Headlines

ಮತಾಂತರವಾಗುವಂತೆ ಪತ್ನಿಗೆ ಪತಿಯಿಂದ ಚಿತ್ರಹಿಂಸೆ – ತೀರ್ಥಹಳ್ಳಿ ಮೂಲದ ಖಾದರ್ ವಿರುದ್ದ ಪ್ರಕರಣ ದಾಖಲು|arrested

ವಿವಾಹಿತ ಹಿಂದೂ ಮಹಿಳೆಗೆ ವಿಚ್ಛೇದನ ಕೊಡಿಸಿ, ನಂತರ ಆಕೆಯನ್ನ ಮದುವೆಯಾಗಿ ಇದೀಗ ಮತಾಂತರವಾಗುವಂತೆ ಹಿಂಸೆ ನೀಡುತ್ತಿರುವ ಆರೋಪ ಮಹಿಳೆಯಿಂದ ಕೇಳಿಬಂದಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ ಅಬ್ದುಲ್ ಖಾದರ್ ಎಂಬಾತನ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಚಿತ್ರದುರ್ಗದ ಮಹಿಳಾ ಠಾಣೆಯ ಪೊಲೀಸರು ಎಫ್​ಐಆರ್ ದಾಖಲು ಮಾಡಿ, ಈ ಸಂಬಂಧ ತನಿಖೆ ಆರಂಭಿಸಿದ್ದಾರೆ.



ತೀರ್ಥಹಳ್ಳಿ ಮೂಲದ ಸಂತ್ರಸ್ತ ಮಹಿಳೆ ಹತ್ತು ವರ್ಷಗಳ ಹಿಂದೆಯೇ ಶ್ರೀನಿವಾಸ್ ಎಂಬುವವರನ್ನ ವಿವಾಹವಾಗಿದ್ದರು. ಹೊಟ್ಟೆಪಾಡಿಗಾಗಿ ತೀರ್ಥಹಳ್ಳಿಯಲ್ಲಿರುವ ಡಯಾಲಿಸಿಸ್ ಸೆಂಟರ್​ ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಅದೇ ಸೆಂಟರ್​ನಲ್ಲಿ ಅಬ್ದುಲ್ ಖಾದರ್ ಕೂಡ ಕೆಲಸ ಮಾಡುತ್ತಿದ್ದ. ಇಬ್ಬರೂ ಒಂದೇ ಕಡೆ ಇದ್ದರಿಂದ ಅವರಿಬ್ಬರ ನಡುವೆ ಸ್ನೇಹ ಚಿಗುರಿತ್ತು.

ಆ ಸ್ನೇಹ ಮುಂದೊಂದು ದಿನ ಪ್ರೀತಿಯಾಗಿ ಇಬ್ಬರೂ ಸಂಪರ್ಕದಲ್ಲಿದ್ದರು. ಇಬ್ಬರ ನಡುವಿನ ಪ್ರೀತಿ-ಪ್ರೇಮ ಬಳಿಕದಲ್ಲಿ ಶ್ರೀನಿವಾಸ್​ಗೆ ಡಿವೋರ್ಸ್ ನೀಡುವಂತೆ ಮಾಡಿತ್ತು.

 ಅದರಂತೆ 2020ರಲ್ಲಿ ಸಂತ್ರಸ್ತ ಮಹಿಳೆ ಗಂಡನಿಗೆ ಡಿವೋರ್ಸ್ ಕೊಟ್ಟು ಬಂದಿದ್ದಳು. ನಂತರ ಅಬ್ದುಲ್ ಖಾದರ್​ ಜೊತೆ ಮಹಿಳೆ ರಿಜಿಸ್ಟರ್ ಮದುವೆ ಆಗಿದ್ದಳು. ಮದುವೆ ಬಳಿಕ ಇಬ್ಬರೂ ಚಿತ್ರದುರ್ಗಕ್ಕೆ ಶಿಫ್ಟ್ ಆಗಿದ್ದರು. ಅದಾದ ನಂತರ ಇವರಿಬ್ಬರಿಗೂ ಒಂದು ಮಗು ಆಗಿತ್ತು. ಡೆಲಿವರಿ ನಂತರ ಆ ಮಹಿಳೆಗೆ ಖಾದರ್ ಟಾರ್ಚರ್ ನೀಡಲು ಶುರುಮಾಡಿದ್ದ ಎಂದು ಆರೋಪಿಸಲಾಗಿದೆ.



ನಿತ್ಯವೂ ಕುಡಿದು ಬಂದು ಧರ್ಮ ಹಾಗೂ ಜಾತಿ ನಿಂದನೆ ಮಾಡಿ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸಂತ್ರಸ್ತ ಮಹಿಳೆ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿ ನ್ಯಾಯ ಒದಗಿಸುವಂತೆ ಕೋರಿದ್ದಾರೆ.

Leave a Reply

Your email address will not be published. Required fields are marked *

Exit mobile version