತಾವು ತಾಯಿ ಗೌರಮ್ಮಗೆ ಬಾಗಿನ ನೀಡುವುದು ಸಂಪ್ರದಾಯವಾಗಿದ್ದು ಇಲ್ಲಿನ ಇತಿಹಾಸದಂತೆ ಕಳಸೆ ಗ್ರಾಮದಲ್ಲಿನ ಗೌರಿಹೊಂಡದ ಗೌರಮ್ಮಳಿಗೆ ತಮ್ಮ ಆಶೋತ್ತರಗಳ ಪರಿಹರಿಸುವಂತೆ ಬೇಡಿಕೊಂಡ ಮುತ್ತೆöÊದೆಯರು ಹಬ್ಬದ ದಿನ ಬಂದು ತಮ್ಮ ಸಂಬಂಧಿಕರ ಮತ್ತು ಅಕ್ಕಪಕ್ಕದವರ ಹೀಗೆ ಹಲವರು ಬಂದು ಗೌರಿಹೊಂಡದಲ್ಲಿನ ಮಹಾತಾಯಿ ಗೌರಮ್ಮಳಿಗೆ ಬಾಗಿನ ಸಮರ್ಪಿಸುತ್ತಾರೆ.


ಮುಡುಬ-ಬೆನವಳ್ಳಿ-ದೊಡ್ಡಿನಕೊಪ್ಪ-ಕಳಸೆ-ಬೆಳಂದೂರು-ಗವಟೂರು-ಹುಂಚ,ಅಚ್ಚೆಕೊಪ್ಪ-ಕಗ್ಗಲಿ-ಹಾರೋಹಿತ್ತಲು-ಶಿವಮೊಗ್ಗ-ಹಾರನಹಳ್ಳಿ-ತಳಲೆ-ಹೀಗೆ ಸುತ್ತಮುತ್ತಲಿನ ನೂರಾರು ಗ್ರಾಮಗಳ ಮಹಿಳೆಯರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಾಮಾತೆ ಗೌರಮ್ಮಳಿಗೆ ಬಾಗಿನ ಸಮರ್ಪಿಸುತ್ತಾರೆ.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ

ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ A car crashed into…

1 day ago

ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ

ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ Rippanpete Ganeshotsava 2026: Karnataka…

1 day ago

ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ

ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ Hosanagara Hindu Mahasabha…

1 day ago

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ Forest mobile squad seizes…

2 days ago

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…

3 days ago

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ Shivamogga Minister…

3 days ago