ಮಗನಿಗಾಗಿ ಮತ್ತೆ ಜೊತೆಯಾದ ತಂದೆ-ತಾಯಿ
ವಿಚ್ಚೇದನ ಪಡೆಯಲು ಮುಂದಾಗಿದ್ದ ತಂದೆ ಮತ್ತು ತಾಯಿಯನ್ನು ಅವರ 10ನೇ ತರಗತಿಯ ಮಗ ಒಂದು ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಶಿವಮೊಗ್ಗೆ ಜಿಲ್ಲೆ ಹೊಸನಗರ ತಾಲೂಕಿನ ಕಡೆಗದ್ದೆಯ ನಿವಾಸಿಗಳಾದ ಗಣೇಶಮೂರ್ತಿ ಮತ್ತು ಪೂರ್ಣಿಮಾ ದಂಪತಿ 17 ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿದ್ದರು.ಸಣ್ಣದಾದ ಮನಸ್ತಾಪದಿಂದಾಗಿ ಮೂರು ವರ್ಷದ ಹಿಂದೆ ತವರು ಸೇರಿದ್ದ ಪೂರ್ಣಿಮಾ ಮರಳಿ ಗಂಡನ ಮನೆಗೆ ಬಂದಿರಲಿಲ್ಲ. ಕಳೆದ ಮೂರು ವರ್ಷಗಳಿಂದ ದೂರ ಇದ್ದ ದಂಪತಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇತ್ತ…