ಚಲಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ನೀರುಗಂಟಿಯೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿದನೂರಿನಲ್ಲಿ(ನಗರ) ನಡೆದಿದೆ.
ಬಿದನೂರು ನಗರದ ಚಿಕ್ಕಪೇಟೆ ನಿವಾಸಿ ತುಕರಾಂ(46) ಎಂಬಾತ ಮೃತ ದುರ್ದೈವಿ.
ಕುಡಿಯುವ ನೀರು ಪೂರೈಸುವ ಟ್ರಾಕ್ಟರ್ ಪಲ್ಟಿಯಾದ ಕಾರಣ ನೀರುಗಂಟಿ ಸಾವನ್ನಪ್ಪಿದ್ದಾನೆ. ನಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೀರುಗಂಟಿ ಕೆಲಸ ಮಾಡುತ್ತಿದ್ದ ತುಕರಾಂ.ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಮನೆಗಳಿಗೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಸಲು ಮುಂದಾದಾಗ ಈ ಅವಘಡ ಸಂಭವಿಸಿದೆ.
ನೀರು ಪೂರೈಸುವ ಟ್ರ್ಯಾಕ್ಟರ್ ನ್ನು ಅಪ್ರಾಪ್ತನಿಗೆ ಚಲಾಯಿಸಲು ನೀಡಿದ್ದಕ್ಕೆ ಗುತ್ತಿಗೆದಾರ ಹಾಗೂ ಗ್ರಾಮ ಪಂಚಾಯತಿ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.