Headlines

ಆಗುಂಬೆ ಘಾಟಿಯಲ್ಲಿ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದ ವ್ಯಕ್ತಿ – ಜೀವದ ಹಂಗು ತೊರೆದು ರಕ್ಷಿಸಿದ ಯುವಕರು|agumbe

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಘಾಟಿಯ 7 ನೇ ತಿರುವಿನಲ್ಲಿ ಗುಜರಿ ಫ್ಯಾಕ್ಟರಿ ಮಾಲಿಕನೊಬ್ಬ ಆಕಸ್ಮಿಕವಾಗಿ 30 ಅಡಿ ಪ್ರಪಾತಕ್ಕೆ ಬಿದ್ದ ಘಟನೆ ಭಾನುವಾರ ಸಂಜೆ ವೇಳೆ ನೆಡೆದಿದೆ.


ಮಹಮ್ಮದ್ ಪಾಷಾ ಎಂಬಾತ ರಸ್ತೆ ಬದಿಯಲ್ಲಿದ್ದ ನಿಂತಿದ್ದ ವೇಳೆ ಪ್ರಪಾತಕ್ಕೆ ಬಿದ್ದಿದ್ದಾರೆ. ಸ್ಕ್ರಾಪ್ ಗಾಡಿಯನ್ನು ಟ್ರ್ಯಾಕ್ಟರ್‌ ಟೋಯಿಂಗ್ ಮಾಡ್ತಿದ್ದ ವೇಳೆ ಗಾಡಿ ಬ್ರೇಕ್ ಫೇಲ್ ಆದ ಹಿನ್ನೆಲೆ ಮಹಮ್ಮದ್ ಪಾಷಾ ಅವರಿಗೆ ಗುದ್ದಿದ ಕಾರಣ ಈ ಅವಘಡ ಸಂಭವಿಸಿದೆ.


ಆಗುಂಬೆ ಘಾಟ್ ನಿಂದ 25 ರಿಂದ 30 ಅಡಿ ಕೆಳಗಡೆ ಬಿದ್ದ ಭಾಷಗೆ ಗಂಭೀರ ಗಾಯವಾಗಿದ್ದು ಮೇಲಿನಿಂದ ಬಿದ್ದ ರಭಸಕ್ಕೆ ಭಾಷ ಅವರ ಸೊಂಟ ಮತ್ತು ತಲೆಗೆ ಪೆಟ್ಟು ಬಿದ್ದಿದೆ. ಕೂಡಲೇ ಸ್ಥಳದಲ್ಲಿದ್ದಲಿದ್ದ ಹಿಂದೂ ಜಾಗರಣೆ ವೇದಿಕೆಯ ಸದಸ್ಯರು ಮಹಮ್ಮದ್ ಪಾಷಾರನ್ನ ರಕ್ಷಣೆ ಮಾಡಿದ್ದಾರೆ.


ಹಿಂದೂ ಜಾಗರಣೆ ವೇದಿಕೆಯ ನಿತ್ಯಾನಂದ ನೇತೃತ್ವದ ತಂಡದಿಂದ ಆಗುಂಬೆ ಘಾಟ್ ಕೆಳಗಡೆ ಇಳಿದು ಮಹಮ್ಮದ್ ಪಾಷಾರನ್ನ ಬೆಡ್ ಶೀಟ್ ಹಾಗೂ ಹಗ್ಗದ ಸಹಾಯದಿಂದ ಮೇಲೆತ್ತಿದ್ದಾರೆ. ಹಿಂದು ಜಾಗರಣೆ ವೇದಿಕೆಯ ನಿತ್ಯಾನಂದ ಮತ್ತು ತಂಡದ ರಕ್ಷಣಾ ಕಾರ್ಯಕ್ಕೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

Exit mobile version