Headlines

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಯುವಕರ ಮೇಲೆ ಹಲ್ಲೆ – ಆಸ್ಪತ್ರೆಗೆ ದೌಡಾಯಿಸಿದ ಹಿಂದೂ ಕಾರ್ಯಕರ್ತರು|assault

ಶಿವಮೊಗ್ಗ : ಕ್ಷುಲಕ ವಿಚಾರಕ್ಕೆ ಎರಡು ಕೋಮಿನ ಯುವಕರ  ಮಧ್ಯೆ ಟಿಪ್ಪು ನಗರದಲ್ಲಿ ಗಲಾಟೆಯಾಗಿ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಈ ಘಟನೆ ಕೋಮು ಸ್ವರೂಪ ಪಡೆದಿತ್ತು. ರಸ್ತೆಯಲ್ಲಿ ಹೋಗುವಾಗ ಬೈಕ್‌ ಮತ್ತು ಆಟೋ ತಾಗಿವೆ. ಇದೆ ವಿಚಾರಕ್ಕೆ ಗಲಾಟೆಯಾಗಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ತಿಳಿಸಿದ್ದಾರೆ. ಸಂದೇಶ್‌ ಎಂಬಾತನ ಕಣ್ಣಿನ ಬಳಿ ಗಾಯವಾಗಿದೆ. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ದ್ರೌಪದಮ್ಮ ಸರ್ಕಲ್‌ ಬಳಿ ವಿಜಯ್‌ ಕುಮಾರ್‌ ಎಂಬಾತನ ಮೇಲೆ ಭಾನುವಾರ ಸಂಜೆ ಹಲ್ಲೆಯಾಗಿದೆ. ಗುರುಸಿದ್ದಪ್ಪ ಮತ್ತು ತಸ್ರು ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಿಜಯ್‌ ಕುಮಾರ್‌ ಬೆನ್ನು ಮತ್ತು ಬಲೈಗೆ ಹಲ್ಲೆಯಾಗಿದೆ. ‘ಪ್ರಾಥಮಿಕವಾಗಿ ಚೂಪಾದ ಆಯುಧದಿಂದ ಹಲ್ಲೆಯಾಗಿದೆ ಎಂದು ತಿಳಿದು ಬಂದಿದೆ. ಯಾವ ಆಯುಧ ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ. ಇದು ವೈಯಕ್ತಿಕ ಪ್ರಕರಣವಾಗಿದ್ದು ತನಿಖೆ ಬಳಿಕ ಪ್ರಕರಣ ದಾಖಲು ಮಾಡಲಾಗುತ್ತದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ವಾಟ್ಸಪ್‌ ಮೂಲಕ ಮಾ‍ಧ್ಯಮಗಳಿಗೆ ತಿಳಿಸಿದ್ದಾರೆ.

ಟಿಪ್ಪು ನಗರ ಮತ್ತು ದ್ರೌಪದಮ್ಮ ಸರ್ಕಲ್‌ನಲ್ಲಿ ನಡೆದ ಹಲ್ಲೆ ಪ್ರಕರಣಗಳು ಕೋಮು ಸ್ವರೂಪ ಪಡೆದುಕೊಂಡಿದ್ದವು. ವಿಚಾರ ತಿಳಿದು ಹಿಂದೂ ಸಂಘಟನೆಗಳ ಕಾರ್ಯಕರ್ತರು ರಾತ್ರಿ ಮೆಗ್ಗಾನ್‌ ಆಸ್ಪತ್ರೆ ಮುಂಭಾಗ ಸೇರಿದ್ದರು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಟಿಪ್ಪು ನಗರದಲ್ಲಿ ನಡೆದ ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ವಾಟ್ಸಪ್‌ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿಚಾರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಸುಳ್ಳು ಸುದ್ದಿ ಹರಡಬೇಡಿ

ಟಿಪ್ಪು ನಗರ ಮತ್ತು ದ್ರೌಪದಮ್ಮ ಸರ್ಕಲ್‌ನಲ್ಲಿ ನಡೆದ ಹಲ್ಲೆ ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದಕ್ಕೆ ಪೊಲೀಸ್‌ ಇಲಾಖೆ ಅಕ್ಷೇಪ ವ್ಯಕ್ತಪಡಿಸಿದೆ. ಎರಡು ಘಟನೆಗಳು ಪ್ರತ್ಯೇಕವಾಗಿದ್ದು, ಒಂದಕ್ಕೊಂದು ಸಂಬಂಧವಿಲ್ಲ. ಮಾಹಿತಿ ಪ್ರಕಟಣೆಗು ಮೊದಲು ಸತ್ಯಾಸತ್ಯತೆ ತಿಳಿದುಕೊಳ್ಳಿ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

Exit mobile version