ಸಾಗರ : ಬಾವಿಯೊಳಗೆ ಕೆಲಸ ಮಾಡುತ್ತಿದ್ದಾಗ ಮೇಲಿನಿಂದ ಬೋಡ್ರಸ್ ಕಲ್ಲು ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ನಗರದ 9 ನೇ ತಿರುವಿನಲ್ಲಿ ಘಟನೆ ನಡೆದಿದೆ. ರಾಮನಗರದ ಮೋಹನ (58) ಸಾವು ಕಂಡ ದುರ್ದೈವಿ.
ಅರಳಿಕಟ್ಟೆ ಬಳಿಯ ಮನೆಯ ಬಾವಿಯಲ್ಲಿ ಅವರು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ ವೇಳೆ ಮೇಲಿನಿಂದ ಆಕಸ್ಮಿಕವಾಗಿ ತಲೆ ಮೇಲೆ ಕಲ್ಲು ಬಿದ್ದಿದ್ದು, ಬಾವಿಯಲ್ಲೇ ಸಾವಿಗೀಡಾಗಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ.
ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.