SSLC ಪರೀಕ್ಷೆಯಲ್ಲಿ ಹೊಸನಗರದ ಶ್ರೀ ಗುರೂಜಿ ಇಂಟರ್ ನ್ಯಾಷನಲ್ ರೆಶಿಡೆನ್ಶಿಯಲ್ ಸ್ಕೂಲ್ ಗೆ ಸತತ 9ನೇ ಬಾರಿಗೆ 100 ರ ಫಲಿತಾಂಶ.
22-2023ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಒಟ್ಟು 22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 6ಜನ ವಿದ್ಯಾರ್ಥಿಗಳು A+ ಶ್ರೇಣಿ .12 ಜನ ವಿದ್ಯಾರ್ಥಿಗ ಳು Aಶ್ರೇಣಿಯಲ್ಲಿ B+ ಶ್ರೇಣಿಯಲ್ಲಿ ಒಬ್ಬರು Bಶ್ರೇಣಿಯಲ್ಲಿ 3ಜನ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ 100ಫಲಿತಾಂಶ ತಂದಿದ್ದಾರೆ.
ಶ್ರೀ ಗುರೂಜಿ ಇಂಟರ್ನ್ಯಾಷನಲ್ ರೆಸಿಡೆನ್ಸಿ ಸ್ಕೂಲ್ ಹೊಸನಗರ ಶೇಕಡ 100 ಫಲಿತಾಂಶ. ಪರೀಕ್ಷೆಗೆ ಕುಳಿತ 22 ವಿದ್ಯಾರ್ಥಿಗಳಲ್ಲಿ ದರ್ಜೆ A+6,A 12, B+1,B1,C1 ಉತ್ತೀರ್ಣರಾಗಿರುತ್ತಾರೆ. ಅತಿ ಹೆಚ್ಚು ಅಂಕಗಳಿಸಿದವರು
ತೇಜಸ್ವಿನಿ 609, ಐಶ್ವರ್ಯ ಜೋಯಿಸ್ 594, ಆಯುಷ್ 580, ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ.
ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗು ಈ ಸಾಧನೆಗೆ ಬೆಂಬಲವಾಗಿ ನಿಂತ ಶಿಕ್ಷಕವೃಂದದವರಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುದೇಶ್ ಕಾಮತ್ ಹಾಗು ಆಡಳಿತ ಮಂಡಳಿ ಮತ್ತು ಪೋಷಕವೃಂದ ಅಭಿನಂದನೆ ಸಲ್ಲಿಸಿದ್ದಾರೆ.
ಫಲಿತಾಂಶದ ವಿವರ
ತೇಜಶ್ವಿನಿ ಜಿ ಜಾದವ್ (609)97.44
ಐಶ್ವರ್ಯ ಜಿ ಜೋಯ್ಸ್ (594)95.04 ಆಯುಷ್ ಕೆ.(580)92.08
ಸನ್ನಿಧಿ ಎಸ್.(571) 91.36.
ಚಂದ್ರಶೇಖರ್ (566)90.56
ನೀತು( 563) 90.08
ನಿಶಾಂತ್ (562)89.92 ಸೃಜನ್ ಆರ್ ಜೋಯ್ಸ್ ( 559) 89.44
ಉಲ್ಲಾಸ್ ಕಾಮತ್ (551)88.16
ನಿಶ್ಚಿತಾ ಪಿ.ಎಮ್ (543)86.88
ಅಂಕಿತಾ ( 538)86.08
ಸಾತ್ವಿಕ್ ( 530)84.08
ಸೃಜನ್ .ಎಸ್.(515)82.40
ಪನ್ನಗ .ಕೆ ( 508)81.28
ಕೃಷ್ಣಕುಮಾರ್ ( 507)81.12
ಗೌತಮ್ .ಡಿ.ಜೆ.(504)80.64
ಅಜಿತ್ ಕಾಮತ್ (501)80.16
ತನೀಷ್( 500)80./
ಕಾವ್ಯ (487)77.93
ಮನೋಜ್ ಎಮ್, ಎಸ್.(431) 68.96.
ನವನೀತ್ ( 405)64.80 ಅಕ್ಷಯ್ .ಡಿ.ಎಮ್ (352) 56.32.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್