ಶಿವಮೊಗ್ಗ : ಮೀನು ಹಿಡಿಯಲೆಂದು ತುಂಗಾ ನದಿಗೆ ಇಳಿದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಕಾಲೇಜು ವಿದ್ಯಾರ್ಥಿಗಳಾದ ಮೊಯಿನ್ ಖಾನ್(18) ಮತ್ತು ಅಂಜುಂ ಖಾನ್(18) ನೀರಿನಲ್ಲಿ ಕಣ್ಮರೆಯಾದವರು.
 ಶಿವಮೊಗ್ಗದ ಶಿವಮೊಗ್ಗದ ಕುರುಬರ ಪಾಳ್ಯದಲ್ಲಿ ದುರ್ಘಟನೆ ನಡೆದಿದೆ. ಸವಾಯಿಪಾಳ್ಯದ ಮೊಯಿನ್ ಖಾನ್(18), ಇಲ್ಯಾಸ್ ನಗರದ ಅಂಜುಂ ಖಾನ್(18) ಇಬ್ಬರೂ ಬೇರೆ ಕೆಲವು ಸ್ನೇಹಿತರ ಜತೆ ಮೀನು ಹಿಡಿಯಲೆಂದು ನದಿ ತೀರಕ್ಕೆ ಬಂದಿದ್ದರು. ಅಲ್ಲಿ ನೀರಿಗಿಳಿದು ಮೀನು ಹಿಡಿಯುತ್ತಾ ಸುಳಿಗೆ ಸಿಲುಕಿಕೊಂಡಿದ್ದಾರೆ. ಹಾಗೆ ನೀರಿನಲ್ಲಿ ಮುಳುಗಿದ ಅವರು ಮೇಲೆ ಬಂದಿಲ್ಲ.
 ಬಿಸಿಎ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಮೊಯಿನ್ ಖಾನ್ ಶವ ಪತ್ತೆಯಾಗಿದ್ದರೆ, ಬಿಎ ಮೊದಲ ವರ್ಷದ ವಿದ್ಯಾರ್ಥಿ ಅಂಜುಂಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ. 
 ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
 


