ಮಿನಿ ಲಾರಿ ಮತ್ತು ಬೈಕ್ ನಡುವೆ ಅಪಘಾತ – ಬೈಕ್ ಚಾಲಕ ಆಸ್ಪತ್ರೆಗೆ ದಾಖಲು|accident

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತಾಳಗುಪ್ಪದ ಸಮೀಪದ ಗೌರಿ ಕೆರೆ ಬಳಿ ಇವತ್ತು ಅಪಘಾತ ಸಂಭವಿಸಿದೆ. ಸಾಗರದಿಂದ ಸಿದ್ದಾಪುರದ ಕಡೆಗೆ ತೆರಳುತ್ತಿದ್ದ ಬೈಕ್​ವೊಂದಕ್ಕೆ 407 ಲಾರಿ ಡಿಕ್ಕಿ ಹೊಡೆದಿದೆ.




ಎದುರಿನಿಂದ ಬಂದ ಲಾರಿ ಬೈಕ್​ಗೆ ಡಿಕ್ಕಿ ಹೊಡೆದು ರಸ್ತೆಯ ಬದಿಯಲ್ಲಿರುವ ಹೊಂಡಕ್ಕೆ ಉರುಳಿದೆ. ಘಟನೆಯಲ್ಲಿ ಬೈಕ್​ ಸವಾರ ಗಾಯಗೊಂಡಿದ್ದು, ಆತನನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೂ ಹರಿಹರದಲ್ಲಿ  ಔಷಧಿ ಸಾಗಣೆಯ ವಾಹನವೊಂದು ತೆರೆದ ಚರಂಡಿಗೆ ರಸ್ತೆಯಲ್ಲಿ ಉರುಳಿಬಿದ್ದ ಘಟನೆ ನಗರದ ಹಳೆ ಪಿ.ಬಿ.ರಸ್ತೆ ಬಳಿಯಲ್ಲಿ ಸಂಭವಿಸಿದೆ.  ರಾಣೆಬೆನ್ನೂರು ಕಡೆಯಿಂದ ಬರುತ್ತಿದ್ದ ಟಾಟಾ ಏಸ್ ವಾಹನ (ಕೆಎ 17 ಡಿ 7508) ವು ಚಾಲಕನ ಆಯತಪ್ಪಿ ರಸ್ತೆ ಪಕ್ಕದ ತೆರೆದ ಚರಂಡಿಗೆ ಬಿದ್ದಿದೆ.




ಚಾಲಕನು ಸಣ್ಣ, ಪುಟ್ಟಗಾಯಗಳೊಂದಿಗೆ ಪಾರಾಗಿದ್ದು, ವಾಹನದ ಮುಂಬಾಗ ಜಖಂಗೊಂಡಿದೆ.

ಈ ರಸ್ತೆಯ ಎರಡೂ ಬದಿಯ ಚರಂಡಿ ಹಾಗು ರಸ್ತೆ ಸಮನಾಗಿಲ್ಲ. ರಸ್ತೆ ನಿರ್ಮಿಸಿ ಏಳೆಂಟು ವರ್ಷಗಳು ಕಳೆದರೂ ಅಧಿಕಾರಿಗಳು ಈ ಸಂಚರಿಸುವವರಿಗೆ ಸುರಕ್ಷತೆ ಒದಗಿಸದೆ ಇರುವುದರಿಂದ ವಾಹನ ಅಪಘಾತಕ್ಕೀಡಾಗುತ್ತಿವೆ ಎಂದು ಸ್ಥಳೀಯ ಆರೋಪಿಸಿದರು.



ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Share
Published by
ರಫ಼ಿ ರಿಪ್ಪನ್ ಪೇಟೆ

Recent Posts

ತಾಯಿ-ಮಗಳ ಜೀವ ಉಳಿಸಿದ ಮೂವರು ಯುವಕರಿಗೆ ಪೊಲೀಸ್ ಇಲಾಖೆಯಿಂದ ಗೌರವ ಸನ್ಮಾನ

ತಾಯಿ-ಮಗಳ ಜೀವ ಉಳಿಸಿದ ಮೂವರು ಯುವಕರಿಗೆ ಪೊಲೀಸ್ ಇಲಾಖೆಯಿಂದ ಗೌರವ ಸನ್ಮಾನ Three youths rescued a mother and…

36 minutes ago

Ranks Institute–ಜೆಸಿಐ ಹೊಸನಗರ ಡೈಮಂಡ್‌ ಆಯೋಜನೆಯಲ್ಲಿ ‘Gen Z Connect’ ಯಶಸ್ವಿ

ರ‍್ಯಾಂಕ್ಸ್ ಇನ್ಸ್ಟಿಟ್ಯೂಟ್–ಜೆಸಿಐ ಹೊಸನಗರ ಡೈಮಂಡ್‌ ಸಹಯೋಗದಲ್ಲಿ ‘Gen Z Connect’ ತರಬೇತಿ ಯಶಸ್ವಿ Ranks Institute–JCI Hosanagara Diamond Hosts…

21 hours ago

ಬೆಳ್ಳೂರು GHPSನಲ್ಲಿ ಸ್ವಾತಂತ್ರ್ಯ ಸಂಭ್ರಮ: ಶಾಲೆಗೆ ಕೊಡುಗೆಗಳ ಮಹಾಪೂರ!

ಬೆಳ್ಳೂರು GHPSನಲ್ಲಿ ಸ್ವಾತಂತ್ರ್ಯ ಸಂಭ್ರಮ: ಶಾಲೆಗೆ ಕೊಡುಗೆಗಳ ಮಹಾಪೂರ! Satish Ripponpete donated a TV to GHPS Bellur…

1 day ago

ಗರ್ತಿಕೆರೆಯಲ್ಲಿ ಮಾರಣಾಂತಿಕ ಹಲ್ಲೆ: ಅಟ್ಟಹಾಸ ಮೆರೆದಿದ್ದ ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು

ಗರ್ತಿಕೆರೆಯಲ್ಲಿ ಮಾರಣಾಂತಿಕ ಹಲ್ಲೆ: ಅಟ್ಟಹಾಸ ಮೆರೆದಿದ್ದ ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು Police arrest Raghavendra alias Apple Raghu…

1 day ago

ಅಕ್ರಮ ಗೋ ಸಾಗಾಟ ತಡೆಯಲು ಹೋದ ಬಜರಂಗದಳ ಕಾರ್ಯಕರ್ತರ ಮೇಲೆ ಭೀಕರ ಹಲ್ಲೆ – ಬಿ ವೈ ವಿಜಯೇಂದ್ರ ಆಕ್ರೋಶ

ಅಕ್ರಮ ಗೋ ಸಾಗಾಟ ತಡೆಯಲು ಹೋದ ಬಜರಂಗದಳ ಕಾರ್ಯಕರ್ತರ ಮೇಲೆ ಭೀಕರ ಹಲ್ಲೆ - ಬಿ ವೈ ವಿಜಯೇಂದ್ರ ಆಕ್ರೋಶ…

1 day ago

ಗರ್ತಿಕೆರೆಯಲ್ಲಿ ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ; ತಲೆಯ ಮೇಲೆ ಕಾಲಿಟ್ಟು ಅಟ್ಟಹಾಸ ಮೆರೆದ ಭೂಫ

ಗರ್ತಿಕೆರೆಯಲ್ಲಿ ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ; ತಲೆಯ ಮೇಲೆ ಕಾಲಿಟ್ಟು ಅಟ್ಟಹಾಸ ಮೆರೆದ ಭೂಫ A…

1 day ago