Headlines

ವಿದ್ಯುತ್ ಸ್ಪರ್ಶದಿಂದ ಪತ್ನಿಯನ್ನು ರಕ್ಷಿಸಲು ಹೋದ ಪತಿ ಸಾವು – ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ರೈತನೊಬ್ಬನ ದುರ್ಮರಣ|Electric shock

ರಿಪ್ಪನ್‌ಪೇಟೆ : ವಿದ್ಯುತ್ ತಂತಿ ತುಳಿದು ರೈತನೋರ್ವ
ಸಾವನ್ನಪ್ಪಿರುವ ಘಟನೆ ಇಲ್ಲಿನ ಸಮೀಪದ ನಂಜವಳ್ಳಿ ಗ್ರಾಮದಲ್ಲಿ  ನಡೆದಿದೆ.

ಹರತಾಳು ಗ್ರಾಪಂ ವ್ಯಾಪ್ತಿಯ ಹರತಾಳು ಗ್ರಾಮದ ರೈತ ಶೇಷಗಿರಿ(45) ಮೃತ ದುರ್ದೈವಿಯಾಗಿದ್ದಾರೆ.


ಇಂದು ಬೆಳಗ್ಗೆ ಮನೆಯ ಬಳಿ ಶೇಷಗಿರಿ ರವರ ಪತ್ನಿ ಹೂ ಕೀಳಲು ಹೋದಾಗ ಅವರಿಗೆ ವಿದ್ಯುತ್ ಸ್ಪರ್ಶಿಸಿ ಕೂಗಿದ್ದಾರೆ ಕೂಡಲೇ ಅವರನ್ನು ರಕ್ಷಿಸಲು ಹೋದ ಶೇಷಗಿರಿ ರವರು ಪಾದರಕ್ಷೆ ಧರಿಸದೆ ವಿದ್ಯುತ್ ತಂತಿಯನ್ನು ತುಳಿದಿದ್ದಾರೆ.




ಮೂಲತಃ ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಗ್ರಾಮದ ಒಡ್ಡಿನಬೈಲು ನಿವಾಸಿಯಾದ ಇವರು ಈಚೆಗೆ ಜಮೀನು ಖರೀದಿಸಿ ಹರತಾಳು ಗ್ರಾಮದಲ್ಲಿ ವಾಸಿಸುತ್ತಿದ್ದರು.

ವಿದ್ಯುತ್ ತಂತಿ ತುಂಡಾಗಿ ಐಬಿಎಕ್ಸ್ ತಂತಿ ಬೇಲಿ ಮೇಲೆ ಬಿದ್ದಿರುವ ಬಗ್ಗೆ ಮೃತರು ವಿದ್ಯುತ್ ಇಲಾಖೆಗೆ ಮೂರು ಬಾರಿ ದೂರು ಸಲ್ಲಿಸಿದ್ದರು ಎನ್ನಲಾಗುತಿದ್ದು ಇಲಾಖೆಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದೆ.




ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.



About The Author

Leave a Reply

Your email address will not be published. Required fields are marked *

Exit mobile version