ನಿದ್ದೆ ಬರುತ್ತಿಲ್ಲಾ ಎಂದು ಪೊಲೀಸ್ ಇಲಾಖೆಯ 112 ಗೆ ಕರೆ ಮಾಡಿದ ಭೂಪ – ಒಂದು ಗೊರಕೆಯ ಸ್ವಾರಸ್ಯಕರ ಕಥೆ!!! ಇಲ್ಲಿ ನೋಡಿ….
ತೀರ್ಥಹಳ್ಳಿ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಆಪತ್ಕಾಲದಲ್ಲಿ ಡಯಲ್ 112 ಹಾಗೂ 100 ಸೇವೆ ಒದಗಿಸಿದೆ.ಆದರೆ ಇಲ್ಲೊಬ್ಬ ಭೂಪ ರಾತ್ರಿ ನಿದ್ದೆ ಬರ್ತಿಲ್ಲಾ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ಹೌದು, ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಮಾಳೂರು ಪಟ್ಟಣ ಈ ವಿಚಿತ್ರ ಪ್ರಕರಣಕ್ಕೆ ಸಾಕ್ಷಿಯಾಗಿದೆ. ‘ನಿದ್ದೆ ಬರ್ತಿಲ್ಲಾ ಸಾರ್..’ ಎಂದು ಮಧ್ಯರಾತ್ರಿ ತುರ್ತು ಸೇವೆ 112 ನಂಬರ್‌ಗೆ ಇಂಥದ್ದೊಂದು ಕರೆ ಬಂದಾಗ ಪೊಲೀಸರು ತಲೆ ಚಚ್ಚಿಕೊಳ್ಳುವುದೊಂದೇ ಬಾಕಿ….