ಅಸ್ಪತ್ರೆಯ ಖರ್ಚಿಲ್ಲ- ಸೂಲಗಿತ್ತಿಯ ಕಾಟವಿಲ್ಲದೇ ಗರ್ಭೀಣಿಯರಿಗೆ ತಕ್ಷಣ ಹೆರಿಗೆ ಮಾಡಿಸುವ ಬೇಹಳ್ಳಿ ಸಂಪರ್ಕ ರಸ್ತೆ|behalli

ಅಸ್ಪತ್ರೆಯ ಖರ್ಚಿಲ್ಲ- ಸೂಲಗಿತ್ತಿಯ ಕಾಟವಿಲ್ಲದೇ ಗರ್ಭೀಣಿಯರಿಗೆ ತಕ್ಷಣ ಹೆರಿಗೆ ಮಾಡಿಸುವ ಬೇಹಳ್ಳಿ ಸಂಪರ್ಕ ರಸ್ತೆ’’

ರಿಪ್ಪನ್‌ಪೇಟೆ : ಆಸ್ಪತ್ರೆಯ ಖರ್ಚಿಲ್ಲ……….ಸೂಲಗಿತ್ತಿಯ ಕಾಟವಿಲ್ಲ……….ಗರ್ಭೀಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೇ ಸಾಕು 24ನೇ ಮೈಲಿಕಲ್ಲಿನಿಂದ ಬೇಹಳ್ಳಿ ಹೋಗುವ ರಸ್ತೆಯಲ್ಲಿ ಹೋದರೆ ಸಾಕು ಹೆರಿಗೆಯಾಗುತ್ತದೆ. ಹೃದಾಯಾಘಾತಕ್ಕೊಳಗಾದವರು ಮಾತ್ರ ಅಸ್ಪತ್ರೆಗೆ ಹೋಗುವ ಮೊದಲೇ ಇಹಲೋಕಕ್ಕೆ ಬೇಗ ಹೋಗಲು ಸಾಕು ಈ ರಸ್ತೆ ಹ್ಯಾಗಿದೇ ನೋಡಿ ಸ್ವಾಮಿ………….! ನಮ್ಮೂರ ರಸ್ತೆ ಎಂದು ಗ್ರಾಮಸ್ಥರುಗಳು ತಮ್ಮ ನೋವನ್ನು ಮಾಧ್ಯಮದವರಲ್ಲಿ ಹಂಚಿಕೊಂಡಿದ್ದು ಹೀಗೆ…




ಡಬಲ್ ಇಂಜಿನ್ ಸರ್ಕಾರವಿದ್ದಾಗ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ 3500 ಸಾವಿರ ಕೋಟಿ ಅನುದಾನವನ್ನು ತಂದಿರುವುದಾಗಿ ಬೀಗುವ  ಮಾಜಿ ಸಚಿವ ಹಾಲಿ ಶಾಸಕ ಆರಗ ಜ್ಞಾನೇಂದ್ರರಿಗೆ ತಮ್ಮ ಸ್ವಕ್ಷೇತ್ರದಲ್ಲಿನ ಹುಂಚ ಹೋಬಳಿಯ ವ್ಯಾಪ್ತಿಯ ಮುಂಬಾರು ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ ಉಡುಪಿ ಕುಂದಾಪುರ ಭಟ್ಕಳ ಬೈಂದೂರು ಹೊಸನಗರ ರಿಪ್ಪನ್‌ಪೇಟೆ ಅಯನೂರು ಶಿವಮೊಗ್ಗ ಸಂಪರ್ಕದಲ್ಲಿ ಬರುವ 24 ನೇ ಮೈಲಿಕಲ್ಲಿನಿಂದ ಬಡಗೋಡು,ಬೇಹಳ್ಳಿ,ಅಂಡಗದೂರು.ದೇವರಸಲಿಕೆ,ಬಂದಗಳಲೇ,
ದಿಂಬಣಗಲು,ವಸವೆ,ಜಯನಗರ ಲಿಂಕ್ ರಸ್ತೆಗೆ ಸಾಕಷ್ಟು ಭಾರಿ ಜನಪ್ರತಿನಿಧಿಗಳ ಗಮನಸೆಳಯಲಾದರೂ ಕೂಡಾ ಪ್ರಯೋಜನವಾಗದೇ ನಿರ್ಲಕ್ಷö್ಯ ವಹಿಸಿರುವುದು ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿಂದೆ ರಾಜ್ಯ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್.ನಂತರ ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಪ್ರತಿನಿಧಿಸುವ ಈ ಕ್ಷೇತ್ರದಲ್ಲಿನ ದುಸ್ಥಿತಿ ಕಂಡರು ಕಾಣದವರಂತಾಗಿದ್ದು ಈ ಭಾಗದಲ್ಲಿ  ಕಡಿಮೆ ಮತಬಂದವು ಎಂಬ ಕಾರಣಕ್ಕೂ……………..!  ಇಬ್ಬರು ರಾಜಕೀಯ ಮುಖಂಡರುಗಳ  ಉದ್ದೇಶದಿಂದಲೂ ಏನೂ ಅಭಿವೃದ್ದಿಯಲ್ಲಿ ನಿರ್ಲಕ್ಷö್ಯಕ್ಕೆ  ಸಾಕ್ಷಿಕರಿಸುವಂತಾಗಿ ಈ ರಸ್ತೆಯಲ್ಲಿ ಅಂಗನವಾಡಿ ಎಲ್.ಕೆ.ಜಿ.ಯು.ಕೆ.ಜಿ ಹೀಗೆ ಪ್ರಾಥಮಿಕ ಪ್ರೌಢಶಾಲೆ ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ಅನಾರೋಗ್ಯ ಪೀಡಿತರು ವೃದ್ದರು ಗರ್ಭೀಣಿಯರು ಹೃದಯಾಘಾತಕ್ಕೊಳಗಾದವರು ತುರ್ತು ಚಿಕಿತ್ಸೆಗಾಗಿ ಈ ರಸ್ತೆಯಲ್ಲಿ ಬಂದರೆ ಇಹಲೋಕ ಸೇರುವುದು ಗ್ಯಾರಂಟಿ……..!




ಹೆರಿಗೆ ಬೇನೆ ಕಾಣಿಸಿಕೊಂಡವರನ್ನು ಕರೆತಂದರೆ ರಸ್ತೆಯಲ್ಲಿ ಸುಲಭವಾಗಿ ಖರ್ಚಿಲ್ಲದೆ ಹೆರಿಗೆಯೂ ಅಗುತ್ತದೆ ಎಂದು ಗ್ರಾಮಸ್ಥರಾದ   ಗ್ರಾಮಸ್ಥರು ತಮ್ಮ ಅಸಮದಾನವನ್ನು ಮಾದ್ಯಮದವರೊಂದಿಗೆ ಹಂಚಿಕೊಂಡರು.

ಈ ಸಂಪರ್ಕ ರಸ್ತೆಯ ಮಧ್ಯದಲ್ಲಿ ರಾಜ್ಯ ಗೃಹ ಸಚಿವರಾದ ಆರಗಜ್ಞಾನೇಂದ್ರರು ಈ ಗ್ರಾಮಗಳ ಮತದಾರರ  ಬಹುವರ್ಷದ ಬೇಡಿಕೆಯನ್ನಾದರಿಸಿ ಸಂಪರ್ಕ ಸೇತುವೆ ನಿರ್ಮಿಸಲಾಗಿದ್ದು ಉಳಿದಂತೆ ಸುಮಾರು 5 ರಿಂದ ಅರು ಏಳು ಕಿ.ಮೀ.ದೂರದ ಈ ರಸ್ತೆಗೆ ಸರ್ಕಾರದಿಂದ ನೈಯಾಪೈಸೆ ಬಿಡುಗಡೆ ಮಾಡಿಸಿಲ್ಲ ಎಂದರು.

ಶಾಲಾ ಕಾಲೇಜ್‌ಗಳು ಪ್ರಾರಂಭವಾಗುತ್ತಿದ್ದು ಇಂತಹ ಕಲ್ಲು ಮಣ್ಣಿನ ಈ ನಾದರಸ್ತಾದ ಈ ಕಿರಿದಾದ ರಸ್ತೆಯಲ್ಲಿ ಮಕ್ಕಳನ್ನು ಶಾಲೆಗೆ ಮಳೆಗಾಲದಲ್ಲಿ ಕಳುಹಿವುದು ಹೇಗೆ ಎಂಬ ಅಂತಕ ಕಾಡುವಂತಾಗಿದೆ ಎಂದು  ಈ  ಗ್ರಾಮದ ವಿದ್ಯಾವಂತ ಯುವಕನೊಬ್ಬಲ ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರಿಗೂ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಯ ಕುರಿತು ಸವಿಸ್ತಾರವಾದ ಗಮನಸೆಳೆಯುವಂತಹ ಮನವಿ ಪತ್ರವನ್ನು ಕಳುಹಿಸಲಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.





ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…

11 hours ago

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ Shivamogga Minister…

11 hours ago

ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು

ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು Ripponpete’s Niyaz Nasir wins first place in…

11 hours ago

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !?

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !? Illegal liquor…

17 hours ago

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…

18 hours ago

ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…

1 day ago