ಶಾಲಾ ವಾಹನಕ್ಕೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಕೂಡ್ಲಿಗೆರೆ ಗ್ರಾಮದಲ್ಲಿ ನಡೆದಿದೆ.
ಅಪಘಾತದಲ್ಲಿ ವಿಶ್ವನಾಥ ಕೊಟ್ರಪ್ಪ ಬಾಜಿಗೊಂಡರ್ (37) ಸಾವನ್ಬಪ್ಪಿರುವ ದುರ್ದೈವಿಯಾಗಿದ್ದಾನೆ. ಬಾಜಿಗೊಂಡರ್ ಹಾವೇರಿ ಜಿಲ್ಲೆಯ ಬೆಳವಗಿ ಗ್ರಾಮದ ನಿವಾಸಿಯಾಗಿದ್ದಾನೆ.
ಹಾವೇರಿ ಜಿಲ್ಲೆಯ ವಾಸಿಯಾದ ಬಾಜಿಗೊಂಡರ್ ಶಿವಮೊಗ್ಗದಲ್ಲಿ ಚಾಲಕ ವೃತ್ತಿ ನಿರ್ವಹಿಸುತ್ತಿದ್ದ. ದಾವಣಗೆರೆ ಕಡೆ ಹೋಗಲು ಕೂಡ್ಲಿಗೆರೆಯ ಗ್ರಾಮ ಪಂಚಾಯಿತಿ ಮುಂಭಾಗದ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದನು.
ಭದ್ರಾವತಿಗೆ ಬಂದು ಭದ್ರಾವತಿಯ ಮೂಲಕ ದಾವಣಗೆರೆಕಡೆ ಹೊರಡಲು ಸಜ್ಜಾಗಿದ್ದ ಬಾಜಿಗೊಂಡರ್ ಗೆ ಕೂಡ್ಲಿಗೆರೆಯಲ್ಲಿ ತಲುಪನ ಹಳ್ಳಿಯ ರಸ್ತೆಯಿಂದ ಮುಖ್ಯರಸ್ತೆಗೆ ಬಂದ ಶಾಲಾ ವಾಹನಕ್ಕೆ ಅಚಾನಕ್ ಆಗಿ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ.
ಪ್ರಕರಣ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಘಟನೆ ನಡೆದ ಸ್ಥಳಕ್ಕೆ ಪಿಐ ಗುರುರಾಜ್ ಮೈಲಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ



