ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಬಳಿಯ ಹೆನ್ನಿ ಗ್ರಾಮದಲ್ಲಿ ಕರಡಿ ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ. ದಾಳಿಯಲ್ಲಿ ತಿಮ್ಮನಾಯ್ಕ್ ಎಂಬವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಸೌದೆ ಒಟ್ಟು ಮಾಡಲು ಅಂತಾ ತೋಟಕ್ಕೆ ತೆರಳಿದ್ದ ಅವರ ಮೇಲೆ ಅಲ್ಲಿದ್ದ ಕರಡಿಯು ದಾಳಿ ನಡೆಸಿದೆ. ಏಕಾಯೇಕಿ ನಡೆದ ದಾಳಿಯಲ್ಲಿ ತಿಮ್ಮನಾಯ್ಕ್ರಿಗೆ ತಪ್ಪಿಸಿಕೊಳ್ಳಲು ಸಹ ಆಗಲಿಲ್ಲ. ಜೋರಾಗಿ ಕಿರುಚಿಕೊಂಡಿದ್ದಾರೆ. ಈ ವೇಳೇ ಕರಡಿ ಅಲ್ಲಿಂದ ಕಾಲ್ಕಿತ್ತಿದೆ.
ಇವರ ಚೀರಾಟ ಕೇಳಿಸ್ತಿದ್ದಂತೆ, ಸ್ಥಳೀಯರು ಓಡಿ ಬಂದಿದ್ದಾರೆ. ತೀವ್ರವಾದ ಗಾಯಗಳಾಗಿದ್ದ ತಿಮ್ಮನಾಯ್ಕ್ರನ್ನ ತಕ್ಷಣವೆ ಆಸ್ಪತ್ರೆಗೆ ರವಾನಿಸಿದ್ದಾರೆ. ಸಾಗರ ಉಪವೀಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯಲ್ಲಿ ತಿಮ್ಮನಾಯ್ಕ್ರಿಗೆ ಕಣ್ಣಿಗೆ ತೀವ್ರ ಸ್ವರೂಪದ ಹಾನಿಯಾಗಿದ್ದು, ಮುಖದ ತುಂಬೆಲ್ಲಾ ಗಾಯಗಳಾಗಿವೆ. ಘಟನೆ ಬಗ್ಗೆ ತಿಳಿದ ಸ್ಥಳೀಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.


