ರಿಪ್ಪನ್‌ಪೇಟೆಯ ಶಿಕ್ಷಕ ತಿಮ್ಮಪ್ಪರವರಿಗೆ ಒಲಿದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ |Rpet news

ರಿಪ್ಪನ್‌ಪೇಟೆಯ ಶಿಕ್ಷಕ ತಿಮ್ಮಪ್ಪರವರಿಗೆ ಒಲಿದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ |

ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ತಿಮ್ಮಪ್ಪ ಸಿ ರವರು ಸೇರಿದಂತೆ ಹೊಸನಗರ ತಾಲೂಕಿನ ಮೂವರು ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಒಲಿದಿದೆ.

ಮೂಲತಃ ಆಯನೂರು ಸಮೀಪದ ಕುಂಸಿ ಗ್ರಾಮದ ನಿವಾಸಿ ತಿಮ್ಮಪ್ಪ ಸಿ ರವರು ಕಳೆದ 14 ವರ್ಷಗಳಿಂದ ಪಟ್ಟಣದ ವಿನಾಯಕ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತಿದ್ದಾರೆ.

ತಿಮ್ಮಪ್ಪ ಸಿ ರವರಿಗೆ 2010 ರಲ್ಲಿ KSQAQ ಪ್ರಶಸ್ತಿ ,2016 ರಲ್ಲಿ NATION BUILDER ಪ್ರಶಸ್ತಿ , 2017 ರಲ್ಲಿ ಕೇಂದ್ರ ಸರ್ಕಾರದ ಜಿಲ್ಲಾಮಟ್ಟದ ಸ್ವಚ್ಚ ವಿದ್ಯಾಲಯ ಪ್ರಶಸ್ತಿ ಹಾಗೂ ಇನ್ನಿತರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಹಾಗೇಯೆ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಕಾಗೆಮರಡು ಶಾಲೆಯ ನೀಲಾವತಿ ಟಿ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಜಯನಗರದ ಸುರೇಂದ್ರ ರವರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2023-24 ನೇ ಸಾಲಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 15, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 14 ಹಾಗೂ ಪ್ರೌಢಶಾಲಾ ವಿಭಾಗದಿಂದ 09 ಒಟ್ಟು 38 ಜನ ಶಿಕ್ಷಕರನ್ನು ಆಯ್ಕೆ ಮಾಡಲಾಗಿರುತ್ತದೆ.

ಸೆಪ್ಟೆಂಬರ್ 5 ರಂದು ಕುವೆಂಪು ರಂಗಮಂದಿರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಂದು ಆಯ್ಕೆಯಾದ ಈ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಆಡಳಿತ) ತಿಳಿಸಿದ್ದಾರೆ.

ಶಿಕ್ಷಕರ ಪಟ್ಟಿ-ಕಿರಿಯ ಪ್ರಾಥಮಿಕ ವಿಭಾಗ

ಸಹಶಿಕ್ಷಕರಾದ ಚೆಲುವರಾಜ ಎಸ್., ಗಾಡಿಕೊಪ್ಪ ಕ್ಯಾಂಪ್ ಶಾಲೆ. ಗೌಸಿಯಾ ಖಾನಂ, ರಾಮೇನಕೊಪ್ಪ. ಶೋಭಾ ವೈ, ಜ್ಯೋತಿನಗರ, ಶಿವಮೊಗ್ಗ. ಶಿವಕುಮಾರ್ ಕೆ.ಎಂ, ಅರಹತೊಳಲು, ಭದ್ರಾವತಿ. ರಮೇಶಪ್ಪ ಎನ್, ಚೌಡನಾಯಕನಕೊಪ್ಪ, ಶಿಕಾರಿಪುರ. ನಾಗರಾಜಪ್ಪ.ಬಿ, ಸಂಕ್ಲಾಪುರ, ಶಿಕಾರಿಪುರ. ಮನೋಹರಪ್ಪ ಡಿ, ಎಂ.ಕೆ.ಅರಳಿಕೊಪ್ಪ, ಸಾಗರ. ಪೂರ್ಣೇಶ್ ಹೆಚ್ ಆರ್, ಹೊಸೂರು, ತೀರ್ಥಹಳ್ಳಿ. ಲೀಲಾವತಿ ಎಸ್, ವಿಠ್ಠಲನಗರ, ತೀರ್ಥಹಳ್ಳಿ. ಭಾಗ್ಯಬಾಯಿ, ಹುಲ್ಕೋಡ್, ತೀರ್ಥಹಳ್ಳಿ. ತಿಮ್ಮಪ್ಪ ಸಿ, ವಿನಾಯಕ ನಗರ, ರಿಪ್ಪನ್‍ಪೇಟೆ. ನೀಲಾವತಿ ಟಿ, ಕಾಗೆಮರಡು, ಹೊಸನಗರ. ಹುಚ್ಚರಾಯಪ್ಪ ಬಿ, ವೃತ್ತಿಕೊಪ್ಪ, ಸೊರಬ. ಉಮೇಸಲ್ಮಾ, ಹೊಸಪೇಟೆ ಹಕ್ಕಲು, ಸೊರಬ. ಕೃಷ್ಣವೇಣಿ, ಕುದರೆಗಣಿ, ಸೊರಬ.

ಹಿರಿಯ ಪ್ರಾಥಮಿಕ ವಿಭಾಗ:

ಸಹ ಶಿಕ್ಷಕರಾದ ಶೋಭಾ ಕೆಎಸ್, ಬೀರನಕೆರೆ ಶಿವಮೊಗ್ಗ. ರಂಗನಾಥ ಕೆಎನ್, ವಿಶ್ವನಗರ, ಭದ್ರಾವತಿ. ಫರೀದುನ್ನೀಸಾ, ಕಾಗದನಗರ, ಭದ್ರಾವತಿ. ಬೆನಕಪ್ಪ ಕೆವಿ, ಈಸೂರು, ಶಿಕಾರಿಪುರ. ಉಮೇಶ್ ಮಾರವಳ್ಳಿ, ಶಿಕಾರಿಪುರ. ಗೃಹಲಕ್ಷ್ಮಿ ಎಂ, ಅಮಟೆಕೊಪ್ಪ ಶಿಕಾರಿಪುರ. ಶಾರದಾಂಬ ಜಿ, ನೊಣಬೂರು, ತೀರ್ಥಹಳ್ಳಿ. ವೆಂಕಟೇಶ್ ಆರ್, ಹಂಚಿ, ಸೊರಬ. ಬ.ಮು.ಶಿಕ್ಷಕರಾದ ಅಂಬಿಕಾ, ಲಕ್ಕಿನಕೊಪ್ಪ, ಶಿವಮೊಗ್ಗ. ಡಾಕ್ಯಾನಾಯ್ಕ ಹೆಚ್, ಸಿದ್ಲಿಪುರ, ಭದ್ರಾವತಿ. ಸೌಭಾಗ್ಯ ಡಿ, ಎ.ಕೆ.ಮಂಚಾಲೆ, ಸಾಗರ. ಶಾರದ ಪಿ, ಮೇಲಿನಬೆಸಿಗೆ, ಹೊಸನಗರ. ಪ್ರ.ಮು.ಶಿಕ್ಷಕ ರಮೇಶ್ ಎನ್ ಹೆಗಡೆ, ಕೆ.ಕಮರೂರು, ಸೊರಬ. ದೈ.ಶಿ.ಶಿಕ್ಷಕ ಬಸವರಾಜ ಕೆ. ಸಾಗರ.

ಪ್ರೌಢಶಾಲಾ ವಿಭಾಗ:

ಸಹ ಶಿಕ್ಷಕರಾದ ರಂಗಪ್ಪ ಆರ್, ಬಿ.ಹೆಚ್.ರಸ್ತೆ ಶಿವಮೊಗ್ಗ. ಬಬಿತಾಕುಮಾರಿ, ಅರಕೇರೆ, ಭದ್ರಾವತಿ. ಹರಿಪ್ರಸಾದ್ ಎಂ ಜಿ, ಕಟ್ಟಿನಕಾರು, ಸಾಗರ. ಶ್ರೀಧರ ಹೆಚ್ ಆರ್, ಕಟ್ಟೆಹಕ್ಲು, ತೀರ್ಥಹಳ್ಳಿ. ಸುರೇಂದ್ರ ಎಂ, ಜಯನಗರ, ಹೊಸನಗರ. ಮುಖ್ಯ ಶಿಕ್ಷಕರಾದ ಮಾಲತೇಶ್ವರ ಎಲ್, ಚಿಕ್ಕಜಂಬೂರು, ಶಿಕಾರಿಪುರ, ದತ್ತಾತ್ರೇಯ ಭಟ್, ಸಾಗರ. ಮಂಜಪ್ಪ ಕೆ, ಹೊಸಬಾಳೆ, ಸೊರಬ. ದೈ.ಶಿ.ಶಿಕ್ಷಕರಾದ ಪುಟ್ಟಪ್ಪ ಎ ಬಿ, ಹೊಸಮುಗಳಗೆರೆ ಶಿಕಾರಿಪುರ.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ

ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ A car crashed into…

1 day ago

ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ

ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ Rippanpete Ganeshotsava 2026: Karnataka…

1 day ago

ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ

ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ Hosanagara Hindu Mahasabha…

1 day ago

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ Forest mobile squad seizes…

2 days ago

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…

3 days ago

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ Shivamogga Minister…

3 days ago